
ರಸ್ತೆಗೆ ಪಕ್ಕದಲ್ಲಿದ್ದ ಬೋರ್ಡ್ ತೆರವು ಮಾಡಿದ್ದಕ್ಕೆ ಹಾಲಿ ಸದಸ್ಯ ಹಾಗೂ ಮಾಜಿ ಅಧ್ಯಕ್ಷನಿಂದ ಅವಾಚ್ಚ ಶಬ್ದಗಳಿಂದ ಪುರಸಭೆ ಮುಖ್ಯಧಿಕಾರಿಗೆ ನಿಂದಿಸಿರುವ ಘಟನೆ ನಡೆದಿದೆ!
ಕುಣಿಗಲ್ ಪಟ್ಟಣದಲ್ಲಿ ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಪುಟ್ಬಾತ್ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಗುರುವಾರ ಪುರಸಭೆಯ ಮುಖ್ಯಾಧಿಕಾರಿ ಜಿ,ಮಂಜುಳ ನೆತೃತ್ವದಲ್ಲಿ ಪೊಲೀಸರ ತಂಡ ಹಾಗೂ ಪುರಸಭೆಯ ಸಿಬ್ಬಂದಿವರ್ಗ ಲೋಕೊಪಯೊಗಿ ಇಲಾಖೆಯ ಅಧಿಕಾರಿಗಳ ತಂಡ ಎರಡು ಜೆಸಿಬಿ ಎರಡು ಟ್ರಾಕ್ಟರ್ ಒಂದು ಕ್ರೇನ್ ಮೂಲಕ ತೆರವು ಕಾರ್ಯಚರಣೆಯನ್ನು ನಡೆಸಿದರು ಕೆಲವು ಕಡೆಗಳಲ್ಲಿ ಎಚ್ಚೆತ್ತ ಅಂಗಡಿ ಮಾಲೀಕರು ಸ್ವಯಂ ಪ್ರೇರಿತವಾಗಿ ಅಂಗಡಿ ಮಳಿಗೆಗಳ ಮುಂಬಾಗ ಪುಟ್ಬಾತ್ ಗೆ ಹೊಂದಿಕೊಂಡಂತೆ ಅಳವಡಿಸಲಾಗಿದ್ದ ಕಬ್ಬಿಣ ಹಾಗೂ ಶೀಟ್ ಗಳನ್ನು ಸಾರ್ವಜನಿಕರು ತೆರವುಗೋಳಿಸಿದರು ಇದಾದ ಬಳಿಕ
ಪಟ್ಟಣದ ತಹಶೀಲ್ದಾರ್ ವಸತಿಗೃಹದ ಮುಂಭಾಗ ರಸ್ತೆಗೆ ಹೊಂದಿಕೊಂಡಂತೆ ಇದ್ದ ಗಿಡ ಬೆಳೆಸಿ ಪರಿಸರ ಉಳಿಸಿ ಎಂಬ ಬರಹ ಇದ್ದ ಹಾಗೂ ಶಾಸಕರು ಮಾಜಿ ಸಂಸದರು ಭಾವಚಿತ್ರವಿದ್ದ ನಾಮ ಫಲಕ ತೆರವು ಮಾಡಿದ ಕಾರಣಕ್ಕೆ ಆಕ್ರೋಶಗೊಂಡ ಮಾಜಿ ಪುರಸಭಾ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ರಂಗಸ್ವಾಮಿ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಅವಾಚ್ಚ ಶಬ್ದಗಳಿಂದ ನಿಂದಿಸಿದ್ದಲ್ಲದೆ ದೂರವಾಣಿ ಮೂಲಕ ಕರೆ ಮಾಡಿ ಪುರಸಭೆಯ ಮುಖ್ಯಾಧಿಕಾರಿ ಜಿ.ಮಂಜುಳಾ ರವರಿಗೆ ಅವಾಚ್ಚ ಶಬ್ದಗಳಿಂದ ನಿಂದಿಸಿದ ಘಟನೆ ನಡೆಯಿತು.ಗುರುವಾರ ಬೆಳಗ್ಗೆಯಿಂದ ಪಟ್ಟಣದ ಮಲ್ಲಿಪಾಳ್ಯ ಕಡೆಯಿಂದ ಪ್ರಾರಂಭಿಸಿ ಹುಚ್ಚಮಾಸ್ತಿಗೌಡ ವೃತ್ತದವರೆಗೆ ಪುಟ್ಬಾತ್ ಒತ್ತುವರಿ ತೆರವು ಕಾರ್ಯಾಚರಣೆ ಮಾಡಲಾಯಿತು ಹಲವು ಕಡೆಗಳಲ್ಲಿ ಅಂಗಡಿ ಮಳಿಗೆಯ ಮಾಲೀಕರು ಹಾಗೂ ಪುರಸಭೆಯ ಅಧಿಕಾರಿವರ್ಗ ದವರೊಂದಿಗೆ ಮಾತಿನ ಚಕಮಕಿ ನಡೆದರು ಈ ಗಾಗಲೆ ಗಡುವು ನೀಡಿದ ಸಮಯ ಕಳೆದಿದ್ದು ಹಾದ ಕಾರಣ ತೆರವು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು ಇನ್ನೂ ತಾಲ್ಲೂಕು ಪಂಚಾಯಿತಿಯ ಮುಂಭಾಗ ಅಂಗವಿಕಲನೊರ್ವ ಇಟ್ಟಿದ್ದ ಅಂಗಡಿ ಮಳಿಗೆಯನ್ನು ತಾತ್ಕಾಲಿಕವಾಗಿ ತಾಲ್ಲೂಕು ಕಚೇರಿಯ ಅವರಣಕ್ಕೆ ಸ್ಥಳಾಂತರಿಸಲಾಯಿತು ಶುಕ್ರವಾರ ಮತ್ತು ಶನಿವಾರದ ವರೆಗೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುವುದು ಸಾರ್ವಜನಿಕರು ಸಹಕರಿಸಬೇಕೆಂದು ಮುಖ್ಯಧಿಕಾರಿ ಜಿ.ಮಂಜುಳಾ ತಿಳಿಸಿದರು @publicnewskunigal