
ರಾಗಿ ಖರೀದಿ ಕೇಂದ್ರದಲ್ಲಿ ಮಧ್ಯವರ್ತಿಗಳದ್ದೆ ಕಾರುಬಾರು ರೈತರ ಗೋಳು ಕೆಳೊರ್ಯಾರು!
ಕುಣಿಗಲ್ ಪಟ್ಟಣದ ರಾಗಿ ಖರೀದಿ ಕೇಂದ್ರದಲ್ಲಿ ಅಧಿಕಾರಿಗಳ ಬೇಜವಾಬ್ದಾರಿಯ ಕಾರಣದಿಂದದಾಗಿ ರೈತರು ತಾವು ಕಷ್ಟ ಪಟ್ಟು ಉತ್ತು ಬಿತ್ತು ಒಕ್ಕಣೆ ಮಾಡಿ ಬೆಳೆದಂತಹ ರಾಗಿಯನ್ನು ಮಾರಾಟ ಮಾಡಲು ಇನ್ನಿಲ್ಲದ ಕಸರತ್ತು ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಪಟ್ಟಣದ ರಾಗಿ ಖರೀದಿ ಕೇಂದ್ರದಲ್ಲಿನ ಅವ್ಯವಸ್ಥೆಯ ಬೇಸತ್ತು ರೈತರು ಹೈರಾಣಾಗಿ ಹೊಗಿದ್ದಾರೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಂಡು ರಾಜ್ಯ ಸರ್ಕಾರ ಬೆಂಬಲ ಬೆಲೆಯೊಂದಿಗೆ ರಾಗಿ ಖರೀದಿ ಕೇಂದ್ರವನ್ನು ಪ್ರಾರಂಭಿಸಿದೆ ಆದರೆ ಇದರ ನಿರ್ವಹಣೆ ಮಾಡಬೇಕಿದ್ದ ಅಧಿಕಾರಿಗಳು ಮಾತ್ರ ನಮಗೆ ಯಾವುದೆ ರೀತಿಯ ಜವಾಬ್ದಾರಿ ಇಲ್ಲವೆಂದು ವರ್ತಿಸುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ ಕುಣಿಗಲ್ ಪಟ್ಟಣದ ಎ.ಪಿ.ಎಂ.ಸಿ ಅವರಣದಲ್ಲಿ ಇರುವ ರಾಗಿ ಖರೀದಿ ಕೇಂದ್ರದಲ್ಲಿ ಇದುವರೆಗೂ ಸುಮಾರು ಮೂರು ಸಾವಿರ ರೈತರಿಂದ ಐವತ್ತು ಸಾವಿರಕ್ಕೂ ಹೆಚ್ಚು ಕ್ವಿಂಟಾಲ್ ನಷ್ಟು ರಾಗಿ ಖರೀದಿ ಮಾಡಲಾಗಿದೆ ಆದರೆ ಇತ್ತಿಚೇಗೆ ಅಧಿಕಾರಿಗಳು ನೀಡಿರುವ (ನಿಗದಿ ಪಡಿಸಿದ) ದಿನಾಂಕ ದಂದು ಖರೀದಿ ಕೇಂದ್ರಕ್ಕೆ ರೈತರು ರಾಗಿ ತಂದರು ಸಹ ನಾಲ್ಕೈದು ದಿನಗಳ ವರೆಗೆ ಖರೀದಿ ಕೇಂದ್ರದಲ್ಲಿ ರೈತರನ್ನು ಉಳಿಯುವಂತೆ ಮಾಡಲಾಗುತ್ತಿದ್ದು ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ ತಾಲ್ಲೂಕಿನಲ್ಲಿ ಹಲವೆಡೆ ಮಳೆಯಾಗುತ್ತಿರುವ ಕಾರಣದಿಂದ ರೈತರು ತಮ್ಮ ದೈನಂದಿನ ಕೆಲಸಕಾರ್ಯಗಳ ಜೋತೆಗೆ ಮನೆ ಬಿಟ್ಟು ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಮೂಟೆಗಳನ್ನು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಅಧಿಕಾರಿಗಳು ನಿಗದಿ ಪಡಿಸಿದ ದಿನದಂದು ರಾಗಿ ತಂದರು ಸಹ ರಾಗಿ ಖರೀದಿ ಮಾಡುತ್ತಿಲ್ಲ ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರು ಕೂಲಿ ಕಾರ್ಮಿಕರ ಕೊರತೆಯ ಕಾರಣದಿಂದ ರಾಗಿ ತೂಕ ಮಾಡಿ ಚಿಲಕ್ಕೆ ತುಂಬುವವರು ಇಲ್ಲದಂತಾಗಿದೆ ಆದ್ದರಿಂದ ಖರೀದಿ ತಡವಾಗಿದೆ ಎಂದು ಸಬುಬು ಹೇಳುತ್ತಿದ್ಲಾರೆ ಇದರ ನಡುವೆ ಉತ್ತು ಬಿತ್ತು ಬೆಳೆ ಬೆಳೆಯದೆ ಇದ್ದರು ಸಹ ಮಧ್ಯವರ್ತಿಗಳು ಗುಣಮಟ್ಟವಿಲ್ಲದ ರಾಗಿ ಖರೀದಿಸಿ ತಂದು ಖರೀದಿ ಕೇಂದ್ರದಲ್ಲಿ ರೈತರ ಮೂಲಕವೆ ಮಾರಾಟ ಮಾಡುತ್ತಿರುವುದು ಇಗ ಚರ್ಚೆಗೆ ಗ್ರಾಸವಾಗಿದೆ ದಲ್ಲಾಳಿಗಳು ಹಲವು ರೈತರ ದಾಖಲೆ ಸಂಗ್ರಹಿಸಿ ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟ ಮಾಡುತ್ತಿದ್ದು ನಿಜವಾದ ರೈತನಿಗೆ ಕಷ್ಟಪಟ್ಟು ಬೆಳೆದ ರಾಗಿಯನ್ನು ಮಾರಾಟ ಮಾಡುವುದೆ ಸವಾಲಾಗಿದೆ ಕಳೆದ ನಾಲ್ಕೈದು ದಿನಗಳಿಂದ ಮನೆ ಮಠ ಬಿಟ್ಟು ಬಂದು ರಾಗಿ ಖರೀದಿ ಕೇಂದ್ರದಲ್ಲಿ ಸೊಳ್ಳೆಗಳ ನಡುವೆ ರಾಗಿ ಮೂಟೆಗಳನ್ನು ಕಾಯುವುದೇ ಕೆಲಸವಾಗಿದೆ
ಮಧ್ಯವರ್ತಿಗಳ ಹಣದ ಆಮಿಷಕ್ಕೆ ಒಳಗಾಗಿರುವ ಕೆಲ ರೈತರು ರಾಗಿ ಬೆಳೆಯದೆ ಇದ್ದರು ಸಹ ಬೆಳೆದಿರುವುದಾಗಿ ದಾಖಲೆ ಸೃಷ್ಟಿಸಿ ಮಧ್ಯವರ್ತಿಗಳಿಗೆ ನೀಡಿರುವ ಕಾರಣ ದಳ್ಳಾಳಿಗಳು ಎಂದಿನಂತೆ ಖರೀದಿ ಕೇಂದ್ರಕ್ಕೆ ನೂರಾರು ಮೂಟೆ ರಾಗಿಯನ್ನು ತಂದು ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿ ಹಣ ಮಾಡುತ್ತಿರುವ ಕಾರಣದಿಂದಾಗಿ ರಾಗಿ ಬೆಳೆದಿರುವ ಅಸಲಿ ರೈತನಿಗೆ ಸಾಕಷ್ಟು ಸಮಸ್ಯೆ ಎದುರಾಗಿದೆ ದಲ್ಲಾಳಿಗಳು ತಂದಿರುವ ರಾಗಿಯನ್ನು ಬೇಗನೆ ಖರೀದಿಸುತ್ತಿದ್ದಾರೆ ಆದರೆ ನವು ತಂದ ರಾಗಿ ಮಾತ್ರ ನಾಲ್ಕೈದು ದಿನ ಕಳೆದರು ಇಲ್ಲೆ ಇದೆ ಇನ್ನಾದರು ಸಂಬಂಧ ಪಟ್ಟ ಅಧಿಕಾರಿಗಳು ಜನ ಪ್ರತಿನಿಧಿಗಳು ಇತ್ತ ಗಮನ ಹರಿಸಿ ಖರೀದಿ ಕೇಂದ್ರಕ್ಕೆ ರಾಗಿ ತರುತ್ತಿರುವ ರೈತರ ಮಾಹಿತಿ ಪಡೆದು ರಾಗಿ ಬೆಳೆ ಬೆಳೆದಿರುವ ಬಗ್ಗೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಆಗ ದಲ್ಲಾಳಿಗಳ ಅಸಲಿಯತ್ತು ಬಯಲಾಗಲಿದೆ ಈ ಮಧ್ಯವರ್ತಿಗಳ ಕಾರಣದಿಂದ ಕಷ್ಟಪಟ್ಟು ವ್ಯವಸಾಯ ಮಾಡಿ ಖರೀದಿ ಕೇಂದ್ರಕ್ಕೆ ರಾಗಿ ತಂದು ಕಾಯುವ ಸ್ಥಿತಿ ನಿರ್ಮಾಣವಾಗಿದೆ ಅಧಿಕಾರಿಗಳು ನಮಗೆ ಕೊಟ್ಟಿರುವ ನಿಗದಿತ ದಿನದಂದು ರಾಗಿ ತಂದರು ಸಹ ಕಾಯುವಂತಾಗಿದ್ದು ಖರೀದಿ ಕೇಂದ್ರದಲ್ಲಿ ಕೂಲಿ ಕಾರ್ಮಿಕರ ಕೊರತೆಯ ಕಾರಣದಿಂದ ಸಮಯಕ್ಕೆ ಸರಿಯಾಗಿ ರಾಗಿ ತುಂಬುತ್ತಿಲ್ಲ ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗು ಕೃಷಿ ಸಚಿವರು ಗಮನ ಹರಿಸಬೇಕು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ @publicnewskunigal