
ಕೊತ್ತಗೆರೆ ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಚಿಕ್ಕತಾಯಮ್ಮ ಅವಿರೋಧ ಆಯ್ಕೆ!
ಕುಣಿಗಲ್ ತಾಲ್ಲೂಕಿನ ಕೊತ್ತಗೆರೆ ಗ್ರಾಮ ಪಂಚಾಯಲ್ಲಿ ಸದಸ್ಯರ ಅವಿಶ್ವಾಸದಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಚಿಕ್ಕತಾಯಮ್ಮ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ ಈ ವೇಳೆ ಗ್ರಾಮ ಪಂಚಾಯ್ತಿ ಸದಸ್ಯ ಸ್ವಾಮಿ ಮಾತನಾಡಿ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಹಾಗೂ ಯಾವುದೆ ಸಭೆಗಳನ್ನು ನಡೆಸದೆ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ದಿ ಕಾರ್ಯಗಳು ಕುಠಿತಗೊಡ್ಡಿದ್ದು ಈ ಹಿನ್ನೆಲೆಯಲ್ಲಿ ಸರ್ವ ಸದಸ್ಯರು ನಿರ್ಣಯ ಕೈಗೊಂಡು
ತುಮಕೂರು ಉಪ ವಿಭಾಗಾಧಿಕಾರಿಗಳ ಮುಂದೆ ಅವಿಶ್ವಾಸ ಮಂಡಿಸಿದ ಹಿನ್ನೆಲೆ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸರ್ವ ಸದಸ್ಯರು ಒಮ್ಮತದಿಂದ ಚಿಕ್ಕತಾಯಮ್ಮ ರವರನ್ನು ಉಳಿದ ಅವಧಿಗೆ ಅಧ್ಯಕ್ಷರನ್ನಾಗಿ ಅವಿರೋಧ ಆಯ್ಕೆ ಮಾಡಿದ್ದೆವೆ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ಮೂಲಕ ಗ್ರಾಮ ಪಂಚಾಯಿತಿಯನ್ನು ಅಭಿವೃದ್ದಿ ದಿಕ್ಕಿನಲ್ಲಿ ಕೊಂಡೊಯ್ಯುವ ಕೆಲಸ ಮಾಡಲಾಗುವುದು ಎಂದರು ಚುನಾವಣೆ ಅಧಿಕಾರಿಯಾಗಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣ ಅಧಿಕಾರಿ ಎಸ್.ನಾರಾಯಣ್ ಕಾರ್ಯನಿರ್ವಹಿಸಿದ್ದರು ಪಿಡಿಒ ಹೊನ್ನಸ್ವಾಮಿ,ಉಪಾಧ್ಯಕ್ಷರಾದ ಸರೋಜಮ್ಮ, ಸದಸ್ಯರಾದ ಮೋಹನ್ ಕುಮಾರ್, ಚೆಲುವ ಮೂರ್ತಿ(ಸ್ವಾಮಿ),ರಾಜೀವ್,ಚೆನಿಂಗಪ್ಪ,ಪರಮೇಶ್,ಫುಟ್ಟಸಿದ್ದಮ್ಮ,ಜ್ಯೋತಿ,ಹನುಮಮ್ಮ ಸೇರಿದಂತೆ ಸ್ಥಳಿಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು@publicnewskunigal