ಧರಣಿ ಕುಳಿತಿದ್ದ ರೈತ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲು!

Spread the love

ಜಮೀನು ಪೋಡಿ ಮಾಡಲು ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದರೂ ಜಮೀನು ಪೋಡಿ ಮಾಡಿಕೊಡುವಲ್ಲಿ ಭೂ ದಾಖಲೆಗಳ ಅಧಿಕಾರಿಗಳು ವಿಳಂಬ ತೋರುತ್ತಿದ್ದಾರೆ ಎಂದು ನ್ಯಾಯಕ್ಕಾಗಿ ಆಗ್ರಹಿಸಿ ಉಪವಾಸ ಕುಳಿತ್ತಿದ್ದ ರೈತ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ!

ಕುಣಿಗಲ್ ತಾಲ್ಲೂಕಿನ ಅಮೃತೂರು ಹೋಬಳಿ ಯಡವಾಣಿ ಗ್ರಾಮದ ಸರ್ವೆ ನಂಬರ್ 257 / 1ಎ3 ನಲ್ಲಿ ಮೂಲ ದಾಖಲಾತಿಯಂತೆ 2 ಎಕರೆ 14 ಗುಂಟೆ ಜಮೀನಿದ್ದು ಅರ್ಜಿದಾರ ಶ್ರೀನಿವಾಸ್ ಬಿನ್ ತಿಮ್ಮಯ್ಯನವರಿಗೆ 5 ಗುಂಟೆ ಖಾತೆಯಾಗಿ ಪಹಣಿ ಬಂದಿದ್ದು ಈ ಜಮೀನನ್ನು ಪೋಡಿ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದರು ಪೋಡಿ ಕೆಲಸ ಆರಂಭಿಸಿದಾಗ ಅದೇ ಗ್ರಾಮದ ಕಪನಯ್ಯನ ಮಗ ಹಾಗೂ ಕೆಂಪಮ್ಮ ಕೋಂ ಹುಚ್ಚಪ್ಪನವರ ಮಗ ತಕರಾರು ಅರ್ಜಿ ಸಲ್ಲಿಸಿದ ಕಾರಣ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ನ್ಯಾಯಾಲಯದಲ್ಲಿ ಸತತ ಒಂದು ವರೆ ವರ್ಷಗಳ ಕಾಲ ವಿಚಾರಣೆ ನಡೆದು ಶ್ರೀನಿವಾಸ್ ರವರ ಐದು ಗುಂಟೆ ಭೂಮಿಯನ್ನು ಪೋಡಿ ಮಾಡಲು ಆದೇಶ ನೀಡಿದ್ದರು

ಆದೇಶ ನೀಡಿ ಆರು ತಿಂಗಳಾಗಿದ್ದು ಮತ್ತು ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದಿದ್ದರೂ ಪೋಡಿ ಮಾಡದೆ ನಾನಾ ಸಬೂಬಗಳನ್ನ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಹೇಳುತ್ತಿರುವ ಕಾರಣ ಪೋಡಿ ಕೆಲಸ ಹಾಗುವ ವರೆಗೆ ಪಟ್ಟಣದ ತಾಲ್ಲೂಕು ಕಚೇರಿಯ ಮುಂಭಾಗ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿರುವ ರೈತ ಶ್ರೀನಿವಾಸ್ ನನಗೆ ಪೋಡಿಯಾಗಿ ಪಹಣೆ ಕೈ ಸೇರುವ ವರೆಗೆ ಸತ್ಯಾಗ್ರಹ ಬಿಡುವುದಿಲ್ಲ ಎಂದು KRS ಪಕ್ಷದ ಮುಖಂಡರೊಂದಿಗೆ ತಾಲ್ಲೂಕು ಕಚೇರಿಯ ಮುಂಭಾಗ ನ್ಯಾಯಕ್ಕಾಗಿ ಗುರುವಾರ ಧರಣಿ ಪ್ರಾರಂಬಿಸಿದ್ದರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸ್ಥಳಕ್ಕೆ ಬಂದ ತಹಶೀಲ್ದಾರ್ ರಶ್ಮಿ ಹಾಗೂ ಎ.ಡಿ.ಎಲ್.ಆರ್. ತೋಂಟರಾಧ್ಯ ಮೂಲ ದಾಖಲೆಗಳಿಲ್ಲದೆ ಪೋಡಿ ಮಾಡಲು ಬರುವುದಿಲ್ಲ ಭೂಸ್ವಾಧೀನ ಪಡಿಸಿಕೊಂಡಿರುವ ಭೂಮಿಯ ವಿಸ್ತೀರ್ಣ ಸರಿಪಡಿಸಿ ಮತ್ತು ಒತ್ತುವರಿಯಾಗಿರುವ ಭೂಮಿ ತೆರವುಗೊಳಿಸಿ ಆದೇಶ ನೀಡಿದ್ದಲ್ಲಿ ಪೋಡಿ ಮಾಡಲಾಗುವುದು ಎಂದರು ಮೂಲ ದಾಖಲೆಗಳನ್ನು ಒದಗಿಸಿ ಪೋಡಿ ಮಾಡಿಕೊಡಲು ನಿರ್ದೇಶನ ನೀಡಲಾಗುವುದು ಎಂದು ತಹಶೀಲ್ದಾರ್ ರಶ್ಮಿ ತಿಳಿಸಿದರು.ಆದರೆ ಇಗಾಗಲೆ ಸಂಬಂಧಪಟ್ಟ ದಾಖಲೆಗಳನ್ನು ಒದಗಿಸಲಾಗಿದೆ ನ್ಯಾಯಾಲಯದ ಆದೇಶವು ಆಗಿದ್ದು ಸುಖ ಸುಮ್ಮನೆ ಕಳೆದೊಂದು ವರ್ಷದಿಂದ ತಾಲ್ಲೂಕು ಕಚೇರಿಗೆ ನನ್ನನ್ನು ಅಲೆಯುವಂತೆ ಮಾಡಿದ್ದಿರ ನ್ಯಾಯ ಸಿಗುವ ವರೆಗೆ ಧರಣಿ ಸತ್ಯಾಗ್ರಹ ಕೈಬಿಡುವುದಿಲ್ಲ ಎಂದರು

ಕೆಆರ್‌ಎಸ್ ಪಕ್ಷದ ಚೆನ್ನಯ್ಯ ಮಾತನಾಡಿ ಪೋಡಿ ಮಾಡಲು ವರ್ಷಾನುಗಟ್ಟಲೆ ಸಮಯ ಬೇಕೇ? ಎಷ್ಟು ಬಾರಿ ನಿಮ್ಮ ಕಚೇರಿಗೆ ಅಲೆಯುವುದು. ಪ್ರತಿ ಸಾರಿಯೂ ಒಂದೊಂದು ಕತೆ ಹೇಳಿ ತಪ್ಪಿಸಿಕೊಳ್ಳುತ್ತಿದ್ದೀರಿ. ಇದು ಮೂರನೇ ಬಾರಿ ಪ್ರತಿಭಟನೆ ಮಾಡುತ್ತಿರುವುದು ಪೋಡಿ ಮಾಡಲು ವಿಳಂಬವೇಕೆ ಎಂದು ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡು ಪೋಡಿ ಯಾಗುವವರೆಗೂ ಉಪವಾಸ ಸತ್ಯಾಗ್ರಹ ನಿಲ್ಲಿಸುವುದಿಲ್ಲ ಎಂದರು.ಇದಾದ ಬಳಿಕ ಶುಕ್ರವಾರ ಬೆಳಗ್ಗೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಶ್ರೀನಿವಾಸ್ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆ ಸ್ಥಳದಲ್ಲಿ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು ಆಂಬುಲೆನ್ಸ್ ಮೂಲಕ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಸಿ ಚಿಕಿತ್ಸೆ ನೀಡಲಾಗುತ್ತಿದೆ ಒಟ್ಟಾರೆ ಅಧಿಕಾರಿಗಳ ನಿರ್ಲಕ್ಷ್ಯ ಬೇಜವಾಬ್ದಾರಿಯ ಕಾರಣದಿಂದಾಗಿ ತಾಲ್ಲೂಕು ಕಚೇರಿಗೆ ರೈತರು ಅಲೆದಾಡುವುದು ತಪ್ಪಿಲ್ಲ ಇನ್ನಾದರು ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಬಡ ರೈತನಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕಿದೆ

ಧರಣಿ ವೇಳೆ ಕೆ.ಆರ್‌.ಎಸ್ ಪಕ್ಷದ ಪದಾಧಿಕಾರಿಗಳಾದ ಶ್ರೀನಿವಾಸ್ ಮೂರ್ತಿ, ಚೆನ್ನಯ್ಯ, ಗೋವಿಂದರಾಜು, ತಿಮ್ಮಪ್ಪ, ನವಾಜ್, ಮತ್ತು ಡಿಎಚ್‌ಎಸ್ ರಾಜು ವೆಂಕಟಪ್ಪ ಇದ್ದರು @publicnewskunigal