
ಮನೆಯಲ್ಲಿಯಾರು ಇಲ್ಲದೆ ವೇಳೆ ವಾಮಾಚಾರ ಮಾಡಿ ಸಿಕ್ಕಿ ಬಿದ್ದ ಆಸಾಮಿ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆ!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಆರ್,ಬ್ಯಾಡರಹಳ್ಳಿ ಗ್ರಾಮದ ಚಂದ್ರಮ್ಮ ಎಂಬುವವರ ಮನೆಯಲ್ಲಿ ಕಳೆದ ಒಂದು ತಿಂಗಳ ಹಿಂದೆ ಮನೆ ಕಳ್ಳತನ ನಡೆದಿತ್ತು ಕಳ್ಳರು 25 ಗ್ರಾಂ ಚಿನ್ನಾಭರಣ ಹಾಗೂ ಒಂದು ಲಕ್ಷ ನಗದು ದೊಚಿ ಪರಾರಿಯಾಗಿದ್ದರು ಮನೆ ಕಳ್ಳತನದ ಬಳಿಕ ಮನೆಯ ಸುರಕ್ಷತೆಯ ದೃಷ್ಟಿಯಿಂದ ಮನೆಗೆ ಸಿ.ಸಿ ಕ್ಯಾಮರ ಅಳವಡಿಸಲಾಗಿತ್ತು ಆದರೆ ಇದೆ ಗ್ರಾಮದ ಮೋಟೆಗೌಡ ಎಂಬಾತ ಚಂದ್ರಮ್ಮನ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಬಳಿ ಬಂದು ಮನೆಗೆ ಅಳವಡಿಸಿದ್ದ ಗೆಟ್ ಮೂಲಕ ಮನೆಯ ಒಳಗಡೆಗೆ
ಕೋಳಿಮೊಟ್ಟೆ.ನಿಂಬೆಹಣ್ಣು.ಅರಿಶಿನ.ಕುಂಕುಮ.ಹಾಗೂ ಕೋಳಿ ಕತ್ತರಿಸಿರುವ ರಕ್ತ ಮತ್ತು ಬಟ್ಟೆಯನ್ನು ಎಸೆದು ವಾಮಾಚಾರ ಮಾಡಿ ಹೋಗಿರುವುದು ಮನೆಗೆ ಅಳವಡಿಸಿರುವ ಸಿ.ಸಿ ಕ್ಯಾಮರದಲ್ಲಿ ಸೇರೆಯಾಗಿದ್ದು ಮನೆಯವರ ಆತಂಕಕ್ಕೆ ಕಾರಣವಾಗಿದ್ದು ಆರೋಪಿ ಬ್ಯಾಡರಹಳ್ಳಿ ಗ್ರಾಮದ ಕೃಷ್ಣಮೂರ್ತಿ ಅಲಿಯಾಸ್ ಮೊಟೆಗೌಡನ ವಿರುದ್ದ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ @publicnewskunigal