ಕೊಟ್ಟಿಗೆಯಲ್ಲಿ ಕಟ್ಟಿದ್ದದನಗಳನ್ನ ಕಳ್ಳತನ‌ ಮಾಡಿ ಮಾರಾಟ ಮಾಡಿಬಂದು ಮನೆಯಲ್ಲಿ ಮಲಗಿದ್ದ ಭೂಪ!

Spread the love

ಕುಣಿಗಲ್;-ಕೊಟ್ಟಿಗೆಯಲ್ಲಿ ಕಟ್ಟಿದ್ದದನಗಳನ್ನ ಕಳ್ಳತನ‌ ಮಾಡಿ ಮಾರಾಟ ಮಾಡಿಬಂದು ಮನೆಯಲ್ಲಿ ಮಲಗಿದ್ದವನು ಇಗ ಪೊಲೀಸರ ಅತಿಥಿ!

ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಕಂಪ್ಲಾಪುರದಲ್ಲಿ ಗ್ರಾಮದ ಚನ್ನೆಗೌಡ ಎಂಬುವವರಿಗೆ ಸೇರಿದ ಸುಮಾರು 70 ರಿಂದ 80 ಸಾವಿರ ಬೆಲೆಬಾಳುವ ದನಗಳನ್ನ ಭಾನುವಾರ ತಡರಾತ್ರಿ ಕಳ್ಳತನ ಮಾಡಲಾಗಿತ್ತು ಮಧ್ಯರಾತ್ರಿ ಎದ್ದು ಕೊಟ್ಟಿಗೆಯನ್ನು ಗಮನಿಸಿದ ಚನ್ನೆಗೌಡನಿಗೆ ದನಗಳು ಕೊಟ್ಟಿಗೆಯಲ್ಲಿ ಇಲ್ಲದನ್ನು ಕಂಡು ಗಾಬರಿಗೊಂಡು ಅಕ್ಕ ಪಕ್ಕದ ಮನೆಯಯವರಿಗೆ ಮಾಹಿತಿ ತಿಳಿಸಿ ಕಳುವಾಗಿದ್ದ ಹಸುಗಳ ಹುಡುಕಾಟ ನಡೆಸಿದ್ದ ಆದರೆ ದನಗಳು ಮಾತ್ರ ಪತ್ತೆಯಾಗಿರಲಿಲ್ಲ ದನಗಳು ಕಳ್ಳತನವಾಗಿರುವ ವಿಚಾರ ತಿಳಿಯುತ್ತಿದ್ದಂತೆ ಸುತ್ತಮುತ್ತ ನಡೆಯುವ ದನಗಳ ಸಂತೆಗೆ ತೆರಳಿ ಹುಡುಕಾಟ ನಡೆಸಿದ್ದ ಚನ್ನೆಗೌಡ ಕುಟುಂಬಸ್ಥರು ಹಾಗೂ ಸ್ನೇಹಿತರು.ಈ ವೇಳೆ ಕಳ್ಳತನವಾಗಿದ್ದ ದನಗಳು ಕೆ.ಜಿ ಟೆಂಪಲ್ ಬಳಿ ನಡೆಯುವ ದನಗಳ ಸಂತೆಯಲ್ಲಿ ಪತ್ತೆಯಾಗಿವೆ

ಗುಬ್ಬಿ ತಾಲ್ಲೂಕಿನ ಕೆ.ಜಿ ಟೆಂಪಲ್ ಬಳಿ ದನಗಳ ಸಂತೆಯಲ್ಲಿ ಸೋಮವಾರ ಬೆಳಗ್ಗೆ ಕಳ್ಳತನ ಮಾಡಿದ್ದ ದನಗಳನ್ನ 43 ಸಾವಿರಕ್ಕೆ ಮಾರಾಟ ಮಾಡಿದ್ದ ಅಸಾಮಿ ಮನೆಗೆ ಬಂದು ಏನು ಕಾಣದವನಂತೆ ಮಲಗಿದ್ದ ಆದರೆ ಅವನ ಗ್ರಹಚಾರ ಮಾತ್ರ ಕೆಟ್ಟಿತ್ತು

ದನಗಳನ್ನ ಖರೀದಿ ಮಾಡಿದ್ದ ಮಾಲೀಕನ ಬಳಿ ತೆರಳಿ ವಿಚಾರಿಸಿದಾಗ ಘಟನೆ ಬೆಳಕಿಗೆ.ದನಗಳನ್ನ ಖರೀದಿಸುವುದಕ್ಕು ಮೊದಲು ಮಾರಾಟಗಾರರ ಚಲನವಲನ ಗಮನಿಸಿದ್ದ ಖರೀದಿಸಿರುವ ಮಾರಾಟ ಮಾಡಿದ್ದ ವ್ಯಕ್ತಿಯ ಪೋಟೋ ತೆಗೆದುಕೊಂಡಿದ್ದ ಇತ್ತ ದನಗಳ ಮಾಲಿಕ ಚನ್ನೆಗೌಡ ಈ ಬಗ್ಗೆ ವಿಚಾರಿಸಿದಾಗ ಖರೀದಿದಾರ ಮಾರಾಟ ಮಾಡಿರುವ ವ್ಯಕ್ತಿಯ ಪೋಟೋ ತೊರಿಸಿದ್ದಾಗ ಕಳ್ಳ ಸಿಕ್ಕಿಬಿದ್ದಿದ್ದಾನೆ.

ಘಟನೆ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಕಳ್ಳತನ ಮಾಡಿದ್ದ ಪುಟ್ಟರಾಜುನನ್ನು ಬಂಧಸಿ.ಕೃತ್ಯಕ್ಕೆ ಬಳಸಿದ್ದ ಗೂಡ್ಸ್ ವಾಹನ ವಶಕ್ಕೆ,ಹಾಗೂ ಕಳ್ಳತನ ಮಾಡಿದ್ದ ದನಗಳನ್ನ ಮಾಲೀಕನಿಗೆ ಹಿಂತಿರುಗಿಸಿದ್ದಾರೆ@publicnewskunigal