ಹುತ್ರಿದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಾಂಗ್ರೆಸ್‌ ತೆಕ್ಕೆಗೆ ಗೆದ್ದರು ಸಂಭ್ರಮಿಸದ ಕಾಂಗ್ರೆಸ್!

Spread the love

ಹುತ್ರಿದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಾಂಗ್ರೆಸ್‌ ತೆಕ್ಕೆಗೆ ಗೆದ್ದರು ಸಂಭ್ರಮಾಚರಣೆ ಮಾಡದೆ ತೆರಳಿದ ಕಾಂಗ್ರೆಸ್ ಮುಖಂಡರು!

ಕುಣಿಗಲ್‌ ತಾಲ್ಲೂಕಿನ ಹುತ್ರಿದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೆಶಕರ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆ ಸಾಕಷ್ಟು ಕೂತುಹಲಕ್ಕೆ ಕಾರಣವಾಗಿತ್ತು ಸಾಲಗಾರರ ಸಾಮಾನ್ಯ ಕೇತ್ರದಿಂದ ಎಚ್.ಬಿ ಉಮೇಶ್, ಬೋರೇಗೌಡ,ಗಂಗವೀರಯ್ಯ,ದೇವರಾಜು,ಶಿವಶಂಕರ್ ವೈ.ಡಿ ಹಿಂದುಳಿದ ವರ್ಗ.ಎ ಕ್ಷೇತ್ರದಿಂದ ಹೀನಾಯತ್ ಉಲ್ಲಾಖಾನ್ ಹಿಂದುಳಿದ ವರ್ಗ.ಬಿ ಕ್ಷೇತ್ರದಿಂದ ಗಂಗಾಧರಯ್ಯ ಅವಿರೋಧ ಆಯ್ಕೆಯಾದರೆ ಮಹಿಳಾ ಮೀಸಲು ಕೇತ್ರದಿಂದ ಭಾಗ್ಯಮ್ಮ ಹಾಗೂ ಪುಷ್ಪಲತಾ ಪರಿಶಿಷ್ಟಜಾತಿ ಮೀಸಲು ಕ್ಷೇತ್ರದಿಂದ ಕುಮಾರ.ಸಿ ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದಿಂದ ರವಿಕುಮಾರ್ ಎಚ್.ಎಸ್ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ 1444 ಮತದಾರರನ್ನು ಹೊಂದಿರುವ ಹುತ್ರಿದುರ್ಗ ಪ್ರಾಥಮಿಕ ಕೃಷ ಪತ್ತಿನ ಸಹಕಾರ ಸಂಘದ ನಿರ್ದೆಶಕರ ಚುನಾಣೆ ಈ ಭಾರಿ ಗ್ರಾಮ ಪಂಚಾಯ್ತಿ ಚುನಾವಣೆಯ ಮಾದರಿಯಲ್ಲೆ ನಡೆದು ಭಾರಿ ಚರ್ಚೆಗೆ ಗ್ರಾಸವಾಗಿ ಜಿದ್ದಾಜಿದ್ದಿನ ಕಣವಾಗಿ ಬದಲಾವಣೆಗೊಂಡು ಈ ಭಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಿರ್ದೇಶಕರ ಅಭ್ಯರ್ಥಿಗಳು ಪೈಪೋಟಿಗೆ ಇಳಿದು ಪ್ರಚಾರ ನಡೆಸಿದ್ದರು

ಒಂದು ಸ್ಥಾನ ಅವಿರೋಧ ಆಯ್ಕೆಯಾದರೆ ಇನ್ನೂ ಉಳಿದ ಹತ್ತು ಸ್ಥಾನಗಳಿಗೆ ಚುನಾವಣೆ ನಡೆದಿದೆ ಮತದಾನ ಪ್ರಾರಂಭವಾದ ವೇಳೆ ಕಾಂಗ್ರೆಸ್‌ ಹಾಗೂ ಎನ್‌.ಡಿ.ಎ ಎರಡು ಬಣಗಳ ನಡುವವೆ ಮತ ಹಾಕಿಸುವ ವಿಷಯಕ್ಕೆ ಮಾತಿನ ಚಕಮಮಕಿ ನಡೆದಿದೆ ನಂತರ ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿ ತಿಳಿಗೋಳಿಸಿದರು ಚುನಾವಣೆ ಮುಗಿದು ಫಲಿತಾಂಶ ಹೊರಬಿಳುವ ವರೆಗೆ ಹುತ್ರಿದುರ್ಗ ಪ್ರಾಥಮಿಕ ಶಾಲೆಯ ಅವರಣದಲ್ಲಿ ಸಾವಿರಾರು ಮಂದಿ ಜಮಾವಣೆಗೊಂಡಿದ್ದರು ತೀವ್ರ ಕೂತುಹಲಕ್ಕೆ ಕಾರಣವವಾಗಿದ್ದ ಗ್ರಾಮ ಪಂಚಾಯ್ತಿ ಸದಸ್ಯ ಹಾಲುವಾಗಿಲು ಮುರುಗೇಶ್‌ ಗೌಡ (ಸ್ವಾಮಿ) ಹಾಗೂ ಯಲಚವಾಡಿ ಗ್ರಾಮದ ವಕೀಲ ಶಿವಶಂಕರ್‌ ನಡುವಿನ ಪೈಪೊಟಿಯಲ್ಲಿ ಹತ್ತು ಮತಗಳ ಅಂತರದಿಂದ ಶಿವಶಂಕರ್ ವೈ.ಡಿ ಜಯಗಳಿಸಿದ ಹಿನ್ನೆಲೆ ಸಂಭ್ರಮಾಚರಣೆಗೆ ನಿಂತಿದ್ದ ಕಾಂಗ್ರೆಸ್‌ ಮುಖಂಡರು ಹಾಗೂ ಬೆಂಬಲಿಗರ ಅಸಮಾಧನಗೊಂಡ ಹಿನ್ನೆಲೆ ಸಭ್ರಮಾಚರಣೆಯ ದಿಕ್ಕನ್ನೆ ಬದಲಿಸಿತ್ತು ಚುನಾವಣೆಯ ಸ್ಥಳದಲ್ಲಿ ಬಿಡುಬಿಟ್ಟಿದ್ದ ಪ್ರಭಾವಿ ಮುಖಂಡರು ಮುರುಗೇಶ್ ಗೌಡ ಪರಾಜಿತಗೊಂಡ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಸಂಭ್ರಮಾಚರಣೆ ಮಾಡದೆ ತಂದಿದ್ದ ಹೂವಿನ ಹಾರಗಳು ಹಾಗೂ ಸಿಹಿತಿನಿಸು ಪಟಾಕಿ ತೆಗೆದುಕೊಂಡು ವಾಪಸ್ ತೆರಳಿದ ಪ್ರಸಂಗ ಜರುಗಿತು ಸ್ವತಂತ್ರ ಅಭ್ಯರ್ಥಿಯಾಗಿ ಜಯಗಳಿಸಿದ್ದ ವಕೀಲ ಶಿವಶಂಕರ್ ಬೆಂಬಲಿಗರಿಗೆ ಮತದಾನ ಮಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ಸಂಭ್ರಮಿಸಿದರು @publicnewskunigal