ತೋಟದ ಮನೆಗೆ ನುಗ್ಗಿ ದರೋಡೆ ಮಾಡಿದ್ದ ಆರೋಪಿಗಳ ಬಂಧನ!

Spread the love

ದೊಡ್ಡಮದುರೆ ಗ್ರಾಮದಲ್ಲಿ ಮೊಲ ಹಿಡಿಯುವವರ ಸೋಗಿನಲ್ಲಿ ಬಂದು ತೋಟದ ಮನೆಗೆ ನುಗ್ಗಿ ಮಾಲೀಕನ ಮೇಲೆ ಹಲ್ಲೆ ನಡೆಸಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿಗಳನ್ನು ಘಟನೆ ನಡೆದ 24 ಗಂಟೆಯೊಳಗೆ ಬಂಧಿಸುವಲ್ಲಿ ಅಮೃತೂರು ಪೊಲೀಸರು ಯಶಸ್ವಿಯಾಗಿದ್ದಾರೆ!

ಕುಣಿಗಲ್ ತಾಲೂಕಿನ ಯಡಿಯೂರು ಹೋಬಳಿ ವ್ಯಾಪ್ತಿಯ ದೊಡ್ಡ ಮಧುರೆ ಗ್ರಾಮದಲ್ಲಿ ಮೊಲ ಹಿಡಿಯುವ ನೆಪದಲ್ಲಿ ಬಂದು ಒಂಟಿ ಮನೆಯಲ್ಲಿದ್ದ ವೃದ್ಧನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಚೀನಾ ಭರಣ ದೋಚಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಘಟನೆ ನಡೆದ 48 ಗಂಟೆಗಳಲ್ಲಿ ಬಂಧಿಸುವಲ್ಲಿ ಅಮೃತೂರು ಪೊಲೀಸರು ಯಶಸ್ವಿಯಾಗಿದ್ದಾರೆ

ಬಂಧಿತರಲ್ಲಿ ಮೂವರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರು. ಉಳಿದವರು ಶಿರಾ ತಾಲ್ಲೂಕಿನ ಗೌಡಗೆರೆ ಹೋಬಳಿ ಎಂ.ದೊರೆ ಗ್ರಾಮದ ಮನೋರಂಜನ್ (ಹಲವಾರು ಪ್ರಕರ- ಣಗಳಲ್ಲಿ ಭಾಗಿಯಾಗಿದ್ದಾನೆ), ವಿಶಾಲ್ (ಶಿವಮೊಗ್ಗ ನಿವಾಸಿ) ಮತ್ತು ರಂಗನಾಥ ಎಂಬುವವರಾಗಿದ್ದಾರೆ.ಶುಕ್ರವಾರ ಬೆಳಗಿನಜಾವ ದೊಡ್ಡಮಧುರೈ ಗ್ರಾಮದ ತೋಟದ ಮನೆಗೆ ನುಗ್ಗಿ ಮಾಲೀಕ ಚನ್ನೆಗೌಡ ಅವರ ಮೇಲೆ ಹಲ್ಲೆ ನಡೆಸಿ 98 ಗ್ರಾಂ ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗಿದ್ದರು. ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಶಿರಾ ಮತ್ತು ಬೆಂಗಳೂರಿನಲ್ಲಿ ಬಂಧಿಸಿ, ಕೃತ್ಯಕ್ಕೆ ಬಳಸಿದ ವಾಹನ ಮತ್ತು ಮಾರಕಾಸ್ತ್ರಗ- ಳನ್ನು ವಶಕ್ಕೆ ಪಡೆದಿದ್ದಾರೆ.ಡಿವೈಎಸ್‌ಪಿ ఓం ಪ್ರಕಾಶ್ ನೇತೃತ್ವದಲ್ಲಿ ಸಿಪಿಐ ಮಾದ್ಯಾ ನಾಯಕ್, ಪಿಎಸ್‌ಐ ಶಮಂತ್ ಗೌಡ, ಸಿಬ್ಬಂದಿ ನವೀನ್, ಮಂಜು, ದಯಾನಂದ್, ಮಂಜೆಗೌಡ, ದೇವರಾಜು, ರೇಣುಕ ಪ್ರಸಾದ್ ಪಾಲ್ಗೊಂಡಿದ್ದರು. ಕಾರ್ಯಾಚರಣೆಯಲ್ಲಿ@publicnewskunigal