ತಹಶೀಲ್ದಾರ್ ಕಾರನ್ನು ಅಡ್ಡಗಟ್ಟಿ ಪುಂಡಾಟ ಮೆರೆದಿದ್ದವನ ಬಂಧನ!

Spread the love

ನೆಲಮಂಗಲ ಬಳಿ ಮದ್ಯದ ಅಮಲಿನಲ್ಲಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಪುತ್ರನೊರ್ವ ತಹಶೀಲ್ದಾರ್ ಕಾರನ್ನು ಅಡ್ಡಗಟ್ಟಿ ಕಿರಿಕ್ ಮಾಡಿ ಅಸಭ್ಯ ರೀತಿಯಲ್ಲಿ ವರ್ತಿಸಿರುವ ಘಟನೆ ನಡೆದಿದ್ದು ಆರೋಪಿ ಇದೀಗ ಪೊಲೀಸರ ಅಥಿತಿಯಾಗಿದ್ದಾನೆ!

ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಲ್ಯಾಂಕೋ ಟೋಲ್ ಸಮೀಪ ಬೆಂಗಳೂರಿಗೆ ತೆರಳುತ್ತಿದ್ದ ಕುಣಿಗಲ್ ತಹಸೀಲ್ದಾರ್ ರಶ್ಮಿ ಕಾರಿಗೆ ಅಡ್ಡವಾಗಿ ಬಂದು ಅಸಭ್ಯ ರೀತಿಯಲ್ಲಿ ವರ್ತಿಸಿದ್ದಲ್ಲದೆ ತಹಶೀಲ್ದಾರ್ ಕಾರು ಚಾಲಕನಿಗೆ ಅವಾಚ್ಚ ಶಬ್ದಗಳಿಂದ ನಿಂದಿಸಿರು ಆರೋಪದ ಹಿನ್ನೆಲೆ ನೆಲಮಂಗಲದ ಉದ್ಯಮಿ ಡಾಬಾ ರಾಜಣ್ಣ ಪುತ್ರ ರವಿಗೌಡ ಎಂಬಾತನನ್ನು ನೆಲಮಂಗಲ ಪೊಲೀಸರು ಬಂಧಿಸಿ ಆತನ ಕಾರನ್ನು ವಶಕ್ಕೆ ಪಡೆದಿದ್ದಾರೆ

ಹೊಸ ವರ್ಷದ ದಿನದಂದು ತಹಶೀಲ್ದಾರ್ ರಶ್ಮಿ ರವರು ಕಾರ್ಯ ನಿಮಿತ್ತ ಜಿಲ್ಲಾಧಿಕಾರಿಗಳನ್ನು ಬೇಟಿಗಾಗಿ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯೆ ರಾಷ್ಟ್ರೀಯ ಹೆದ್ದಾರಿ 75ರ ಲ್ಯಾಂಕೊ ಟೊಲ್ ಸಮೀಪ ತಹಶೀಲ್ದಾರ್ ಕಾರನ್ನು ಹಿಂದಿಕ್ಕೂವ ಬರದಲ್ಲಿ ಆರೋಪಿ ರವಿಗೌಡ ಪುಂಡಾಟ ಮೆರೆದಿದ್ದಾನೆ ಇತನ ವರ್ತನ ಗಮನಿಸಿದ ತಹಶೀಲ್ದಾರ್ ರಶ್ಮಿ ತಕ್ಷಣ 112ಕ್ಕೆ ಕರೆ ಮಾಡಿ ಪೊಲೀಸರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ ನೆಲಮಂಗಲ ಟೋಲ್ ಬಳಿ ಆಗಮಿಸಿದ ನೆಲಮಂಗಲ ಪೊಲೀಸರು ಆರೋಪಿ ರವಿಗೌಡನನ್ನು ವಶಕ್ಕೆ ಪಡೆಯುವ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದಿದೆ ಮಾಹಿತಿ ತಿಳಿದು ಆರೋಪಿ ರವಿಗೌಡನ ಪತ್ನಿಯು ಸಹ ಸ್ಥಳಕ್ಕೆ ಆಗಮಿಸಿ ತಹಶೀಲ್ದಾರ್ ರಶ್ಮಿಯವರೊಂದಿಗೂ ವಾಗ್ವಾದ ನಡೆಸಿದ್ದು ಬಳಿಕ ಕುಣಿಗಲ್ ತಹಶೀಲ್ದಾರ್ ಎಂದು ತಿಳಿದ ರವಿಗೌಡನ ಪತ್ನಿ ಕ್ಷಮೆ ಯಾಚಿಸಿದ್ದಾರೆ ದುಂಡಾವರ್ತನೆ ತೊರಿ ಕರ್ತವ್ಯ ಅಡ್ಡಿಪಡಿಸಿದ ಆರೋಪದಡಿಯಲ್ಲಿ ಆರೋಪಿ ರವಿಗೌಡ ಹಾಗೂ ಆತನಿಗೆ ಸೇರಿದ ಕಾರನ್ನು ಇದೀಗ ನೆಲಮಂಗಲ ಠಾಣೆ ಪೋಲೀಸರು ಸೀಜ್ ಮಾಡಿದ್ದಾರೆ. KA 03 MW 1 ಡಿಫೆಕ್ಟಿವ್ ನಂಬರ್ ಪ್ಲೇಟ್ ಬಳಸುತ್ತಿದ್ದ ತಮ್ಮ ಕಾರಿಗೆ ಟೆಂಟೆಡ್ ಗ್ಲಾಸ್ ಬಳಸಿ ಆರೋಪಿ ರವಿಗೌಡ ಅಡ್ಡಾಡುತ್ತಿದ್ದ ಸರ್ಕಾರಿ ಕಾರಿಗೆ ಅಡ್ಡ ಬಂದು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆಯಲ್ಲಿ ಮಧ್ಯ ಸೇವಿಸಿ ಕಾರು ಚಲಾವಣೆ ಸೇರಿದಂತೆ ಹಲವು ಪ್ರಕರಣಗಳು ಇತನ ವಿರುದ್ದ ದಾಖಲಾಗಿದ್ದು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ @publicnewskunigal