ವಿಳಾಸ ಕೇಳುವ ನೆಪದಲ್ಲಿ ಬಂದು ಮಹಿಳೆಯ ಮಾಂಗಲ್ಯಸರ ಕಳವು!

Spread the love

ವಿಳಾಸ ಕೇಳುವ ನೆಪದಲ್ಲಿ ಕಾರಿನಲ್ಲಿ ಬಂದು ಒಂಟಿ ಮಹಿಳೆಯ ಮಾಂಗಲ್ಯಸರ ಕಳವು ಮಾಡಿ ಪರಾರಿಯಾದ ಖದೀಮರು ಪ್ರಕರಣ ದಾಖಲು!

ಕುಣಿಗಲ್;-ಹಸುಗಳನ್ನು ಮೇಯಿಕೊಂಡು ಮನೆಗೆ ತೆರಳುತ್ತಿದ್ದ ಮಹಿಳೆಯ ಬಳಿ ವಿಳಾಸ ಕೇಳುವ ನೆಪದಲ್ಲಿ ಕಾರಿನಲ್ಲಿ ಬಂದಿದ್ದ ಇಬ್ಬರು ಖದೀಮರು ಮಹಿಳೆಯ ಕತ್ತಿನಲ್ಲಿ ಇದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿ ಯಾಗಿರುವ ಘಟನೆ ಶುಕ್ರವಾರ ಕುಣಿಗಲ್ ತಾಲ್ಲೂಕಿನ ಅಮೃತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ತುವೆಕೆರೆ ಗ್ರಾಮದ ಬಳಿ ನಡೆದಿದೆ

ತುವೆಕೆರೆ ಗ್ರಾಮದ (45) ವರ್ಷದ ಜಯಮ್ಮ ಒಡವೆ ಕಳೆದು ಕೊಂಡ ಮಹಿಳೆ ಶುಕ್ರವಾರ ಸಂಜೆ ಜಯಮ್ಮ ಹಸುಗಳನ್ನು ಮೇಯಿಸಿಕೊಂಡು ಮನೆಯ ಕಡೆಗೆ ಹೊಗುತ್ತಿದ್ದ ವೇಳೆ ಕಾರಿನಲ್ಲಿ ಬಂದ ಇಬ್ಬರು ಅಪರಿಚಿತರು ಜಯಮ್ಮರನ್ನು ವಿಳಾಸ ಕೇಳಿದ್ದಾರೆ ವಿಳಾಸ ಹೇಳುತ್ತಿದ್ದಂತೆ ಜಯಮ್ಮ ಕತ್ತಿನಲ್ಲಿ ಇದ್ದ ಲಕ್ಷಾಂತ ರೂಪಾಯಿ ಬೆಲೆ ಬಾಳುವ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಕಾರಿನಲ್ಲಿ ಪರಾರಿಯಾಗಿದ್ದಾರೆ ಇದರಿಂದ ಗಾಬರಿಗೊಂಡ ಮಹಿಳೆ ತಕ್ಷಣ ಕುಟುಂಬಸ್ಥರಿಗೆ ಮಾಹಿತಿ ನೀಡಿ ಆಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಇನ್ನೂ ತಾಲ್ಲೂಕಿನಲ್ಲಿ ಇತ್ತಿಚೇಗೆ ಸರಗಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು ನಾಗರೀಕರ ಆತಂಕಕ್ಕೆ ಕಾರಣವಾಗಿದೆ @publicnewskunigal