
KUNIGAL| ಹಲವು ದಿನಗಳಿಂದ ನೀರಿಲ್ಲದೆ ಪಾಳು ಬಿದ್ದಿದ್ದ ಬಾವಿಯೊಳಗೆ ಬಿದ್ದಿದ್ದ ಮೇಕೆ ರಕ್ಷಿಸುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾದ್ದು ರೈತರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ!
ಕುಣಿಗಲ್ ಪಟ್ಟಣದ ವಾರ್ಡ್ 1ರ ಬಿದನಗೆರೆಯಲ್ಲಿ ಸುಮಾರು 50 ಅಡಿ ಆಳದ ಪಾಳು ಬಿದ್ದಿದ್ದ ಬಾವಿಗೆ ವೆಂಕಟಪ್ಪ ಎಂಬುವವರ ಮೇಕೆ ಪಾಳು ಬಿದ್ದಿದ್ದ ಬಾವಿಯೋಳಗೆ ಮೇಯುವ ವೇಳೆ ಆಯತಪ್ಪಿ ಬಿದ್ದಿದೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಮೇಕೆನ್ನು ಬಾವಿಯಿಂದ ಮೇಲೆತ್ತಿ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಕಾರ್ಯಾಚರಣೆಯಲ್ಲಿ ಕುಣಿಗಲ್ ಅಗ್ನಿಶಾಮಕ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಾದ ಹಾಲೇಶಪ್ಪ, ಮಹೇಶ, ಭೀಮನಗೌಡ, ನಾಗರಾಜು, ಪುರಂದರ, ಅಶೋಕ, ರಾಜಶೇಖರ,ರವರುಗಳು ಭಾಗವಹಿಸಿದ್ದರು.@publicnewskunigal