ಮಾರ್ಕೋನಹಳ್ಳಿ ಜಲಾಶಯ ಭರ್ತಿ ಹಿನ್ನೆಲೆ ಶಿಂಷಾ ನದಿ ಪಾತ್ರದ ಜನರಿಗೆ ಎಚ್ಚರಿಕೆ ವಹಿಸುವಂತೆ ಮನವಿ!

Spread the love

ಮಾರ್ಕೋನಹಳ್ಳಿ ಜಲಾಶಯ ಭರ್ತಿ ಹಿನ್ನೆಲೆ ಶಿಂಷಾ ನದಿ ಪಾತ್ರದ ಜನರಿಗೆ ಎಚ್ಚರಿಕೆ ವಹಿಸುವಂತೆ ತಹಶೀಲ್ದಾರ್ ಮನವಿ!

ಕುಣಿಗಲ್;-ತಾಲ್ಲೂಕಿನ ಇತಿಹಾಸ ಪ್ರಸಿದ್ದ ಮಾರ್ಕೋನಹಳ್ಳಿ ಜಲಾಶಯ ಬುಧವಾರ ಭರ್ತಿಯಾಗಿದೆ ಜಲಾಶಯಕ್ಕೆ ನೀರಿನ ಒಳ ಹರಿವು 2400 ಕ್ಯೂಸೆಕ್ ನಷ್ಟು ಇದ್ದು ಜಲಾಶಯದ ಕೊಡಿಯಲ್ಲಿರುವ ಆಟೊಮ್ಯಾಟಿಕ್ ಸೈಪನ್ ಗಳ ಮೂಲಕ ಸುಮಾರು 3500 ಕ್ಯೂಸೆಕ್ ನಷ್ಟು ನೀರನ್ನು ಶಿಂಷಾನದಿಗೆ ಹರಿಸಲಾಗುತ್ತಿದ್ದು ಹೊರ ಹರಿವು ಹೆಚ್ಚಾಗುವ ಸಾಧ್ಯತೆಗಳಿರುವ ಕಾರಣ ಶಿಂಷಾನದಿ ಪಾತ್ರದ ಗ್ರಾಮಗಳಿಗೆ ನೀರು ನುಗ್ಗುವ ಸಂಭವವಿರುವುದರಿಂದ ಮಾರ್ಕೋನಹಳ್ಳಿ ಜಲಾಶಯದ ವ್ಯಾಪ್ತಿಯಲ್ಲಿ ಬರುವ

ಮಾರ್ಕೋನಹಳ್ಳಿ,ಕಾಡಶೇಟ್ಟಹಳ್ಳಿ,ಬಿಸಿನೆಲೆ,ತೊರೆಹಳ್ಳಿ,ಶ್ಯಾನುಭೋಗನಹಳ್ಳಿ,ಕಿರಂಗೂರು,ಪಡುವಗೆರೆ,ಬೆಟ್ಟಹಳ್ಳಿ,ದೊಡ್ಡಕಲ್ಲಳ್ಳಿ,ವಳಗೆರೆಪುರ,ಚಂದನಹಳ್ಳಿ,ಹಂಚೀಪುರ,ಕೀಲಾರ,ಉಂಗ್ರ,ತೊರೆಬೊಮ್ಮನಹಳ್ಳಿ,ಕೋಡವತ್ತಿ,ಹನುಮಂತಪುರ,ಸೆರಿದಂತೆ ಶಿಂಷಾನದಿ ಪಾತ್ರದಲ್ಲಿ ಬರುವ ಗ್ರಾಮಗಳ ಗ್ರಾಮಸ್ಥರು ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಹೆಮಾವತಿ ನಾಲ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ತಾಲ್ಲೂಕು ದಂಡಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ @publicnewskunigal