
ಒಂಟಿ ಮಹಿಳೆಯ ಮಾಂಗಲ್ಯ ಸರವನ್ನು ಕದಿಯಲು ಬಂದವರನ್ನು ಹಿಡಿದು ಧರ್ಮದೇಟು ನೀಡಿದ ಸಾರ್ವಜನಿಕರು ಖದೀಮರನ್ನು ಪೊಲೀಸರಿಗೆ ಒಪ್ಪಿಸಿರುವ ಘಟನೆ ಕುಣಿಗಲ್ ತಾಲೂಕಿನಲ್ಲಿ ನಡೆದಿದೆ
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ದೇವಸಂದ್ರ ಗ್ರಾಮದ ಬಳಿ ಆಡ ಹಗಲೆ ಒಂಟಿ ಮಹಿಳೆಯ ಮಾಂಗಲ್ಯ ಸರ ಕಿತ್ತು ಪರಾರಿಯಾಗಲು ಯತ್ನಿಸಿದ ಖದಿಮನನ್ನು ಗ್ರಾಮಸ್ಥರು ಹಿಡಿದು ಧರ್ಮದೇಟು ನೀಡಿ ಬಳಿಕ ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ ಇಂದಿರಮ್ಮ ಎಂಬುವವರು ಉಜ್ಜನಿ ಗ್ರಾಮದಿಂದ ಪಡಿತರ ಕೇಂದ್ರಕ್ಕೆ ತೆರಳಿ ಅಕ್ಕಿ ತೆಗೆದುಕೊಂಡು ದೇವಸಂದ್ರ ಗ್ರಾಮಕ್ಕೆ ತೆರಳುವ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ರಸ್ತೆಯಲ್ಲಿ ಹೊಗುತ್ತಿದ್ದ ಇಂದಿರಮ್ಮನ ಕುತ್ತಿಗೆಯಲ್ಲಿದ್ದ ಮಾಂಗಲ್ಯಸರವನ್ನು ಕಿತ್ತು ಪಾರಾರಿಯಾಗಲು ಎತ್ತಿಸುತ್ತಿದ್ದ ವೇಳೆ ಮಹಿಳೆಯ ಚೀರಾಡುತ್ತಿದ್ದನ್ನು ಗಮನಿಸಿದ ಪಕ್ಕದ ತೋಟದಲ್ಲಿದ್ದ
ಚನ್ನೇಗೌಡ ಹಾಗೂ ತಿಲಕ್ ಎಂಬುವವರು ತಕ್ಷಣ ಓಡಿ ಬಂದು ಕಳ್ಳನನ್ನು ಹಿಡಿಯಲು ಯತ್ನಿಸಿದ್ದಾರೆ ಈ ವೇಳೆ ಸರ ಕದಿಯಲು ಬಂದಿದ್ದ ಖದೀಮರು ರಕ್ಷಣೆಗೆ ಬಂದ ಗ್ರಾಮಸ್ಥರ ಮೇಲೆ ಹಲ್ಲೆಗೆ ಮುಂದಾಗಿದ್ದ ಒರ್ವ ಪರಾರಿಯಾದರೆ ಮತ್ತೊರ್ವನನ್ನು ಹಿಡಿದ ಗ್ರಾಮಸ್ಥರು ಕಳ್ಳನ ಬಳಿ ಇದ್ದ ಇಂದಿರಮ್ಮನ ಸರವನ್ನು ಕಿತ್ತು ಮಹಿಳೆಗೆ ನೀಡಿ ಬಳಿಕ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ ಇದಾದ ಆರ್ಧ ಗಂಟೆಯ ಬಳಿಕ ಉಜ್ಜನಿ ಗ್ರಾಮದ ಶ್ರೀ ಚೌಡೇಶ್ವರಿ ಅಮ್ಮನವರ ದೇವಾಲಯದ ಬಳಿ ಪರಾರಿಯಾಗಿದ್ದ ಇನ್ನೊರ್ವ ಸರಗಳ್ಳ ಸಿಕ್ಕಿಬಿದ್ದಿದ್ದು ಅವನನ್ನು ಸಹ ಗ್ರಾಮಸ್ಥರು ಸೇರಿ ಹಿಡಿದು ಹುಲಿಯೂರುದುರ್ಗ ಪೊಲೀಸರಿಗೆ ಒಪ್ಪಿಸಿದ್ದಾರೆ ಸರ ಖದಿಯಲು ಬಂದಿದ್ದ ಕಳ್ಳರು ಚನ್ನಪ್ಪಟ್ಟಣ ಮೂಲದವರೆಂದು ತಿಳಿದು ಬಂದಿದೆ ಘಟನೆ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ @publicnewskunigal