ಪಟ್ಟಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ೬೯ನೇ ಕನ್ನಡ ರಾಜ್ಯೋತ್ಸವ ಆಚರಣೆ!

Spread the love

ಕುಣಿಗಲ್;-ಪಟ್ಟಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪತ್ರಕರ್ತ ಎಚ್,ಎಮ್ ಅಶೋಕ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹತ್ತು ಮಂದಿಗೆ ತಾಲ್ಲೂಕು ಆಡಳಿತದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು,

ಕುಣಿಗಲ್ ಪಟ್ಟಣದ ಜಿಕೆಬಿಎಂಎಸ್ ಶಾಲಾ ಮೈದಾನದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಶುಕ್ರವಾರ ಅಮ್ಮಿಕೋಳ್ಳಲಾಗಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಚ್,ಡಿ ರಂಗನಾಥ್ ನಾಡಿನ ಇತಿಹಾಸ ಪರಂಪರೆ ಸಂಸ್ಕೃತಿ ಹಾಗೂ ಕನ್ನಡ ಭಾಷೆಯನ್ನ ಪ್ರತಿಯೊಬ್ಬರು ಅಳವಡಿಸಿಕೊಂಡು ಮಾತೃಭಾಷೆಯನ್ನು ಗೌರವಿಸಿ ಮಾತನಾಡುವ ಮೂಲಕ ಕನ್ನಡದ ಹಿರಿಮೆಯನ್ನು ಬೆಳೆಸಬೇಕು ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳು ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಅವಶ್ಯಕತೆ ಆ ಭಾಷೆಗಳನ್ನು ಮಾತನಾಡಿದರು ಕನ್ನಡ ಭಾಷೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಹಿರಿಯರು ಸಾಹಿತಿಗಳು ಹೋರಾಟಗಾರರು ಕನ್ನಡ ನಾಡು ನುಡಿ ಭಾಷೆಗೆ ದುಡಿದಂತಹ ಪ್ರತಿಯೊಬ್ಬ ಕನ್ನಡಿಗರನು ಸ್ಮರಿಸುವ ಮೂಲಕ ವರ್ಷಕ್ಕೊಮ್ಮೆ ರಾಜ್ಯೋತ್ಸವ ಆಚರಿಸುವ ಬದಲು ಕನ್ನಡ ನಿತ್ಯೋತ್ಸವ ಆಗಬೇಕು ಅನ್ಯ ಭಾಷೆ ಕಲಿಯುವ ಮೂಲಕ ಕನ್ನಡ ಭಾಷೆಯನ್ನು ಉಳಿಸಿ ಪೋಷಣೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗರಲ್ಲಿ ಇದ್ದು 2000 ವರ್ಷಗಳ ಇತಿಹಾಸವುಳ್ಳ ಕನ್ನಡ ಭಾಷೆಯನ್ನ ಉಳಿಸಿ ಬೆಳೆಸುವಂತಹ ಕಾರ್ಯ ಪ್ರತಿಯೊಬ್ಬ ಕನ್ನಡಿಗನು ಮೈಗೂಡಿಸಿಕೊಳ್ಳಬೇಕು ಎಂದರು

ತಹಶೀಲ್ದಾರ್ ಹಾಗೂ ತಾಲ್ಲೂಕು ದಂಡಾಧಿಕಾರಿ ರಶ್ಮಿ,ಯು ದ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ ಶತಶತಮಾನಗಳ ಗಳಿಂದಲೂ ಕನ್ನಡ ಭಾಷೆ ಜ್ಞಾನ ಸಂಸ್ಕೃತಿ ಉಳಿದಿದ್ದು ಕನ್ನಡ ಶಾಲೆಯಲ್ಲಿ ಕಲಿತ ಮಕ್ಕಳು ಕಲಿಸಿದ ಶಿಕ್ಷಕರು ಮಾತನಾಡುವ ಸರ್ಕಾರಿ ನೌಕರರು ಕನ್ನಡ ಭಾಷಾಭಿಮಾನ ಬೆಳೆಸುವುದರೊಂದಿಗೆ ಕನ್ನಡದ ಹಿರಿಮೆಯನ್ನು ಸಾರಬೇಕಾಗಿದೆ ಎಂದರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದಂತಹ ಪತ್ರಿಕಾ ರಂಗ ಹಾಗೂ ಸಮಾಜ ಸೇವೆಗೆ ಪ್ರಶಸ್ತಿ ಸ್ವೀಕರಿಸಿದ ಎಚ್,ಎಮ್ ಅಶೋಕ್,ವೈ ವಿ ಚಿಕ್ಕ ವೆಂಕಟಯ್ಯ, ಸಿದ್ದಬಸ್ವಯ್ಯ, ಹುಲಿಯೂರುದುರ್ಗ ಲಕ್ಷ್ಮೀನಾರಾಯಣ,ನಳಿನ ಕೃಷ್ಣಪ್ಪ ಸಾಹಿತ್ಯ ಹಾಗೂ ಶಿಕ್ಷಣ,ಕುಣಿಗಲ್ ವಿಷ್ಣು ಬಾಲಕಲಾವಿದ, ಮಂಜುನಾಥ್ ಎಂ ವಿ ಸಮಾಜ ಸೇವೆ ರಂಗಭೂಮಿ,ಕೆ ಎಂ. ನಾರಾಯಣ ಚಿತ್ರ ಕಲಾವಿದ, ನಂಜುಂಡಯ್ಯ ಸಹಕಾರ, ನಾರಾಯಣ್ ನಿವೃತ ತಹಸಿಲ್ದಾರ್, ದಿಲೀಪ ಅಂಗಾಂಗ ದಾನಿ, ಪುರುಷೋತ್ತಮ್ ಕಲೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವಿ ಸಲ್ಲಿಸಿದ ಇವರುಗಳನ್ನು ಶಾಸಕ ಡಾಕ್ಟರ್ ರಂಗನಾಥ್ ಸನ್ಮಾನಿಸಿದರು.ವಿವಿಧ ಶಾಲೆ ಹಾಗು ಇಲಾಖೆಗಳಿಂದ ಸ್ತಬ್ಧ ಮೆರವಣಿಗೆ ಚಿತ್ರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು,ಸಾಹಿತ್ಯ ಪರಿಷತ್ ಅಧ್ಯಕ್ಷ ಕಪನಿ ಪಾಳ್ಯ ರಮೇಶ್, ಪುರಸಭಾ ಸದಸ್ಯರು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು @publicnewskunigal

Leave a Reply

Your email address will not be published. Required fields are marked *