ಬೋನಿಗೆ ಬಿದ್ದ ಚಿರತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕಣ್ಣೆದುರೇ ಚಳ್ಳೆಹಣ್ಣು ತಿನ್ನಿಸಿ ಪರಾರಿ|leopard eskep
ಕುಣಿಗಲ್;-ತಾಲ್ಲೂಕಿನ ಹುತ್ರಿದುರ್ಗ ವ್ಯಾಪ್ತಿಯ ಸೀನಪ್ಪನಹಳ್ಳಿ ಗ್ರಾಮದಲ್ಲಿ ಹಲವು ದಿನಗಳಿಂದ ಚಿರತೆಯ ಉಪಟಳ ಹೆಚ್ಚಿತ್ತು ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡದಿ ಹಿನ್ನೆಲೆ ಚಿರತೆ ಸೆರೆ ಹಿಡಿಯುವ ಸಲುವಾಗಿ ಅರಣ್ಯ ಇಲಾಖೆಯ ವತಿಯಿಂದ ಬೋನನ್ನು ಅಳವಡಿಸಲಾಗಿತ್ತು ಗುರುವಾರ ಬೋನಿನಲ್ಲಿ ಚಿರತೆ ಸೆರೆಯಾಗಿತ್ತು ಇದನ್ನು ಗಮನಿಸಿದ ಸ್ಥಳಿಯರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬೋನನ್ನು ಸ್ಥಳಾಂತರಿಸುವ ವೇಳೆ ಬೋನಿನ ತಳಬಾಗದಲ್ಲಿ ಇದ್ದ (trigger lock) ಜಾಗದಲ್ಲಿ ಚಿರತೆ ನುಗ್ಗಿ ಪರಾರಿಯಾಗಿದೆ
ಕುತೂಹಲದಿಂದ ಚಿರತೆ ನೊಡಲು ಬಂದಿದ್ದ ಸ್ಥಳಿಯ ಮಂದಿ ಚಿರತೆ ಬೋನಿನಿಂದ ಹೊರ ಬಂದ ತಕ್ಷಣ ಕಕ್ಕಬಿಕ್ಕಿಯಾಗಿ ಒಡಿ ಹೋಗಿದ್ದಾರೆ ಇತ್ತ ಚಿರತೆ ಬದುಕಿತೆ ಬಡ ಜೀವ ಎಂದು ನಿಟ್ಟುಸಿರು ಬಿಟ್ಟು ಕಾಡು ಸೇರಿದೆ ಇನ್ನೂ ಬೋನಿನಲ್ಲಿದ್ದ ಚಿರತೆಯನ್ನು ಸಾಗಿಸಲು ಬಂದಿದ್ದ ವಾಹನಕ್ಕೆ ಬೋನನ್ನು ಎತ್ತಿ ಇಡುವ ಸಂಧರ್ಭದಲ್ಲಿ ತಳಬಾಗದಲ್ಲಿದ್ದ (trigger lock) ಕಳಚಿಕೊಂಡಿದೆ ಸಿಕ್ಕ ಜಾಗದಲ್ಲೆ ನುಸುಳಿದ ಚಿರತೆ ಕ್ಷಣಾರ್ಧದಲ್ಲಿ ಪರಾರಿಯಾಗಿದೆ
ಜಾಗರೂಕತೆಯಿಂದ ಇರಬೇಕಿದ್ದ ಅಧಿಕಾರಿಗಳು ಚಿರತೆಯನ್ನು ಕಣ್ಣೆದುರೇ ಒಡಿಹೋಗಲು ಬಿಟ್ಟು ಪೇಚಿಗೆ ಸಿಲುಕಿದ್ದಾರೆ ಇದೆಲ್ಲವನ್ನು ಗಮನಿಸಿದ ಸ್ಥಳಿಯರು ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಕಾರಣದಿಂದ ಚಿರತೆ ತಪ್ಪಿಸಿಕೊಂಡಿದ್ದು ತಕ್ಷಣ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ,ಬಳಿಕ ಸ್ಥಳಕ್ಕೆ ಬಂದ ವಲಯ ಅರಣ್ಯಧಿಕಾರಿ ಜಗದೀಶ್,ಪಿ ಕಳಚಿಹೊಗಿದ್ದ (trigger lock) ಸರಿಪಡಿಸಿ ಚಿರತೆ ಸೆರೆಗೆ ಮತ್ತೊಂದು ಬೋನನ್ನು ಅಳವಡಿದ್ದಾರೆ @publicnewskunigal