
ಎರಡನೇ ದಿನಕ್ಕೆ ಕಾಲಿಟ್ಟ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ ಸಾರ್ವಜನಿಕರಿಗೆ ಸೇವೆಸಿಗದೆ ಕಂದಾಯ ಇಲಾಖೆ ಸ್ತಬ್ಧ!
ಕುಣಿಗಲ್ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ತಾಲ್ಲೂಕು ಕಚೇರಿಯ ಮುಂಭಾಗ ತಾಲ್ಲೂಕು ಗ್ರಾಮ ಆಡಳಿತ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗದೆ ಕಪ್ಪು ಪಟ್ಟಿ ಧರಿಸಿ ಮುಷ್ಕರ ನಡೆಸುತ್ತಿದ್ದು ಮುಷ್ಕರ ಮಂಗಳವಾರ ಎರಡನೆ ದಿನಕ್ಕೆ ಕಾಲಿಟ್ಟಿದ್ದು ಮುಷ್ಕರ ನಿರತ ಅಧಿಕಾರಿಗಳಿಗೆ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಣ್ಣ ಬೆಂಬಲ ವ್ಯಕ್ತಪಡಿಸಿದರು ರಾಜ್ಯದಾದ್ಯಂತ ಗ್ರಾಮ ಆಡಳಿತ ಅಧಿಕಾರಿಗಳು ತಾಲೂಕು ಮಟ್ಟದಲ್ಲಿ ಕರ್ತವ್ಯಕ್ಕೆ ಹಾಜರಾಗದೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತಿದ್ದು ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳಿಗೆ ಈಡೇರಿಸದಿದ್ದಲ್ಲಿ ಮೂರು ದಿನಗಳ ಬಳಿಕ ಜಿಲ್ಲಾಮಟ್ಟ ನಂತರ ರಾಜ್ಯಮಟ್ಟದಲ್ಲಿ ಪ್ರತಿಭಟನೆಯನ್ನು ತೀವ್ರ ಗೋಳಿಸುವುದಾಗಿ ರಾಜ್ಯ ಸಂಘ ನಿರ್ಧರಿಸಿದೆ ಎಂದು ಗ್ರಾಮ ಆಡಳಿತ ಅಧಿಕಾರಿಗಳ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ವೆಂಕಟೇಶ್ ತಿಳಿಸಿದರು
ಗ್ರಾಮೀಣ ಪ್ರದೇಶದ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂಲಭೂತ ಸೌಕರ್ಯ ಹಾಗೂ ಕಚೇರಿಯನ್ನು ನೀಡದೆ ಕೆಲಮಾಡುವಂತೆ ಲ್ಯಾಂಡ್ ಬೀಟ್,ಆಧಾರ್ ಸಿಡಿಂಗ್,ಸೇರಿ ಕಂದಾಯ ಇಲಾಖೆಯ ಬಹುತೇಕ ಕೆಲಸಗಳನ್ನು ಗ್ರಾಮ ಆಡಳಿತ ಅಧಿಕಾರಿಗಳ ಹೆಗಲಿಗೆ ಏರಲಾಗಿದೆ ಕೆಲಸದ ಒತ್ತಡ ಹೆಚ್ಚುತ್ತಿರುವ ಕಾರಣ ಅಧಿಕಾರಿಗಳು ಖಿನ್ನತೆಗೆ ಒಳಗಾಗುತ್ತಿದ್ದಾರೆ ಮೂವತ್ತು ವರ್ಷಗಳಿಂದ ಒಂದೆ ಕಡೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಅಂತರ್ ಜಿಲ್ಲೆಗೆ ವರ್ಗಾವಣೆ ಹಾಗೂ ಕಾಲ ಕಾಲಕ್ಕೆ ಬಡ್ತಿ ನೀಡುವಂತೆ ಸೇರಿ ಹಲವು ಬೇಡಿಕೆಗಳು ಸರ್ಕಾರದ ಮುಂದಿದ್ದು ನಮ್ಮ ಬೇಡಿಕೆಗಳನ್ನು ಇಡೆರಿಸುವ ವರೆಗೆ ಅನಿರ್ದಷ್ಟ ಅವಧಿ ಮುಷ್ಕರ ಕೈ ಬಿಡುವುದಿಲ್ಲ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ರಾಜ್ಯದ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಪದಾಧಿಕಾರಿಗಳು ಸೇರಿ ಮುಷ್ಕರ ಮುಂದುವರಿಸುತ್ತೆವೆ ಎಂದರು ಈ ವೇಳೆ ಗೌರವಾಧ್ಯಕ್ಷರಾದ ಮಹೇಶ್. ಸುಧೀರ್. ಅಶೋಕ್.ಪ್ರಧಾನ ಕಾರ್ಯದರ್ಶಿ ಕಳಸೇಗೌಡ ಉಪಾಧ್ಯಕ್ಷರಾದ ದೀಪಿಕಾ.ಅಜರುದ್ದೀನ್. ವಿಜಯಕುಮಾರ್.ಖಜಾಂಚಿ ಭವ್ಯ.ಪದಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು@publicnewskunigal