
ಸಾಮೂಹಿಕವಾಗಿ ಮಧ್ಯರ್ಜನೆ ಮಾಡುವ ಮೂಲಕ ಓಡೆ ಭೈರವೇಶ್ವರ ಸ್ವಾಮಿಗೆ ಭಕ್ತಿ ಸಮರ್ಪಿಸಿ ಸಾವಿರಾರು ಮಂದಿ ಭಕ್ತರು!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಹೇಮಗಿರಿ ವರದರಾಜ ಸ್ವಾಮಿಯ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಓಡೆ ಭೈರವೇಶ್ವರ ಸ್ವಾಮಿಯ ಜಾತ್ರಮಹೋತ್ಸವದ ಅಂಗವಾಗಿ ಭಕ್ತರು ಗುರುವಾರ ಭಕ್ತರು ತಮ್ಮ ಇಷ್ಟಾರ್ಥಗಳಿಗಾಗಿ ಪ್ರಾರ್ಥಿಸಿ ಶ್ರೀ ಓಡೆ ಭೈರವೇಶ್ವರ ಸ್ವಾಮಿಗೆ ಹರಕೆಯ ರೂಪದಲ್ಲಿ ಮಧ್ಯವನ್ನು ನೀಡುವುದು ಇಲ್ಲಿನ ಪ್ರತಿತಿಯಾಗಿದ್ದು ಪ್ರತಿ ವರ್ಷ ಸಾವಿರಾರು ಭಕ್ತರು ಈ ಜಾತ್ರಮಹೊತ್ಸವದಲ್ಲಿ ಭಾಗಿಯಾಗಿ ವಿವಿಧ ಬಗೆಯ ಮಧ್ಯದ ಬಾಟಲಿಗಳನ್ನು ಹರಕೆಯ ರೂಪದಲ್ಲಿ ನೀಡುತ್ತಾರೆ ಬಳಿ ಭಕ್ತರು ನೀಡಿರುವ ಮಧ್ಯವನ್ನು ಒಂದೆಡೆ ಸೇರಿಸಿ ಮಾಂಸದ ಅಡಿಗೆ ಮಾಡಿ ದೇವರಿಗೆ ನೈವೇದ್ಯ ಮಾಡಿದ ಬಳಿಕ ಜಾತ್ರಮಹೊತ್ಸವಕ್ಕೆ ಬರುವ ಭಕ್ತರಿಗೆ ಪ್ರಸಾದದ ರೂಪದಲ್ಲಿ ಸಾಮೂಹಿಕವಾಗಿ ಮಧ್ಯ ಮತ್ತು ಮಂಸಆಹಾರವನ್ನು ನೀಡಲಾಗುತ್ತದೆ ಇದು ಇಲ್ಲಿನ ಪ್ರತಿತಿಯಾಗಿದ್ದು ನೂರಾರು ವರ್ಷಗಳಿಂದ ಈ ಸಂಪ್ರದಾಯ ಇಲ್ಲಿ ನಡೆದು ಬರುತ್ತಿದ್ದು ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಇಲ್ಲಿಗೆ ಸಾವಿರಾರು ಭಕ್ತರು ಬಂದು ಶ್ರೀ ಓಡೆ ಭೈರವೇಶ್ವರ ಸ್ವಾಮಿಗೆ ಮಧ್ಯ ಸಮರ್ಪಿಸುವ ಮೂಲಕ ತಮ್ಮ ಇಷ್ಟಾರ್ಥಗಳಿಗೆ ಪ್ರಾರ್ಥಿಸಿ ಪೂಜೆ ಸಲ್ಲಿಸುವುದು ವಾಡಿಕೆಯಾಗಿದೆ @publicnewskunigal