ಮಕ್ಕಳಲ್ಲಿ ಇರುವ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ ಫ್ರೌಡಶಾಲೆ ಮುಖ್ಯ ಶಿಕ್ಷಕ ಸಿ,ವೀರಣ್ಣ!
ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ವ್ಯಾಪ್ತಿಯ ಹೊಸೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಅವರಣದಲ್ಲಿ ಗುರುವಾರ ಪ್ರಾಥಮಿಕ ಹಾಗೂ ಫ್ರೌಡಶಾಲೆಗಳ ಹೊಬಳಿ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಅಮ್ಮಿಕೋಳ್ಳಲಾಗಿತ್ತ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು ಫ್ರೌಡಶಾಲೆಯ ಮುಖ್ಯ ಶಿಕ್ಷಕ ಸಿ,ವೀರಣ್ಣ ಮಾತನಾಡಿ ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಕಾರ್ಯಕ್ರಮ ಒಂದು ಉತ್ತಮ ವೇದಿಕೆ ಮಕ್ಕಳು ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣ ಮಾಡಲು ಇಂತಹ ವೇದಿಕೆಗಳು ಬೇಕು ಯಾವ ಯಾವ ಮಕ್ಕಳಲ್ಲಿ ಯಾವ ಯಾವ ಪ್ರತಿಭೆ ಇದೆ ಎಂಬುದನ್ನು ಗುರುತಿಸಲು ಇಂತಹ ವೇದಿಕೆಗಳಿಂದ ಸಾಧ್ಯ ಪಾಠ ಪ್ರವಚನಗಳ ನಡುವೆ ಮಕ್ಕಳು
ಕಲೆ, ಸಾಹಿತ್ಯ,ಜನಪದಗೀತೆ,ಕಂಠಪಾಠ,ಧಾರ್ಮಿಕ ಪಠಣ,ಪದ್ಯ ಕವನವಾಚನ,ಮಿಮಿಕ್ರಿ,ಚರ್ಚಸ್ಪರ್ಧೆ,ರಸಪ್ರಶ್ನೆ,ಚದ್ಮವೇಷ,ಗಳಂತಹ ಚಟುವಟಿಕೆಯಲ್ಲಿ ತೊಡಗುವ ಮೂಲಕ ಕ್ರಿಯಾಶೀಲ ಆಸಕ್ತಿ ರೂಢಿಸಿಕೊಳ್ಳಬೇಕಿದೆ ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಶಿಕ್ಷಕರು ಗುರುತಿಸುವ ಕೆಲಸ ಮಾಡುವುದರ ಜೋತೆಗೆ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕಿದೆ ಎಂದರು ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿವಿಧ ಸ್ಪರ್ಧೆಗಳಲ್ಲಿ ಜಯಗಳಿಸಿದ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು ಕಾರ್ಯಕ್ರಮದಲ್ಲಿ ಯಲಿಯೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಸಮೀವುಲ್ಲ,ಹಾಲುವಾಗಿಲ ಗ್ರಾಮ ಪಂಚಾಯಿತಿ ಸದಸ್ಯ ಕೆಂಪಯ್ಯ,ಎಸ್,ಡಿ,ಎಂ,ಸಿ ಅಧ್ಯಕ್ಷ ಉಪೇಂದ್ರ,ಶಿಕ್ಷಕರಾದ ಧನಂಜಯ್,ಬಿ,ಆರ್,ಗಂಗಾಧರ್,ಜೀವೆಂದರ್ ಕುಮಾರ್ ಸೇರಿದಂತೆ ಮಕ್ಕಳು ಹಾಗೂ ಸ್ಥಳಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು @publicnewskunigal