
ಭೀಕರ ರಸ್ತೆ ಅಪಘಾತ ಹರಿಸೇವೆಗೆ ಊಟಕ್ಕೆ ತೆರಳುತ್ತಿದ್ದ ವೇಳೆ ಅವಘಡ ವ್ಯಕ್ತಿಯ ತಲೆಯ ಮೇಲೆ ಟ್ರಾಕ್ಟರ್ ಹರಿದು ಸ್ಥಳದಲ್ಲಿ ಸಾವು!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಗೋಲ್ಲರಹಟ್ಟಿ ಗ್ರಾಮದ ಮಾದುಗೋನಹಳ್ಳಿ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಶನಿಮಹಾತ್ಮ ದೇವಾಲಯದ ಬಳಿ ಟ್ರಾಕ್ಟರ್ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ಎಲೆಕಡಕಲು ಗ್ರಾಮದ ಸತೀಶ್ (42) ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ ಸೀಗೆಪಾಳ್ಯ ಗ್ರಾಮದಲ್ಲಿ ನಡೆಯುತ್ತಿದ್ದ ಆಂಜನೇಯ ಸ್ವಾಮಿ ಹರಿಸೇವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಶುಕ್ರವಾರ ರಾತ್ರಿ ತೆರಳುತ್ತಿದ್ದ ವೇಳೆ ಎಂ ಸ್ಯಾಡ್ ತುಂಬಿದ್ದ ಟ್ರಾಕ್ಟರ್ ಹಿಂದಿಕ್ಕಲು ಹೋಗಿ ದ್ವಿಚಕ್ರ ವಾಹನ ಸವಾರ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ವೇಳೆ ತಲೆಯ ಮೇಲೆ ಟ್ರಾಕ್ಟರ್ ಚಕ್ರ ಹರಿದು ಗುರುತು ಸಿಗದ ರೀತಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು ಘಟನೆ ಸ್ಥಳಕ್ಕೆ ಹುಲಿಯೂರುದುರ್ಗ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ಘಟನೆ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಅಪಘಾತದ ಬಳಿಕ ಟ್ರಾಕ್ಟರ್ ಚಾಲಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ @publicnewskunigal