
ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೀಕರ ರಸ್ತೆ ಅಪಘಾತ ಯುವತಿ ಸ್ಥಳದಲ್ಲಿ ಸಾವು!
ಕುಣಿಗಲ್ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಂಗಳವಾರ ರಸ್ತೆ ಅಪಘಾತ ಸಂಭವಿಸಿ ಮಾಗಡಿ ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದ 19 ವರ್ಷದ ಯುವತಿ ಧನುಶ್ರೀ ಸ್ಥಳದಲ್ಲೆ ಸಾವನ್ನಪ್ಪಿದ್ದು ಗ್ರಾಮದಲ್ಲಿ ಹಬ್ಬವಿದ್ದ ಕಾರಣ ಊರ ಹಬ್ಬಕ್ಕೆಂದು ಬಂದಿದ್ದ ಯುವತಿ ಹಬ್ಬ ಮುಗಿಸಿಕೊಂಡು ತೇರಳುತ್ತಿದ್ದ ವೇಳೆ ಕುಣಿಗಲ್ ಪಟ್ಟಣದ ಅಂಚೆಪಾಳ್ಯ ಕೈಗಾರಿಕ ಪ್ರದೇಶದ ಬಳಿ ಹಿಂಬದಿಯಿಂದ ಬರುತ್ತಿದ್ದ ಕ್ಯಾಂಟರ್ ಡಿಕ್ಕಿಹೊಡೆದ ಪರಿಣಾಮ ಬೈಕ್ ನಿಂದ ಕೆಳಗೆ ಬಿದ್ದಿದ್ದ ಯುವತಿಯ ತಲೆಯ ಮೇಲೆ ಕ್ಯಾಂಟರ್ ವಾಹನ ಹರಿದ ಕಾರಣ ಯುವತಿ ಸ್ಥಳದಲ್ಲಿ ಸಾವನ್ನಪ್ಪಿದ್ದು ಅಣ್ಣ ರೇಣುಕೇಶ್ ಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ

ಯುವತಿ ಮಂಗಳೂರಿನ ಶ್ರೀದೇವಿ ಕಾಲೇಜಿನಲ್ಲಿ ಬಿ.ಇ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದು ಬಂದಿದ್ದು ಗ್ರಾಮದಲ್ಲಿ ಹಬ್ಬ ಮುಗಿಸಿಕೊಂಡು ಮಂಗಳೂರಿಗೆ ತೆರಳುವ ಸಲುವಾಗಿ ಕುಣಿಗಲ್ ಪಟ್ಟಣದ ರೈಲು ನಿಲ್ದಾಣಕ್ಕೆ ರೈಲು ಹತ್ತುವ ಸಲುವಾಗಿ ಯುವತಿ ಅಣ್ಣನೊಂದಿಗೆ ಬೈಕ್ ನಲ್ಲಿ ತೆರಳುವಾಗ ಕ್ಯಾಂಟರ್ ಚಾಲಕನ ಅಜಾಗರುಕತೆಯ ಕಾರಣದಿಂದ ಅವಘಡ ಸಂಭವಿಸಿದ್ದು ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ@publicnewskunigal