
ಕೆಲಸಕ್ಕೆ ಹೊಗುವುದಾಗಿ ಹೇಳಿ ತೆರಳಿದ ಯುವತಿ ನಾಪತ್ತೆ ಕೆರೆಯ ಏರಿಯ ಬಳಿ ಯುವತಿ ವಸ್ತುಗಳು ಪತ್ತೆ ಆತ್ಮಹತ್ಯೆ ಶಂಕೆ!
ಬೆಂಗಳೂರಿನಿಂದ ಶಿವರಾತ್ರಿ ಹಬ್ಬದ ಪ್ರಯುಕ್ತ ಊರಿಗೆ ಬಂದಿದ್ದ ಯುವತಿ ಮತ್ತೆ ಬೆಂಗಳೂರಿಗೆ ಕೆಲಸಕ್ಕೆ ತೆರಳುವುದಾಗಿ ಹೇಳಿ ಅಣ್ಣನ ಬಳಿ ಬೈಕ್ ನಲ್ಲಿ ಪಟ್ಟಣಕ್ಕೆ ಡ್ರಾಪ್ ಪಡೆದುಕೊಂಡು ಬಳಿಕ ನಾಪತ್ತೆಯಾಗಿರುವ ಘಟನೆ ನಡೆದಿದೆ ಕುಣಿಗಲ್ ತಾಲೂಕಿನ ಕೊತ್ತಗೆರೆ ಹೋಬಳಿ ವ್ಯಾಪ್ತಿಯ ಸೋಬಗಾನಹಳ್ಳಿ ಗ್ರಾಮದ ನಿವಾಸಿ ಸುಮಾ (25) ನಾಪತ್ತೆಯಾದ ಯುವತಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸಮಾಡುತ್ತಿದ್ದ ಯುವತಿ ಗುರುವಾರ ಬಳಗ್ಗೆ 7-15 ರಲ್ಲಿ ಪಟ್ಟಣಕ್ಕೆ ಬಂದ ಯುವತಿ ಬೆಂಗಳೂರಿಗೆ ತೆರಳಿ ವಾಪಸ್ ಕುಣಿಗಲ್ ಗೆ ಬಂದ್ದಿರುವ ಬಗ್ಗೆ ಯುವತಿಯ ಬ್ಯಾಗ್ ನಲ್ಲಿ ಬಸ್ಸ್ ಟಿಕೆಟ್ ಪತ್ತೆಯಾಗಿದೆ ಮಧ್ಯಾಹ್ನ 2-30 ರ ಸಮಯದಲ್ಲಿ ಅಪರಿಚಿತರು ಕುಟುಂಬಸ್ಥರಿಗೆ ಕರೆಮಾಡಿ ಯುವತಿಗೆ ಸಂಬಂಧಿಸಿದ ವಸ್ತುಗಳು ಕುಣಿಗಲ್ ಪಟ್ಟಣದ ದೊಡ್ಡ ಕೆರೆಯ ಬಳಿ ಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಇದು ಪೋಷಕರ ಆತಂಕಕ್ಕೆ ಕಾರಣವಾಗಿದೆ ಕೆಲಸಕ್ಕೆ
ಹೋಗುವುದಾಗಿ ಹೇಳಿ ತೆರಳಿದ ಯುವತಿ ಇತ್ತ ಕೆಲಸಕ್ಕೂ ಹೋಗದೆ ಅಂತ ಸಂಬಂಧಿಕರ ಮನೆಗೆ ಹೋಗದೆ ಇರುವುದು ಕಂಡುಬಂದಿದ್ದು ಬ್ಯಾಗು.ಚಪ್ಪಲಿ.ಮೊಬೈಲ್ ಫೋನ್.ಪಟ್ಟಣದ ದೊಡ್ಡಕೆರೆಯ ಬಳಿ ಪತ್ತೆಯಾಗಿದ್ದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು ಇನ್ನೂ ಯುವತಿಯ ವಸ್ತುಗಳು ಪತ್ತೆಯಾದ ಸ್ಥಳದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಯವರು ಹುಡುಕಾಟ ನಡೆಸಿದರು ಸಹ ಪತ್ತೆಯಾಗದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ ಶುಕ್ರವಾರ ಮತ್ತೆ ಕಾರ್ಯಚರಣೆ ಮುಂದುವರಿಲಿದ್ದು ಘಟನೆ ಸಂಬಂಧ ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಘಟನೆಯ ಬಗ್ಗೆ ಮಾಹಿತಿ ಪಡೆದ ಕುಣಿಗಲ್ ಶಾಸಕ ಡಾ,ರಂಗನಾಥ್ ಕುಣಿಗಲ್ ಪಟ್ಟಣದ ದೊಡ್ಡಕೆರೆಯ ಬಳಿ ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಸ್ಪೀಡ್ ಬೋಟ್ ನಲ್ಲಿ ತೆರಳಿ ಯುವತಿಯ ಮೃತ ದೇಹಕ್ಕಾಗಿ ಹುಡುಕಾಟ ನಡೆಸಿದ್ದಾರೆ ಇದಲ್ಲದೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದು ಏನೇ ಆಗಲಿ ಎಂತಹ ಕಷ್ಟಗಳು ಬರಲಿ ನಿಮ್ಮನ್ನು ನಂಬಿಕೊಂಡು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರು ಇರುವ ಕಾರಣ ಯಾರೂ ಕೂಡ ಈ ರೀತಿ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ @publicnewskunigal