ಕಂದಾಯ ಇಲಾಖೆ ಮತ್ತು ಭೂಮಾಪನ ಇಲಾಖೆ ವತಿಯಿಂದ ಕೆ,ಹೊನ್ನಮಾಚನಹಳ್ಳಿ ಗ್ರಾಮದಲ್ಲಿ ಪೋಡಿ ಮುಕ್ತ ಗ್ರಾಮ ಅಭಿಯಾನಕ್ಕೆ ಚಾಲನೆ!
ಕುಣಿಗಲ್;-ತಾಲ್ಲೂಕಿನ ಅಮೃತೂರು ವ್ಯಾಪ್ತಿಯ ಕೆ,ಹೊನ್ನಮಾಚನಹಳ್ಳಿ ಗ್ರಾಮದಲ್ಲಿ ಮಂಗಳವಾರ ಕಂದಾಯ ಇಲಾಖೆ ಹಾಗೂ ಭೂಮಾಪನ ಇಲಾಖೆಯ ವತಿಯಿಂದ ಪೊಡಿಮುಕ್ತ ಗ್ರಾಮ ಅಭಿಯಾನ ಕ್ರಾರ್ಯಕ್ರಮಕ್ಕೆ ಗ್ರಾಮದಲ್ಲಿ ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕ ತೋಂಟರಾಧ್ಯ ಚಾಲನೆ ನೀಡಿ ಬಳಿಕ ಮಾತನಾಡಿ ಅವರು ಸರ್ಕಾರ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಯಾವುದೇ ಶುಲ್ಕವನ್ನು ಕಟ್ಟದೆ ಉಚಿತವಾಗಿ ಪೋಡಿ ಮಾಡಿಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಖಾತೆ ಹೊಂದಿರುವ ರೈತರು ಸಣ್ಣಪುಟ್ಟ ಸಮಸ್ಯೆಗಳಿದ್ದಲ್ಲಿ ಸ್ಥಳದಲ್ಲಿ ಪರಿಹರಿಸಿಕೊಂಡು ಸರ್ವೆಯರ್ ಗಳೊಂದಿಗೆ ಸಹಕಾರ ನೀಡಿ ಯಾವುದೇ ಹಣಕಾಸು ಖರ್ಚು ಇಲ್ಲದೆ ಪೋಡಿ ಮಾಡಿಸಿಕೊಳ್ಳುವಂತೆ ರೈತರಿಗೆ ತೀಳಿಸಿದರು ಇನ್ನೂ ಗ್ರಾಮದ ಹೆಚ್,ಜಿ ರಮೇಶ್ ರವರು ಹಲವು ದಿನಗಳಿಂದ ಈ ಬಗ್ಗೆ ಮನವಿ ಸಲ್ಲಿಸಿದ ಹಿನ್ನೆಲೆ ಗ್ರಾಮದಲ್ಲಿ ಪೊಡಿಮುಕ್ತ ಗ್ರಾಮ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಅಣ್ಣ ತಮ್ಮಂದಿರು ವಿಭಾಗ ಮಾಡಿಕೊಂಡಾಗ ಕೇವಲ ಅರ್ಧ ಗುಂಟೆ ಒಂದು ಗುಂಟೆ ವ್ಯತ್ಯಾಸವಿದ್ದಲ್ಲಿ ನೀವೇ ಸ್ಥಳದಲ್ಲಿ ಕೂತು ಬಗೆಹರಿಸಿಕೊಂಡು ಅಧಿಕಾರಿಗಳಿಗೆ ತಿಳಿಸಿದರೆ ಒಂದು ಪಹಣಿಯಲ್ಲಿ ಇರುವ ಹಲವು ಮಾಲೀಕರನ್ನು ವಿಭಜನೆ ಮಾಡಿ ಒಬ್ಬೊಬ್ಬ ಮಾಲಿಕರಿಗೂ ಒಂದೊಂದು ಪಹಣಿಯನ್ನು ಬರುವ ರೀತಿಯಲ್ಲಿ ಮಾಡಿಕೊಡಲಾಗುತ್ತದೆ
ಈ ಗ್ರಾಮದಲ್ಲಿ ಸುಮಾರು ಇದೇ ರೀತಿಯಾಗಿ ಜಂಟಿಯಾಗಿರುವ 315 ಪಹಣಿಗಳನ್ನು ವಿಭಜನೆ ಮಾಡಲು ಈಗಾಗಲೇ ಹಲವಾರು ಸರ್ವೇಯರ್ಗಳಿಗೆ ಆದೇಶ ನೀಡಲಾಗಿದೆ ತಮ್ಮ ಬಳಿ ಇರುವ ದಾಖಲೆಗಳನ್ನು ತೋರಿಸಿ ಪೋಡಿ ಮುಕ್ತ ಗ್ರಾಮಕ್ಕೆ ಎಲ್ಲಾ ರೈತರು ಸಹಕಾರ ನೀಡಬೇಕೆಂದು ಕೋರಿದರು ಅದೇ ಸಂದರ್ಭದಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರು ವೇದಿಕೆಯ ಸಂಸ್ಥಾಪಕ ಅಧ್ಯಕ್ಷರು ಮಾತನಾಡಿ ನಮ್ಮ ಗ್ರಾಮದ ರೈತರ ಅನುಕೂಲಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಏನಿಲ್ಲವೆಂದರೂ ಒಂದು ಕೋಡಿಗೆ ಸರ್ಕಾರಕ್ಕೆ 1500 ಕಟ್ಟಬೇಕಿತ್ತು ಅನೇಕ ಶ್ರೀಮಂತರು ಈಗಾಗಲೇ ಪೋಡಿ ಮಾಡಿಸಿಕೊಂಡಿದ್ದಾರೆ ಹಲವಾರು ಬಡ ರೈತರು ಹಣಕಾಸು ಸಮಸ್ಯೆಯಿಂದ ಹಾಗೂ ಓಡಾಡಲು ಸಮಯದ ಅಭಾವದಿಂದ ಮತ್ತು ವಯಸ್ಸಾಗಿರುವ ಹಿರಿಯರಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ ಹಣ ಕಟ್ಟಿ ಹಲವಾರು ತಿಂಗಳುಗಳ ಕಾಲ ಕಾಯ್ದು ಜಮೀನಿನ ಪೋಡಿ ದಾಖಲೆ ಮಾಡಿಸಿಕೊಳ್ಳಬೇಕಿತ್ತು ಈಗ ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮದಲ್ಲೇ ಬಂದು ಗ್ರಾಮಸ್ಥರ ಮುಂದೆಯೇ ಓಡಿ ದಾಖಲೆಯನ್ನು ಮಾಡಿ ಕೊಟ್ಟು ಅನುಕೂಲ ಕಲ್ಪಿಸುತ್ತಿದ್ದಾರೆ ಹೀಗಾಗಿ ಎಲ್ಲರೂ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು
ಈ ಸಂದರ್ಭದಲ್ಲಿ ಸರ್ವೆ ಸೂಪರ್ವೈಸರ್ ಬೋರೇಗೌಡ ಮತ್ತು ಪುಟ್ಟರಾಜು ಅಮೃತೂರು ಕಂದಾಯ ಅಧಿಕಾರಿ ರವಿ ಗ್ರಾಮ ಆಡಳಿತಾಧಿಕಾರಿ ನಾರಾಯಣ್ ಹಾಗೂ ಸರ್ವೆಯರ್ ಗಳು ಮತ್ತು ರೈತರು ಉಪಸಿತರಿದ್ದರು @publicnewskunigal