
ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿದ ಇತಿಹಾಸ ಪ್ರಸಿದ್ದ ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಭ್ರಹ್ಮರಥೋತ್ಸವ!
ಕುಣಿಗಲ್ ತಾಲ್ಲೂಕಿನ ಇತಿಹಾಸ ಪ್ರಸಿದ್ದ ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯವರ 546ನೇ ವರ್ಷದ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ವಿಜೃಂಭಣೆಯಿಂದ ಜರುಗಿತು ಸಿದ್ಧಗಂಗಾ ಮಠದ ಪೀಠಾಧಿಪತಿಗಳಾದ ಶ್ರೀ ಸಿದ್ದಲಿಂಗ ಸ್ವಾಮಿಗಳು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು
ಜಾತ್ರಮಹೊತ್ಸವದ ಮೊದಲನೆ ಪೂಜೆಗಾಗಿ ಶಟ್ಥಲಧ್ವಜ ಹರಾಜು ಪ್ರಕ್ರಿಯೆಯಲ್ಲಿ ಈ ಭಾರಿ ಆರು ಲಕ್ಷದ ಐವತ್ತೊಂದು ಸಾವಿರ ರೂಪಾಯಿಗೆ ದೀಪಕ್ ಸದಾಶಿವಯ್ಯ ಎಂಬುವವರು ಶಟ್ಥಲಧ್ವಜವನ್ನು ಪಡೆಯುವ ಮೂಲಕ ಪ್ರಥಮ ಪೂಜೆಗೆ ಭಾಜನರಾದರು
ಮಂಗಳವಾಧ್ಯಗಳೊಂದಿಗೆ ಪಟಕುಣಿತ ಪೂಜಾಕುಣಿತ ವೀರಗಾಸೆ ಹಾಗೂ ನಂದಿಧ್ವಜ ಸೇರಿದಂತೆ ವಿವಿಧ ಸಂಸೃತಿಕ ಕಾರ್ಯಕ್ರಮ ಜರುಗಿದವು ರಥಕ್ಕೆ ಹಣ್ಣು ಧವನ ತೂರುವ ಮೂಲಕ ಭಕ್ತರು ಜೈ ಯಡಿಯೂರ ಪ್ರಭುವೆ ಎಂದು ತಮ್ಮ ಇಷ್ಟಾರ್ಥಗಳಿಗೆ ಪ್ರಾರ್ಥಿಸಿ ಪೂಜೆ ಸಲ್ಲಿಸಿದರು ಜಾತ್ರಮಹೊತ್ಸವಕ್ಕೆ ಆಗಮಿಸಿದ ಭಕ್ತರಿಗೆ ಹಲವು ಕಡೆಗಳಲ್ಲಿ ಹರಕೆ ಒತ್ತ ಭಕ್ತರು ಮಜ್ಜಿಗೆ.ಪಾನಕ ಹಾಗೂ ಪ್ರಸಾದ ವಿತರಣೆ ಮಾಡಿದರು ರಥೋತ್ಸವದಲ್ಲಿ ಶಾಸಕ ಡಾ.ರಂಗನಾಥ್ ಬೆಂಗಳೂರು ಗ್ರಾಮಾಂತರ ಲೊಕಸಭಾ ಕ್ಷೇತ್ರದ ಸಂಸದ ಡಾ. ಸಿ.ಎನ್ ಮಂಜುನಾಥ್ ಭಾಗಿಯಾಗಿ ಪೂಜೆ ಸಲ್ಲಿಸಿದರು ಕಾರ್ಯಕ್ರಮದಲ್ಲಿ ಎ.ಡಿ.ಸಿ ತಿಪ್ಪೇಸ್ವಾಮಿ ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ.ದೇವಾಲಯದ ಕಾರ್ಯನಿರ್ವಣ ಅಧಿಕಾರಿ ಮಹೇಶ್.ಡಿವೈಎಸ್ಪಿ ಓಂ ಪ್ರಕಾಶ್.ಅಮೃತೂರು ಸಿಪಿಐ ಮಾಧ್ಯನಾಯಕ್.ಕುಣಿಗಲ್ ಸಿಪಿಐ ನವೀನ್ ಗೌಡ. ಪಿಎಸ್ಐ ಶಮಂತ್‌ಗೌಡ ಹುಲಿಯೂರುದುರ್ಗ ಪಿಎಸ್ಐ ಪ್ರಶಾಂತ್ ನೆತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು ಜಾತ್ರಮಹೊತ್ಸವದಲ್ಲಿ ಸಹಸ್ರಾರು ಭಕ್ತರು ಭಾಗಿಯಾಗಿದ್ದರು @publicnewskunigal