
ರಸ್ತೆ ಅಪಘಾತದಲ್ಲಿ ಪತ್ನಿ ಕಣ್ಣೆದುರಲ್ಲೆ ಪತಿ ಸಾವು ಪತ್ನಿ ಸ್ಥಿತಿ ಗಂಭೀರ ಸಕಾಲದಲ್ಲಿ ಸಿಗದ ಆಂಬುಲೆನ್ಸ್ ಸೇವೆ ಸ್ಥಳಿಯರ ಆಕ್ರೋಶ!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಬೆಂಗಳೂರು ಸೋಮವಾರಪೇಟೆ ರಾಜ್ಯ ಹೆದ್ದಾರಿ 85ರಲ್ಲಿ ರಸ್ತೆ ಅಪಘಾತ ಸಂಭವಿಸಿ ಪತ್ನಿಯ ಕಣ್ಣೆದುರಲ್ಲೆ ಪತಿ ಸಾವನ್ನಪ್ಪಿದ್ದು ಗಂಭೀರವಾಗಿ ಗಾಯಗೊಂಡಿದ್ದ ಪತ್ನಿಯನ್ನು ಮಾಗಡಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಬೆಂಗಳೂರಿನಿಂದ ಮದ್ದೂರು ತಾಲ್ಲೂಕಿನ ಕೌಡ್ಲೆ ಗ್ರಾಮದ ಸಂಬಂಧಿಕರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಭಾನುವಾರ ಸಂಜೆ ವಾಪಸ್ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯೆ ನಿಲಸಂದ್ರ ಗ್ರಾಮದ ಬಳಿ ಅತಿ ವೇಗವಾಗಿ ಎದುರಿಗೆ ಬಂದ ಕಾರಿನಿಂದ ತಪ್ಪಿಸಿಕೊಳ್ಳಲು ದ್ವಿಚಕ್ರ ವಾಹನವನ್ನು ಎಡಕ್ಕೆ ತಿರುಗಿಸಿದ ವೇಳೆ

ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಬೆಕ್ಕಳಲೆ ಗ್ರಾಮದ ಆನಂದ್(50) ಸಾವನ್ನಪ್ಪಿದ್ದು ಕೌಡ್ಲೆ ಗ್ರಾಮದ ಪತ್ನಿ ಸುನಿತ (45)ಗಂಭೀರವಾಗಿ ಗಾಯಗೊಂಡಿದ್ದನ್ನು ಕಂಡ ನೀಲಸಂದ್ರ ಗ್ರಾಮಸ್ಥರು 108 ತುರ್ತು ಸಹಾಯವಾಣಿ ಕರೆ ಮಾಡಿದರು ಕುಣಿಗಲ್.ಹುಲಿಯೂರುದುರ್ಗ.ಹಾಗೂ ಮಾಗಡಿಯಿಂದ ಯಾವುದೆ ಆಂಬುಲೆನ್ಸ್ ಸಂಪರ್ಕ ಸಿಗದೆ ಕೊನೆಗೆ ಅಪಘಾತಲ್ಲಿ ಸಾವನ್ನಪ್ಪಿದ ಆನಂದ್ ಕಡೆಯವರು ಕೌಡ್ಲೆ ಗ್ರಾಮದಿಂದ ಅಪಘಾತ ಸ್ಥಳಕ್ಕೆ ಬಂದ ಸಂಬಂಧಿಕರು ಒಂದ ಗಂಟೆಯ ಬಳಿಕ ಗಂಭಿರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಕಾರಿನಲ್ಲಿ ಮಾಗಡಿ ಆಸ್ಪತ್ರೆಗೆ ಕರೆದೊಯ್ಯಿದ್ದಾರೆ ಅಪಘಾತವಾದ ವೇಳೆ ಜಿವಂತಾವಾಗಿದ್ದ ಆನಂದ್ ಅರ್ಧ ಗಂಟೆಯ ಬಳಿಕ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ ಇತ್ತಿಚೇಗೆ ರಾಜ್ಯ ಹೆದ್ದಾರಿ 85 ರಲ್ಲಿ ಅಪಘಾತ ಸಂಭವಿಸಿದರೆ ದೇವರೆ ಗತಿ ಎಂಬಂತಾಗಿದೆ
ತುರ್ತು ಸಹಾಯವಾಣಿ ಸಂಪರ್ಕಿಸಿದವರಿಗೆ ನಾಗಮಂಗಲ.ರಾಮನಗರ.ಅಥವಾ ಮದ್ದೂರಿನಿಂದ ಆಂಬುಲೆನ್ಸ್ ಬರಬೇಕಾಗುತ್ತದೆ ಎಂದು 108 ಸಹಾಯವಾಣಿ ಯಿಂದ ತಿಳಿಸಿದ ಕಾರಣ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ ರಾಜ್ಯ ಹೆದ್ದಾರಿ 85ರಲ್ಲಿ ಪದೆ ಪದೆ ಅಪಘಾತಗಳು ಸಂಬವಿಸುತ್ತಿದ್ದು ಅಪಘಾತದಲ್ಲಿ ಗಾಯಗೊಂಡರೆ ಸಕಾಲದಲ್ಲಿ ವೈದ್ಯಕೀಯ ಸೇವೆ ಅಥವಾ ಆಂಬುಲೆನ್ಸ್ ಸಿಗದೆ ಗಾಯಾಳುಗಳು ಸಾವನ್ನುತ್ತಿದ್ದು ಪದೆ ಪದೆ ಇಂತಹ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳ ಕಾರಿ ಸಂಗತಿ ಸಂಬಂಧಪಟ್ಟ ಅಧಿಕಾರಿಗಳು ಜನ ಪ್ರತಿನಿಧಿಗಳು ಇತ್ತ ಗಮನ ಹರಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕಾಗಿದೆ ಎಂದು ಸ್ಥಳಿಯರು ಒತ್ತಾಯಿಸಿದ್ದಾರೆ @publicnewskunigal