
ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೆಸತ್ತು ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ!
ಕುಣಿಗಲ್ ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಕೊತ್ತಿಪುರ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ಕೀರುಕುಳಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದು ಅಜೀಜ್ ಉನ್ನೀಸಾ (50) ಮೃತ ಮಹಿಳೆಯಾಗಿದ್ದು ಖಾಸಗಿ ಫೈನಾನ್ಸ್ ಹಾಗೂ ಬ್ಯಾಂಕ್ ಗಳಿಂದ ಸುಮಾರು ಹತ್ತು ಲಕ್ಷಕ್ಕಿಂತ ಹೆಚ್ಚು ಸಾಲ ಪಡೆದಿದ್ದರು ಪತಿ ಇಸ್ಮಾಯಲ್ ಪೈಂಟ್ ಕೆಲಸ ಮಾಡುತ್ತಿದ್ದು ಬಜಾಜ್ ಫೈನಾನ್ಸ್.ಐ ಡಿ.ಎಫ್.ಸಿ ಸೇರಿದಂತೆ ವಿವಿಧ ಖಾಸಗಿ ಫೈನಾನ್ಸ್ ಗಳಲ್ಲಿ ಹೆಣ್ಣು ಮಕ್ಕಳ ಮದುವೆಗಾಗಿ ಸಾಲ ಮಾಡಿದ್ದರು ಎಂದು ತಿಳಿದು ಬಂದಿದೆ,
ಇತ್ತಿಚೇಗೆ ಮನೆಯ ಬಳಿ ಬಂದು ಸಾಲ ಕಟ್ಟುವಂತೆ ಖಾಸಗಿ ಫೈನಾನ್ಸ್ ನವರು ಪಿಡಿಸುತ್ತಿದ್ದರು ಎಂಬ ಕಾರಣಕ್ಕೆ ಮನನೊಂದ ಮಹಿಳೆ ಶನಿವಾರ ಮುಂಜಾನೆ ನೇಣು ಬಿಗಿದುಕೊಂಡ ಸಾವನ್ನಪ್ಪಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದು ಘಟನೆ ಸಂಬಂಧ ಕುಟುಂಬಸ್ಥರ ದೂರು ಹಿನ್ನೆಲೆ ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೃತದೇಹವನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ಇರಿಸಲಾಗಿದೆ ಇತ್ತಿಚೇಗೆ ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್ ಗಳಿಗೆ ಅಧಿಕ ಬಡ್ಡಿ ವಸೂಲಾತಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸುಗ್ರೀವಾಜ್ಞೆ ಹೊರಡಿಸಿದ್ದರು ಸಹ ತಾಲ್ಲೂಕಿನಲ್ಲಿ ಆರ್.ಬಿ.ಐ ನ ನಿಯಮಗಳನ್ನು ಉಲ್ಲಂಘಿಸಿ ಖಾಸಗಿ ಫೈನಾನ್ಸ್ ಗಳು ಸಾಲ ನೀಡಿರುವವರಿಗೆ ಸಾಲ ವಸೂಲಾತಿ ನೆಪದಲ್ಲಿ ಕೀರುಕುಳ ನೀಡುತ್ತಿರುವುದು ಮಾತ್ರ ಇನ್ನೂ ತಪ್ಪಿಲ್ಲ ಇನ್ನಾದರು ಸಂಬಂದಪಟ್ಟ ಅಧಿಕಾರಿಗಳು ತಾಲ್ಲೂಕಿನಲ್ಲಿ ಆರ್.ಬಿ.ಐ ನ ನಿಯಮ ಮೀರಿ ಹಣ ವಸೂಲಿಗಿಳಿದಿರುವ ಮೈಕ್ರೋಫೈನಾನ್ಸ್ ಗಳಿಗೆ ಕಡಿವಾಣ ಹಾಕಬೇಕಿದೆ @publicnewskunigal