ಕೆಂಪನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಅವರಣದಲ್ಲಿ ಕಲಿಕ ಹಬ್ಬ ಆಚರಣೆ!

Spread the love

ಶೈಕ್ಷಣಿಕ ಬಲವರ್ಧನೆಗೆ ಕಲಿಕ ಹಬ್ಬ ಸಹಕಾರಿ ಕೆಂಪನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಅವರಣದಲ್ಲಿ ಕಲಿಕ ಹಬ್ಬ ಆಚರಣೆ!

ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ವ್ಯಾಪ್ತಿಯ ಕೆಂಪನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ ಮಂಗಳವಾರ ಕ್ಲಸ್ಟರ್ ಹಂತದ ಕಲಿಕ ಹಬ್ಬವನ್ನು ಅಮ್ಮಿಕೊಳ್ಳಲಾಗಿತ್ತು ಕೆಂಪನಹಳ್ಳಿ ಗ್ರಾಮದ ಸರ್ಕಲ್ ನಿಂದ ಪೂರ್ಣಕುಂಭ ಕಲಶಗಳನ್ನು ಹೊತ್ತು ಹೆಣ್ಣು ಮಕ್ಕಳು ವಿವಿಧ ಬಗೆಯ ವೇಷ ಭೂಷಣ ತೊಟ್ಟು ಶಿಕ್ಷಕರೊಂದಿಗೆ ಮೆರವಣಿಗೆಯ ಮೂಲಕ ಶಾಲೆಯ ಆವರಣಕ್ಕೆ ಬಂದು ಬಳಿಕ ಕಾರ್ಯಕ್ರಮವನ್ನು ಗಿಡಕ್ಕೆ ನೀರನ್ನು ಹಾಕುವ ಮೂಲಕ ಕೆಂಪನಹಳ್ಳಿ ಗ್ರಾಮ ಪಂಚಾಯ್ತಿಯ ಅಧ್ಯಕ್ಷರಾದ ಹುಚ್ಚೆಗೌಡ ಉದ್ಘಾಟಿಸಿದರು

ಕಾರ್ಯಕ್ರಮದಲ್ಲಿ ಸಿ.ಆರ್.ಪಿ ಲೊಕೇಶ್ ಮಾತನಾಡಿ ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಸರ್ಕಾರಿ ಶಾಲೆಯ ಮಕ್ಕಳ ಶೈಕ್ಷಣಿಕ ಬಲ ವರ್ಧನೆಗಾಗಿ ರಾಜ್ಯ ಸರ್ಕಾರ ಕಲಿಕ ಹಬ್ಬವನ್ನು ಕ್ಲಸ್ಟರ್ ಮಟ್ಟದಲ್ಲಿ ಆಯೋಜಿಸಿದೆ ಪಾಠ ಪ್ರವಚನದಲ್ಲಿ ಹಿಂದೆ ಉಳಿದ ಮಕ್ಕಳನ್ನು ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿಸುವ ಮೂಲಕ ಮಕ್ಕಳು ಕಲಿಕಾ ಸಾಮರ್ಥ್ಯ ಹೆಚ್ಚಿಸುವುದು ಉದ್ದೇಶವಾಗಿದೆ ಎಂದರು

ಇದೆ ವೇಳೆ ಮುಖ್ಯ ಶಿಕ್ಷಕಿ ವಸಂತಮ್ಮ ಮಾತನಾಡಿ ಶಾಲೆಯಲ್ಲಿ ನೂರಕ್ಕೆ ಹೆಚ್ಚು ಮಕ್ಕಳು ಕಲಿಯುತ್ತಿದ್ದು ಶಾಲೆಯ ಆವರಣದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಅಧ್ಯಕ್ಷರಿಗೆ ಮನವಿ ಮಾಡಿದರು,
ಗಮನ ಸೆಳೆದ ಮಕ್ಕಳ ಸೆಲ್ಫಿ ಕಾರ್ನರ್ ಶಾಲೆಯ ಅವರಣದಲ್ಲಿ ಕಲಿಕ ಹಬ್ಬದ ಪ್ರಯುಕ್ತ ಸೆಲ್ಫಿ ಕಾರ್ನರ್ ನಿರ್ಮಿಸಲಾಗಿತ್ತು ಮಕ್ಕಳು ಖುಷಿಯಿಂದ ನಿಂತು ಶಿಕ್ಷಕರೊಂದಿಗೆ ಪೋಟೊ ಕ್ಲಿಕ್ಕಿಸಿಕೊಂಡರು ಸಂತಸ ಪಟ್ಟರು @publicnewskunigal