ಕಠಿಣ ಅಭ್ಯಾಸದಿಂದ ಮಾತ್ರ ಸಾಧನೆ ಶ್ರೀ ನಿಶ್ಚಲಾನಂದ ಸ್ವಾಮೀಜಿ!

Spread the love

ವಿದ್ಯಾರ್ಥಿಗಳು ಛಲದಿಂದ ಕಠಿಣ ವ್ಯಾಸಂಗ ಮಾಡುವ ಮೂಲಕ ಒಳ್ಳೆ ಅಂಕಗಳನ್ನು ಪಡೆದು ತಂದೆ ತಾಯಿಗಳಿಗೆ ಗುರುಗಳಿಗೆ ಸಮಾಜದಲ್ಲಿ ಗೌರವ ತರುವ ವ್ಯಕ್ತಿಗಳಾಗಿ ಹೊರಹೊಮ್ಮ ಬೇಕಾಗಿದೆ ಎಂದು ವಿಶ್ವ ಒಕ್ಕಲಿಗರ ಪೀಠದ ಪೀಠಾಧ್ಯಕ್ಷರಾದ ಶ್ರೀ ನಿಶ್ಚಲಾನಂದ ಸ್ವಾಮೀಜಿಗಳು ಕರೆ ನೀಡಿದರು,

ಕುಣಿಗಲ್‌ ಪಟ್ಟಣದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದ ಜ್ಞಾನಭಾರತಿ ಕಾಲೇಜು ಅವರಣದಲ್ಲಿ ಗುರುವಾರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ವಿಶ್ವ ಒಕ್ಕಲಿಗರ ಪೀಠದ ಪೀಠಾಧ್ಯಕ್ಷರಾದ ಶ್ರೀ ನಿಶ್ಚಲಾನಂದ ಸ್ವಾಮೀಜಿಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮೌಲ್ಯಯುತ ಶಿಕ್ಷಣ ಪಡೆಯುವ ಮೂಲಕ ಸ್ವಾಭಿಮಾನದ ಬದುಕನ್ನ ಕಟ್ಟಿಕೊಳ್ಳಬೇಕು ಉನ್ನತ ಹುದ್ದೆಗೆ ಏರಿದ ಮೇಲೆ ಹುಟ್ಟೂರಿನ ಋಣ ತೀರಿಸುವಂತಹ ಕಾರ್ಯವನ್ನ ಕೈಗೊಳ್ಳುವ ಮೂಲಕ ವಿದ್ಯಾರ್ಥಿ ದಿಸೆಯಲ್ಲಿ ಗುರಿ ಮುಟ್ಟುವ ಶಿಕ್ಷಣವನ್ನ ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಕಠಿಣ ಅಭ್ಯಾಸ ಮಾಡುವುದರ ಮೂಲಕ ಛಲ ಬಿಡದೆ ಸಾಧಿಸುವಂಥ ಗುಣವನ್ನು ಅಳವಡಿಸಿಕೊಂಡಾಗ ಉನ್ನತ ಮಟ್ಟಕ್ಕೆ ಏರುವ ಮೂಲಕ ಸಮಾಜಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ನೀಡುವಂತಹ ವ್ಯಕ್ತಿಗಳಾಗಿ ಹೊರ ಹೊಮ್ಮುತ್ತಾರೆ

ವಿದ್ಯಾರ್ಥಿಗಳು ಬದುಕಿನಲ್ಲಿ ಗುರಿ ಸಾಧಿಸುವ ಛಲ ಸಂಕಲ್ಪಗಳು ನಿಮ್ಮ ಬದುಕನ್ನ ಅಸನು ಮಾಡುತ್ತದೆ ಸಮಾಜಕ್ಕೆ ಅಂತರ್ಮುಖಿಯಾಗಿ ಗುರಿ ಸಾಧಿಸಲು ಸಿದ್ಧರಾಗಬೇಕು ಹಿಂದಿನ ಕಾಲಘಟ್ಟದಲ್ಲಿ ವಿದ್ಯಾಭ್ಯಾಸವು ಕಠಿಣವಾಗಿತ್ತು ಇತ್ತೀಚಿಗೆ ಇವುಗಳು ಸುಲಭವಾಗಿದ್ದು ಒಳ್ಳೆಯ ಶಿಕ್ಷಣ ಸಂಸ್ಥೆಗಳು ತಲೆ ಎತ್ತಿ ನಿಂತಿವೆ ವಿದ್ಯಾರ್ಥಿ ದಿಸೆಯಲ್ಲಿ ಛಲ ಹಾಗೂ ಸಂಕಲ್ಪದಿಂದ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಹಗಲಿರುಳು ಶ್ರದ್ಧೆಯಿಂದ ಓದುವ ಹವ್ಯಾಸಗಳನ್ನು ರೂಡಿಸಿಕೊಳ್ಳಬೇಕು ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಕಠಿಣ ಅಭ್ಯಾಸವಾಗಿ ದಿನನಿತ್ಯ ತುತ್ತು ಅನ್ನಕ್ಕೂ ಪರಿತಪಿಸುವಂತಹ ಕಾಲಘಟ್ಟದಲ್ಲಿದ್ದವು ಪ್ರತಿಯೊಬ್ಬ ವಿದ್ಯಾರ್ಥಿಯು ತಂದೆ ತಾಯಿ ಗುರುಗಳನ್ನ ಗೌರವಿಸುವ ಪರಂಪರೆಯನ್ನ ರೂಡಿಸಿಕೊಳ್ಳಬೇಕಾಗಿದೆ ಈ ಶಾಲೆ ಉತ್ತಮವಾದ ಶಿಸ್ತು ಇರುವುದರಿಂದ ವಿದ್ಯಾರ್ಜನೆಗೆ ಪೂರಕವಾಗಿದ್ದು ಈ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮುಂದಿನ ಪರೀಕ್ಷೆಯಲಿ ರಾಜ್ಯಕ್ಕೆ ರ್‍ಯಾಂಕ್ ತಂದು ಕೊಟ್ಟರೆ ಅಂತಹ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಸಮಾಜದಲ್ಲಿ ಸಂಸ್ಕಾರವಂತ ಉತ್ತಮ ವ್ಯಕ್ತಿಗಳಾಗಿ ಸಂಕಲ್ಪ ಮಾಡಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು ಈ ವೇಳೆ ಒಕ್ಕಲಿಗರ ಸಂಘದ ಅಧ್ಯಕ್ಷ ಮಾಜಿ ಶಾಸಕ ಬಿ ಬಿ ರಾಮಸ್ವಾಮಿಗೌಡ ಮಾತನಾಡುತ್ತಾ ಸನಾತನ ಹಿಂದೂ ಧರ್ಮದಲ್ಲಿ ನಂಬಿಕೆ ಸಂಸ್ಕೃತಿ ಪರಂಪರೆಯನ್ನ ಜಗತ್ತು ನೋಡುವಂತಾಗಿದೆ ವಿದ್ಯಾರ್ಥಿಗಳ ಕಠಿಣ ಗುರಿ ಶ್ರಮದಿಂದ ಸಾಧನೆಯ ಶಿಖರವನ್ನು ತಲುಪಬೇಕಾಗಿದೆ ಎಂದು ನುಡಿದರು ಶಾಲೆಗೆ ಅಗತ್ಯ ಇರುವ ಎಲ್ಲಾ ಸೌಕರ್ಯಗಳನ್ನು ನೀಡಲು ಸಿದ್ದರಿದ್ದೇವೆ ಯಾವುದಾದರೂ ನ್ಯೂನತೆ ಇದ್ದರೆ ತಿಳಿಸಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು ಈ ವೇಳೆ ವಿದ್ಯಾರ್ಥಿಯೊಬ್ಬರು ಲೈಬ್ರರಿಗೆ ಇನ್ನು ಅವಶ್ಯಕತೆವಾದ ಪುಸ್ತಕಗಳು ಬೇಕಾಗಿದೆ ಎಂದರು ತಕ್ಷಣ ಸ್ಪಂಧಿಸಿದ ಅಧ್ಯಕ್ಷರು ಅವುಗಳನ್ನು ತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು ಈ ಸಂದರ್ಭದಲ್ಲಿ ಪ್ರೌಢಶಾಲಾ ಪ್ರಾಚಾರ್ಯರಾದ ಗೋವಿಂದೇಗೌಡ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕಪನಿಪಾಳ್ಯ ರಮೇಶ್,ಒಕ್ಕಲಿಗರ ಸಂಘದ ನಿರ್ದೇಶಕರಾದ ಶಿವಣ್ಣಗೌಡ,ವಕೀಲರಾದ ಚಂದ್ರೇಗೌಡ, ತುವ್ವೆಕೆರೆ ಗಿರೀಶ್,ಬೆಟ್ಟಸ್ವಾಮಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು,ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು ಜರುಗಿದವು @publicnewskunigal