
Bangalore|ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಎಸ್,ಹೆಚ್,ಲಿಂಗೇಗೌಡ ಗುಜರಾತಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ!
ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರ ಆರೋಪದ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿ ರವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ಮಂಗಳೂರಿನಿಂದ ದೆಹಲಿಗೆ ಐದು ಜನರ ತಂಡ ಪಾದಯಾತ್ರೆ ಹೊರಟಿತ್ತು
ಡಿಸೆಂಬರ್ 11ರ ಬುಧವಾರ ಪಾದಯಾತ್ರೆ 55ನೇ ದಿನಕ್ಕೆ ಗುಜರಾತಿನ ಭರೂಚ್ ಎನ್ನುವ ನಗರ ತಲುಪಿತ್ತು ಪಾದಯಾತ್ರೆಯಲ್ಲಿದ್ದವರಿಗೆ ನೈತಿಕ ಬೆಂಬಲ ನೀಡುವ ನಿಟ್ಟಿನಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಾಧ್ಯಕ್ಷ ಎಸ್,ಹೆಚ್ ಲಿಂಗೇಗೌಡ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು ಪಾದಯಾತ್ರಿಗಳು ಗುಜರಾತ್ ನ ಭೂರೂಚ್ ನಗರದ ಬಳಿಯ ಹೆದ್ದಾರಿಯ ರಸ್ತೆಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಯಾತ್ರಿಗಳ ಮೇಲೆ ಅತಿ ವೇಗವಾಗಿ ಬಂದ ಲಾರಿಯೊಂದು ಹರಿದು KRS ಪಕ್ಷದ ಕಾರ್ಯಾಧ್ಯಕ್ಷ ಎಸ್,ಎಚ್,ಲಿಂಗೇಗೌಡ ಮತ್ತು ಮಂಗಳೂರಿನ ಕೂಂಜಿ ಮೂಸಾ ಎಂಬುವವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ

ಮೂಲತಹ ಮಂಡ್ಯ ಜಿಲ್ಲೆಯವರಾದ ಎಸ್,ಹೆಚ್ ಲಿಂಗೇಗೌಡ ರವರು 2012-13 ರಿಂದ 2015 ರ ವರೆಗೆ ಕುಣಿಗಲ್ ನ ಅಬಕಾರಿ ಇಲಾಖೆಯಲ್ಲಿ ನಿರೀಕ್ಷಕರಾಗಿ ಸೇವೆ ಸಲ್ಲಿಸಿದ್ದು 18-03-2015 ರಂದು ಕರ್ತವ್ಯಕ್ಕೆ ರಾಜೀನಾಮೆ ಸಲ್ಲಿಸಿ ಸ್ನೇಹಿತ ಹಾಗೂ IAS ಅಧಿಕಾರಿ ಡಿ,ಕೆ ರವಿಯವರ ಸಾವಿನ ತನಿಖೆಯನ್ನು CBI ಗೆ ವಹಿಸುವಂತೆ ಒತ್ತಾಯಿಸಿ ದೊಡ್ಡಕೊಪ್ಪಲು ಗ್ರಾಮದ ಡಿ,ಕೆ ರವಿ ಯವರ ಸಮಾಧಿ ಬಳಿಯಿಂದ ರಾಜ ಭವನದ ವರೆಗೆ ಪಾದಯಾತ್ರೆ ನಡೆಸಿದ್ದ ಹೆಚ್,ಎಸ್ ಲಿಂಗೇಗೌಡ ಅವರು ರೈತಸಂಘ ಹಾಗೂ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಸೆರಿದಂತೆ ಹಲವು ಜನಪರ ಹೋರಾಟಗಳಲ್ಲಿ ಭಾಗಿಯಾಗಿದ್ದರು 2019 ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕೆ,ಆರ್,ಎಸ್ ಪಕ್ಷದಿಂದ ಸ್ಪರ್ಧಿಸಿದ್ದರು ಹೆಚ್,ಎಸ್ ಲಿಂಗೇಗೌಡ ನಿಧನಕ್ಕೆ ಸಂಘ ಸಂಸ್ಥೆ ಸೆರಿದಂತೆ ಕೆ,ಆರ್,ಎಸ್ ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ
ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೊಂಪುರ ಗ್ರಾಮದವರಾಗಿದ್ದ SH ಲಿಂಗೇಗೌಡ ಆಕಾಲಿಕ ಸಾಲಿನಿಂದ ರಾಜ್ಯದಲ್ಲಿ ಒಬ್ಬ ಅಪ್ರತಿಮ ಹೋರಾಟಗಾರನನ್ನು ಕಳೆದುಕೊಂಡಂತಾಗಿದೆ ಲಿಂಗೇಗೌಡ ರವರ ಪಾರ್ಥಿವ ಶರೀರ ಗುರುವಾರ ಮಧ್ಯಾಹ್ನ 12.30 ಗಂಟೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಮೈಸೂರು ರಸ್ತೆಯ ಕೆಂಗೇರಿ,ರಾಮನಗರ, ಚನ್ನಪಟ್ಟಣ ಮಾರ್ಗವಾಗಿ ಅವರ ಹುಟ್ಟೂರು ಮದ್ದೂರಿಗೆ ತಲುಪಲಿದೆ,@publicnewskunigal