ಹೆಜ್ಜೇನು ದಾಳಿ ಒರ್ವ ಸಾವು ಮೂವರಿಗೆ ಗಂಭೀರ ಗಾಯ ಆಸ್ಪತ್ರೆಗೆ ದಾಖಲು!

Spread the love

ಹೆಜ್ಜೇನು ದಾಳಿಯ ಕಾರಣದಿಂದಾಗಿ ಒರ್ವ ಸಾವು ಮೂವರಿಗೆ ಗಂಭೀರ ಗಾಯ ಆಸ್ಪತ್ರೆಗೆ ದಾಖಲು!

ಕುಣಿಗಲ್ ತಾಲ್ಲೂಕಿನ ಜೋಡಿಹೊಸಹಳ್ಳಿ ಗ್ರಾಮದಲ್ಲಿ ಬುಧವಾರ ಹೆಜ್ಜೇನು ದಾಳಿಯಿಂದ ಒರ್ವ ಸಾವನ್ನಪ್ಪಿದ್ದು ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ ಗ್ರಾಮದ ಶಿವರಾಮಯ್ಯ (70) ಹೆಜ್ಜೇನು ದಾಳಿಯಿಂದ ಸ್ಥಳದಲ್ಲಿ ಸಾವನ್ನಪ್ಪಿದ್ದು ಸರೋಜಮ್ಮ,ಸಾಕಮ್ಮ ಹಾಗೂ ಚಂದ್ರಪ್ಪ ಎಂಬುವವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಬುಧವಾರ ಮಧ್ಯಾಹ್ನ ಶಿವರಾಮಯ್ಯ ತಮ್ಮ ಮಾವಿನ ತೋಟದ ಬಳಿ ಹಸು ಮತ್ತು ಮೇಕೆಗಳನ್ನು ಮೇಯಿಸಲು ತೆರಳಿದ್ದವೇಳೆ ಹೆಜ್ಜೇನು ದಾಳಿ ನಡೆಸಿವೆ ಈ ವೇಳೆ ಸ್ಥಳದಲ್ಲಿ ಕುಸಿದುಬಿದ್ದು ಸಾವನ್ನಪ್ಪಿದರೆ ಅಕ್ಕಪಕ್ಕದ ತೋಟದಲ್ಲಿ ಹಸು ಹಾಗೂ ಮೇಕೆಗಳನ್ನು ಮೇಯಿಸುತ್ತಿದ್ದವರಿಗೂ ಹೇಜ್ಜೆನು ದಾಳಿಯಿಂದ ಗಂಭೀರ ಗಾಯಗಳಾಗಿವೆ ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ@publicnewskunigal