
ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿ ಮಹಿಳೆಯ ತಲೆಗೆ ಹೊಡೆದು ಚಿನ್ನದ ಮಾಂಗಲ್ಯ ಸರ ಕದ್ದು ಖದೀಮ ಪರಾರಿಯಾಗಿರು ಘಟನೆ ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ!
ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೊಬಳಿ ವ್ಯಾಪ್ತಿಯ ಈಡಿಗರಪಾಳ್ಯ ಗ್ರಾಮದ ಮಾರೇಗೌಡ ಪತ್ನಿ ರುಕ್ಮಿಣಿ (26), ಮಾಂಗಲ್ಯ ಸರ ಕಳೆದುಕೊಂಡ ಮಹಿಳೆ ಲಕ್ಷಿಪುರ ಗ್ರಾಮದಲ್ಲಿ ಹಾಲಿನ ಡೈರಿ ನಡೆಸುವ ಮಾರೇಗೌಡ ಎಂದಿನಂತೆ ಭಾನುವಾರ ಬೆಳಗ್ಗೆ 5-30ರ ಸಮಯದಲ್ಲಿ ಹಾಲಿನ ಡೈರಿ ಬಳಿ ತೆರಳಿದ್ದ ಈ ವೇಳೆ ಮನೆಯಲ್ಲಿ ಒಬ್ಬಳೆ ಇದ್ದ ರುಕ್ಮಿಣಿ ಇದನ್ನ ಗಮನಿಸಿದ ಖದೀಮ ಮನೆಗೆ ನುಗ್ಗಿ ಹಿಬಂದಿಯಿಂದ ರುಕ್ಮಿಣಿ ತಲೆಗೆ ಕಬ್ಬಿಣದ ರಾಡ್ ನಿಂದ ಹೊಡೆದು ಕತ್ತಿನಲ್ಲಿದ್ದ ಸುಮಾರು 55 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದಾನೆ
ಗಂಭೀರ ಗಾಯಗೊಂಡ ಕಳಗೆ ಬಿದ್ದಿದ್ದ ರುಕ್ಮಿಣಿಯನ್ನು ಪಕ್ಕದ ಮನೆಯವರು ಗಮನಿಸಿ ಕೂಡಲೆ ಪತಿ ಮಾರೇಗೌಡನ ಗಮನಕ್ಕೆ ತಂದು ಕುಣಿಗಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಿಪಿಐ ನವೀನ್‌ಗೌಡ ಹಲ್ಲೆಗೆ ಒಳಗಾದ ರುಕ್ಮಿಣಿಯಿಂದ ಮಾಹಿತಿ ಪಡೆದು ತನಿಖೆ ಕೈಗೊಂಡಿದ್ದಾರೆ
ಘಟನೆಯ ಸ್ಥಳಕ್ಕೆ ಎ.ಎಸ್.ಪಿ ಅಬ್ದುಲ್ ಖಾದರ್.ಬೆರಳಚ್ಚು ತಜ್ಞರ (FSIL)ತಂಡ ಶ್ವಾನಧಳ ಹಾಗೂ ಕುಣಿಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ @publicnewskunigal