
ದಲಿತರ ಕುಂದು ಕೊರತೆ ಸಭೆ ಬಹಿಷ್ಕರಿಸಿ ಅಮೃತೂರು ಪಿಎಸ್ಐ ಶಮಂತ್ ಗೌಡ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಿಪಿಐ ಮಾಧ್ಯನಾಯಕ್ ರವರಿಗೆ ಮನವಿ ಸಲ್ಲಿಸಿದ ದಲಿತ ಮುಖಂಡರು!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಸೋಮವಾರ ನಿಗದಿಯಾಗಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದು ಕೊರತೆಯ ಸಭೆಯನ್ನು ದಲಿತ ಮುಖಂಡರು ಬಹಿಷ್ಕರಿಸಿ ಹೊರ ನಡೆದ ಘಟನೆ ನಡೆದಿದೆ ಆಮೃತೂರು ಸಬ್ ಇನ್‌ಸ್ಪೆಕ್ಟರ್ ವರ್ತನೆಗೆ ಖಂಡಿಸಿ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಅಮೃತೂರು ವೃತ್ತ ನಿರೀಕ್ಷಕ ಮಾಧ್ಯನಾಯಕ್ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿತ್ತು ಸಭೆ ಪ್ರಾರಂಭವಾಗುತ್ತಿದ್ದಂತೆ ಮುಖಂಡರು ಮಾತನಾಡಿ ಶನಿವಾರ ಅಮೃತೂರಿನಲ್ಲಿ ನಡೆದ ಬೈಕ್ ಅಪಘಾತದಲ್ಲಿ ದಲಿತ ಮುಖಂಡ ಜಂಬುಲಿಂಗಯ್ಯ ಅವರು ಮೃತ ಪಟ್ಟಿದ್ದಾರೆ ಅಫಘಾತಕ್ಕೆ ಕಾರಣರಾದ ಮತ್ತೊಂದು ಬೈಕ್ ಕಡೆಯವರಿಗೆ ಪಿಎಸ್ಐ ಶಮಂತ್ ಗೌಡ ರಾಜೋಪಚಾರ ಮಾಡುತ್ತಿದ್ದಾರೆ ಅಪಘಾತದಲ್ಲಿ ಮೃತಪಟ್ಟ ಕಡೆಯವರು ಮನನೊಂದು ಅಪಘಾತ ಮಾಡಿರುವವರ ವಿರುದ್ದ ಮಾತನಾಡಿದಕ್ಕೆ ಹಾಗೂ ಕಾನೂನು ಕ್ರಮ ಕೈಗೊಳ್ಳುವಂತೆ ಕೇಳುವುದು ತಪ್ಪೆ ಎಂದು ಪ್ರಶ್ನಿಸಿದ ದಲಿತ ಮುಖಂಡರು ನ್ಯಾಯ ಕೇಳಿದ ದಲಿತರನ್ನು ಕಾಲನಿಯಿಂದ ಹೊರಗೆ ಎಳೆತಂದು ಹೊಡೆಯುತ್ತೇನೆ ಎಂದು ಅಮೃತೂರು ಪಿಎಸ್ಐ ಶಮಂತ್‌ಗೌಡ ಹೇಳಿದ್ದು ದಲಿತರ ಮೇಲೆ ದೌರ್ಜನ್ಯ ದಬ್ಬಾಳಿಕೆಯನ್ನು ಸಹಿಸಲಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ದಲಿತ ಮುಖಂಡರು ಶಮಂತ್ ಗೌಡ ವಿರುದ್ದ ಕಾನೂನು ಕ್ರಮ ಕೈಗೊಳ್ಳದ ಹೊರತು ನಾವು ದಲಿತರ ಕುಂದು ಕೊರತೆ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಆಗ್ರಹಿಸಿ ಸಭೆಯಿಂದ ಹೊರನಡೆದು ಬಳಿಕ ಕ್ರಮಕ್ಕೆ ಒತ್ತಾಯಿಸಿ ಅಮೃತೂರು ವೃತ್ತ ನಿರೀಕ್ಷಕ ಮಾಧ್ಯನಾಯಕ್ ಗೆ ಮನವಿ ಪತ್ರ ಸಲ್ಲಿಸಿದರು ಈ ವೇಳೆ ಮುಖಂಡರಾದ ಛಲವಾದಿ ಪ್ರಕಾಶ್.ಪುಟ್ಟ ಬೋರಯ್ಯ.ನಿಡಸಾಲೆ ಶಂಕ್ರಣ್ಣ.ಅರಳೆ ಮರದ ದೊಡ್ಡಿ ಕುಮಾರ್.ಚಂದ್ರು.ಅನಿಲ್ ಕುಮಾರ್.ನಾಗೇಶ್ ಸೆರಿದಂತೆ ಹಲವರು ಉಪಸ್ಥಿತರಿದ್ಧರು @publicnewskunigal