
ಕಳೆದ ಮೂರು ದಿನಗಳಿಂದ ಗ್ರಾಮದಲ್ಲಿ ಆವರಿಸಿದ ಕತ್ತಲು ಕುಡಿಯುವ ನೀರಿಗೆ ಸಮಸ್ಯೆ ಹಬ್ಬದ ಖುಷಿಯಲ್ಲಿ ಇದ್ದವರಿಗೆ ಕರೆಂಟ್ ಶಾಕ್!
ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಡಿ,ಹೊಸಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೀಗೆಪಾಳ್ಯ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದಲೂ ಸಹ ವಿದ್ಯುತ್ ಇಲ್ಲದೆ ಗ್ರಾಮಸ್ಥರು ಕಗ್ಗತಲೆಲ್ಲಿದ್ದು ಕುಡಿಯುವ ನೀರಿಗೂ ಸಹ ಸಮಸ್ಯೆಯಾಗಿದೆ ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದರು ಸಹ ಗ್ರಾಮದಲ್ಲಿ ಕೆಟ್ಟಿರುವ ವಿದ್ಯುತ್ ಪರಿವರ್ತವನ್ನು ಸರಿಪಡಿಸಿದೆ ಇರುವ ಕಾರಣ ಗ್ರಾಮದಲ್ಲಿ ಈಗ ಕತ್ತಲ ಜೋತೆಗೆ ಕುಡಿಯುವ ನೀರಿಗೂ ಸಹ ಸಮಸ್ಯೆಯಾಗಿದೆ ಗ್ರಾಮದಲ್ಲಿ ಹಬ್ಬವಿರುವ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳ ಹಿಂದ ಬೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಕೆಟ್ಟಿರುವ ವಿದ್ಯುತ್ ಪರಿವರ್ತಕ ಬದಲಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು ಬೆಸ್ಕಾಂ ನಿಂದ ಪರಿವರ್ತಕ ಅಳವಡಿಸಿ ದಿನ ಕಳೆದಿಲ್ಲ ಮತ್ತೆ ಪರಿವರ್ತಕ ಕೆಟ್ಟು ಮೂರು ದಿನ ಕಳೆದರೂ ಇನ್ನು ವಿದ್ಯುತ್ ಪರಿವರ್ತಕ ಅಳವಡಿಸಿಲ್ಲ ಇದರಿಂದಾಗಿ ಗ್ರಾಮದಲ್ಲಿ ಸಂಪೂರ್ಣ ಕತ್ತಲು ಆವರಿಸಿದ್ದು ಇದರಿಂದ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ ಭಾನುವಾರ ತಡರಾತ್ರಿ ಗ್ರಾಮಸ್ಥರು ಹುಲಿಯೂರುದುರ್ಗ ಬೆಸ್ಕಾಂ ಕಚೇರಿಗೆ ತೆರಳಿ ಸಮಸ್ಯೆ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿದೆ ಅಧಿಕಾರಿಗಳು ಬರಿ ಸಬೂಬು ಹೇಳುತ್ತಿದ್ದು ಸಮಸ್ಯೆಗೆ ಪರಿಹಾರ ಮಾತ್ರ ಸಿಕ್ಕಿಲ್ಲ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಗ್ರಾಮದಲ್ಲಿ ಹಬ್ಬವಿರುವ ಕಾರಣ ವಿದ್ಯುತ್ ಪರಿವರ್ತಕವನ್ನು ತುರ್ತಾಗಿ ಸರಿಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ @publicnewskunigal