
ಕುಣಿಗಲ್ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಗಾದಿಗೆ ಮುಹೂರ್ತ ಫಿಕ್ಸ್ ಹಾಗಿದ್ದು ತೆರೆಮರೆಯಲ್ಲಿ ಅಧಿಕಾರ ಹಿಡಿಯಲು ಸದಸ್ಯರು ಕಸರತ್ತುನ ನಡೆಸುತ್ತಿದ್ದಾರೆ!
ಕುಣಿಗಲ್;-ಪಟ್ಟಣದ ಪುರಸಭೆಗೆ ಎರಡನೆ ಅವಧಿಗೆ 21ತಿಂಗಳ ನಂತರ ಬಾಕಿ ಉಳಿದಿರುವ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ಘೋಷಣೆ ಮಾಡಿದ್ದು,ಮಾರ್ಚ್ 20 ರಂದು ಚುನಾವಣೆ ದಿನಾಂಕ ನಿಗದಿಪಡಿಸಿ ಚುನಾವಣಾಧಿಕಾರಿ ಆದೇಶ ಹೊರಡಿಸಿದ್ದಾರೆ ಪುರಸಭೆಯ ಮೊದಲ ಅವಧಿ ನಂತರ ಎರಡನೆ ಅವಧಿ ಮೀಸಲಾತಿ ಪುನರ್ ರಚನೆ ಪ್ರಕ್ರಿಯೆ ವಿಳಂಬವಾದ ಹಿನ್ನೆಲೆ ತುಮಕೂರು ಉಪ ವಿಭಾಗಾಧಿಕಾರಿಗಳನ್ನು ಕುಣಿಗಲ್ ಪಟ್ಟಣದ ಪುರಸಭೆಗೆ ಆಡಳಿತ ಅಧಿಕಾರಿಯನ್ನಾಗಿ ನೇಮಿಸಲಾಗಿತ್ತು
16 ತಿಂಗಳು ಕಳೆದ ನಂತರ ಎರಡನೆ ಅವಧಿಗೆ ಮೀಸಲಾತಿ ಪ್ರಕಟಗೊಂಡಿದ್ದು ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟಜಾತಿಗೆ ಮೀಸಲು ಘೋಷಣೆಯಾಗಿದ್ದು ಕಾಂಗ್ರೆಸ್ ನಲ್ಲಿರುವ ಬಹುತೇಕರು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಗಾದಿಗೆ ಮಾಜಿ ಸಂಸದರು ಹಾಗೂ ಹಾಲಿ ಶಾಸಕರಿಗೆ ದುಂಬಲು ಬಿದ್ದಿದ್ದಾರೆ ಈ ಭಾರಿ ಪುರಸಭೆಯ ಗದ್ದಿಗೆ ಏರಲು ಚುನಾವಣೆಯಲ್ಲಿ ಆಕಾಂಕ್ಷಿಗಳ ನಡುವೆ ಬಾರಿ ಪೈಪೋಟಿಗೂ ಕಾರಣವಾಗಿದೆ ಈಗಾಗಲೇ ಎಲ್ಲಾ ಪುರಸಭಾ ಸದಸ್ಯರುಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು ವಾರ್ಡ್ ನಂಬರ್ ಏಳರ ಸದಸ್ಯತ್ವಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥಕ್ಕೆ ಬಾಕಿ ಇರುವುದರಿಂದ ನ್ಯಾಯಾಲಯದಿಂದ ಸದಸ್ಯತ್ವ ರುಜುವಾತ್ತು ಪಡಿಸಿರುವ ದಾಖಲೆಯನ್ನು ಹಾಜರು ಪಡಿಸುವಂತಹ ಸದಸ್ಯರಿಗೆ ಮಾರ್ಚ್ 20 ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ನೀಡಲಾಗುವುದು ಎಂದು ಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ @publicnewskunigal