
ನಿರ್ಮಾಣವಾಗಿ ತಿಂಗಳು ಕಳೆದಿಲ್ಲ ಕುಸಿದ ಅಂಗನವಾಡಿ ಕಾಂಪೌಂಡ್ ಗೋಡೆ ಕಳಪೆ ಕಾಮಗಾರಿ ಶಂಕೆ!
ಕುಣಿಗಲ್ ತಾಲ್ಲೂಕಿನ ಯಡಿಯೂರು ಹೊಬಳಿ ನಾಗಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಬೀಡು ಗ್ರಾಮದಲ್ಲಿ ಅಂಗನವಾಡಿ ಕೇಂದ್ರಕ್ಕೆ ಜಿಲ್ಲಾ ಪಂಚಾಯಿತಿ ಅನುದಾನದಿಂದ ಸುಮಾರು ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ ಇತ್ತಿಚೆಗೆ ನಿರ್ಮಿಸಲಾಗಿದ್ದ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದ್ದು ಕಳಪೆ ಗುಣಮಟ್ಟದ ಕಾಮಗಾರಿ ಮಾಡಿರುವ ಕಾರಣದಿಂದ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ ಗುತ್ತಿಗೆದಾರ ಬಿಲ್ ಪಡೆಯುವ ಸಲುವಾಗಿ ಕಾಮಗಾರಿಯನ್ನು ತರಾತುರಿಯಲ್ಲಿ ಮಾಡಿರುವ ಕಾರಣದಿಂದ ಈರೀತಿ ಗೋಡೆ ಕುಸಿದಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ ಕಾಂಪೌಂಡ್ ನಿರ್ಮಿಸಿ ತಿಂಗಳು ಕಳೆದಿಲ್ಲ ಗೋಡೆಯ ಪಕ್ಕದಲ್ಲಿ ಮಣ್ಣು ಸುರಿದ ಕಾರಣಕ್ಕೆ ಗೋಡೆ ಕುಸಿದು ಬಿದ್ದಿದೆ ಎಂದರೆ ಕಾಮಗಾರಿ ಎಷ್ಟರ ಮಟ್ಟಿಗೆ ಗುಣಮಟ್ಟದಿಂದ ಕೂಡಿದೆ ಎಂಬುದು ತಿಳಿಯುತ್ತದೆ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ @publicnewskunigal