
ಜಮೀನು ವಿವಾದ ಹಿನ್ನೆಲೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಅಟ್ಟಾಡಿಸಿ ಮಚ್ಚಿನಿಂದ ಕೈ ಕತ್ತರಿಸಿ ಮಾರಣಾಂತಿಕ ಹಲ್ಲೆ!
ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ವ್ಯಾಪ್ತಿಯ ಸೋಮೆದೇವರ ಪಾಳ್ಯ ಗ್ರಾಮದಲ್ಲಿ ಭಾನುವಾರ ಹನ್ನೊಂದು ಗಂಟೆ ಸಮಯದಲ್ಲಿ ಚಿಕ್ಕಲಿಂಗೆಗೌಡ (48) ತಮ್ಮ ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಏಕಾ ಏಕಿ ತೋಟಕ್ಕೆ ಮಚ್ಚು ಹಿಡಿದು ಬಂದ ಮಂಜುನಾಥ್ ತೋಟದಲ್ಲಿ ಚಿಕ್ಕಲಿಂಗೆಗೌಡನನ್ನು ಅಟ್ಟಾಡಿಸಿಕೊಂಡು ಮಚ್ಚಿನಿಂದ ಎಡಗೈ ಕತ್ತರಿಸಿ ಹಲ್ಲೆ ಮಾಡಿರುವ ಘಟನೆ ನಡೆದಿದ್ದು ಗ್ರಾಮಸ್ಥರನ್ನು ಬೆಚ್ಚಿಬಿಳಿಸಿದೆ
ದೊಡ್ಡಪ್ಪನ ಮಗ ಮಂಜುನಾಥ್ ನಿಂದಲೆ ಕೃತ್ಯ ನಡೆದಿದ್ದು ವಯೋವೃದ್ಧ ತಂದೆ ಎದುರಲ್ಲೆ ಈ ಘಟನೆ ನಡೆದಿದೆ ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಚಿಕ್ಕಲಿಂಗೆಗೌಡನನ್ನು ಸ್ಥಳಿಯರು ಹಾಗೂ ಕುಟುಂಬಸ್ಥರು ಕುಣಿಗಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ಳೂರು ಕ್ರಾಸ್ ನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆಸ್ಪತ್ರೆಗೆ ಬೇಟಿ ನೀಡಿ ಮಾಹಿತಿ ಪಡೆದಿರುವ ಪೊಲೀಸರು ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
ಚಿಕ್ಕಲಿಂಗೆಗೌಡ ತನ್ನ ಅಜ್ಜಿಯನ್ನು ಕಳೆದ ಇಪ್ಪತ್ತು ವರ್ಷಗಳಿಂದ ಸಲಹುತ್ತಿದ್ದ ಕಾರಣ ಆಕೆ ಮರಣಕ್ಕೂ ಮುನ್ನ ತನ್ನ ಪಾಲಿಗೆ ಬರುವ ಆಸ್ತಿಯನ್ನು ಮೊಮ್ಮಗ ಚಿಕ್ಕಲಿಂಗೆಗೌಡ ನ ಹೆಸರಿಗೆ ವಿಲ್ ಬರೆದಿರುವುದನ್ನು ಸಹಿಸಲಾಗದೆ ಈ ರೀತಿ ಮಾಡಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದಾರೆ @publicnewskunigal