
ಸ್ನೇಹಿತನ ಮನೆಗೆ ಹಬ್ಬಕ್ಕೆ ಬಂದಿದ್ದ ಯುವಕನೊರ್ವ ಬಾವಿಯಲ್ಲಿ ಈಜಲು ಹೋಗಿ ಮುಳುಗಿ ಸಾವನಪ್ಪಿರುವ ಘಟನೆ ಬೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ!
ಬೆಂಗಳೂರಿನ ಸಪ್ತಗಿರಿ ವಿಶ್ವವಿದ್ಯಾಲಯದಲ್ಲಿ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ.ಉಡುಪಿ ಮೂಲದ ಪೂರ್ಣೇಶ್ ತನ್ನ ಸ್ನೇಹಿತರೊಂದಿಗೆ ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ವ್ಯಾಪ್ತಿಯ ಬೆಟ್ಟಹಳ್ಳಿ ಗ್ರಾಮದ ಮನು ಎಂಬುವವರ ಮನೆಗೆ ಶಿವರಾತ್ರಿ ಹಬ್ಬದ ಪ್ರಯುಕ್ತ ಪೂರ್ಣೇಶ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಬೆಟ್ಟಹಳ್ಳಿ ಗ್ರಾಮಕ್ಕೆ ಹಬ್ಬಕೆಂದು ಬಂದಿದ್ದ ಯುವಕರು ಸ್ನೇಹಿತ ಮನು ಮನೆಯಲ್ಲಿ ಊಟ ಮಾಡಿಕೊಂಡು ತೋಟವನ್ನು ನೋಡಲು ಹೋಗಿದ್ದ ವೇಳೆ ತೋಟದಲ್ಲಿದ್ದ ಕಲ್ಲಿನ ಬಾವಿಯಲ್ಲಿ ಈಜು ಬಾರದ ಕಾರಣ ಕಲ್ಲು
ಹಿಡಿದುಕೊಂಡು ಈಜಲು ಹೋಗಿದ್ದಾನೆ ಈ ವೇಳೆ ಈಜು ಬಾರದೆ ಇದ್ದುದ್ದರಿಂದ ನೀರಿನಲ್ಲಿ ತನ್ನ ಸ್ನೇಹಿತರ ಕಣ್ಣೆದುರೇ ಮುಳುಗಿ ಸಾವನ್ನಪ್ಪಿದ್ದಾನೆ ಬಾವಿಯ ದಡದಲ್ಲಿದ್ದ ಮೂರು ಜನ ಸ್ನೇಹಿತರಿಗೆ ಈಜು ಬಾರದ ಕಾರಣ ಕಣ್ಣೆದುರೇ ಮುಳುಗುತ್ತಿದ್ದ ತನ್ನ ಸ್ನೇಹಿತನನ್ನ ಉಳಿಸಿಕೊಳ್ಳಲಾಗದೆ ಪರದಾಡಿದ್ದಾರೆ ವಿಷಯ ತಿಳಿದ ಗ್ರಾಮಸ್ಥರು ತೋಟದ ಬಳಿ ಬಂದು ಸಾವನ್ನಪ್ಪಿರುವ ಯುವಕನ ಶವವನ್ನು ಬಾವಿಯಿಂದ ಹೊರ ತೆಗೆದಿದ್ದಾರೆ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದರು ಘಟನೆ ಸಂಬಂಧ ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ @publicnewskunigal