ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಗೆ ಆರು ವಾರಗಳ ಮಧ್ಯಾಂತರ ಜಾಮೀನು ನೀಡಿ ಹೈಕೋರ್ಟ್ ಆದೇಶಿದೆ!
ಬೆಂಗಳೂರು;-ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ (A2) ಆರೋಪಿಯಾಗಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರುವ ಚಿತ್ರನಟ ದರ್ಶನ್ ಗೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿ ಆದೇಶ ಮಾಡಿದೆ ಅನಾರೋಗ್ಯ ಆಧಾರದ ಮೇಲೆ ಆರು ವಾರಗಳ ಕಾಲ ಜಾಮೀನು ನೀಡಿದ್ದು 131 ದಿನಗಳ ಬಳಿಕ ದರ್ಶನ್ ಜೈಲಿನಿಂದ ಹೊರಬರಲಿದ್ದಾರೆ ಅಕ್ಟೋಬರ್ (29) ಮಂಗಳವಾರ ದಂದು ನಟ ದರ್ಶನ್ ಪರವಾಗಿ ಮಂಡಿಸಿದ ವಾದವನ್ನು ಆಲಿಸಿದ ನ್ಯಾಯಪೀಠ ಬಳಿಕ ಆಕ್ಟಿವ (30) ಬುಧವಾರಕ್ಕೆ ತೀರ್ಪು ಕಾಯ್ದಿರಿಸಿತ್ತು ಇಂದು ಬೆಳಿಗ್ಗೆ 10.30 ಕ್ಕೆ ತೀರ್ಪು ಪ್ರಕಟಿಸಿದ ಹೈಕೋರ್ಟ್ ಆರು ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿದೆ ಇದರಿಂದ ಅಭಿಮಾನಿಗಳಿಗೆ ಸಂತಸ ತಂದಿದೆ
ದರ್ಶನ್ ಪರ ವಕೀಲ ಸಿ,ವಿ ನಾಗೇಶ್ ಮಂಡಿಸಿದ ವಾದ (ಅರ್ಜಿದಾರರು ದೇಹದಲ್ಲಿ ಸಮರ್ಪಕವಾಗಿ ರಕ್ತ ಪರಿಚಲನೆ ಆಗುತ್ತಿಲ್ಲ ಪಾದಗಳಲ್ಲಿ ಮಾರಗಟ್ಟುವಿಕೆ ಇದೆ ಡಿಸ್ಕ್ ಸಮಸ್ಯೆ ಇದೆ ಕಾಲಿನಲ್ಲಿ ನರದ ತೊಂದರೆ ಉಂಟಾಗಿದ್ದು ಈಗಾಗಲೇ ಸ್ವಲ್ಪಮಟ್ಟಿಗೆ ಪಾದಸ್ಪರ್ಶ ಕಳೆದುಕೊಂಡಿದ್ದಾರೆ ಈಗಿರುವಾಗ ಸೂಕ್ತ ಚಿಕಿತ್ಸೆ ನೀಡುವಲ್ಲಿ ವಿಫಲವಾದರೆ ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತಕ್ಕೆ ಎಡೆ ಮಾಡಿಕೊಡಬಹುದೆಂದು ವೈದ್ಯಕೀಯ ವರದಿಯನ್ನು ಉಲ್ಲೇಖಸಿ ದರ್ಶನ್ ಅವರು ಪಾರ್ಶುವಾಯಕ್ಕೆ ತುತ್ತಾಗುವ ಸಾಧ್ಯತೆ ಅಧಿಕವಾಗಿ ಇರುವುದರಿಂದ ಚಿಕಿತ್ಸೆಗೆ ಒಳಗಾಗಬೇಕು ಎಂದಿದ್ದಾರೆ ಇವೆಲ್ಲವನ್ನು ಗಮನಿಸಿ ಮಧ್ಯಂತರ ಜಾಮೀನು ನೀಡಬೇಕು ಎಂದು ಮಾನವಿ ಮಾಡಿದರು)
ಸರ್ಕಾರದ ಪರ ವಕೀಲ ಪ್ರಸನ್ನ ಕುಮಾರ್ ವಾದ ಮಂಡಿಸಿ ವೈದ್ಯಕೀಯ ವರದಿಯಲ್ಲಿ ಪಾರ್ಶುವಾಯಿಗೆ ತುತ್ತಾಗುತ್ತಾರೆ ಎಂದು ವೈದ್ಯರು ಅಂದಾಜಿಸಿದ್ದಾರೆ ಅಷ್ಟೆ ಎಂದರು ಈ ವೇಳೆ ಮಧ್ಯ ಪ್ರವೇಶಿಸಿದ ನ್ಯಾಯ ಪೀಠ ನಿಮ್ಮ ಮಾತಿನ ಅರ್ಥವೇನು ಅರ್ಜಿದಾರರು ಅನಾರೋಗ್ಯದಿಂದ ಅಂತಿಮ ಅಂತ್ಯಕ್ಕೆ ತಲುಪವರೆಗೆ ಕಾಯಬೇಕು ಎನ್ನುವುದೇ ಎಂದು ಪ್ರಶ್ನಿಸಿತು ತದನಂತರ ಸರ್ಕಾರಿ ಪರ ವಕೀಲ ಉದ್ದೇಶಿಸಿ ನೋಡಿ ಆರೋಗ್ಯ ಎಂಬುದು ಮಾನವನ ಮೂಲಭೂತ ಹಕ್ಕು ವ್ಯಕ್ತಿ ಆರೋಪಿಯಾಗಿರಲಿ ಅಪರಾಧಿಯಾಗಿರಲಿ ಆರೋಗ್ಯ ಎಂಬುದು ಪ್ರಮುಖವಾಗಿರುತ್ತದೆ ಈ ರೀತಿ ನಿರ್ಲಕ್ಷ ಮಾಡುವುದು ಸರಿಯಲ್ಲ ಇದನ್ನು ಸುಪ್ರೀಂ ಕೋರ್ಟ್ ಸಹ ಹಲವು ವೇಳೆ ಪುನರುಚ್ಚಿಸಿದೆ ಎಂದಿತು ವಾದ ಪ್ರತಿವಾದ ಆಲಿಸಿದ ನ್ಯಾಯ ಪೀಠ ಇಂದು ಬೆಳಿಗ್ಗೆ ತೀರ್ಪು ಪ್ರಕಟಿಸಿದೆ ಆರು ವಾರಗಳ ಕಾಲ ಮಧ್ಯಾಂತರ ಜಾಮೀನು ನೀಡಿ ಆದೇಶದ ಮಾಡಿದೆ @publicnewskunigal