
ಆಸ್ತಿ ವಿಚಾರ ಪ್ರೇಮ ಪ್ರಕರಣ ಸ್ನೇಹಿತರೊಂದಿಗೆ ಸೇರಿ ಮಗನಿಂದಲೆ ತಂದೆಯ ಹತ್ಯೆ ಸಿ.ಸಿ ಕ್ಯಾಮರದಲ್ಲಿ ಸೆರೆಯಾಗಿತ್ತು ಭೀಕರ ದೃಶ್ಯ!
ಕುಣಿಗಲ್ ಪಟ್ಟಣದ ಅಪೊಲೊ ಐಸ್ ಕ್ರೀಮ್ ಫ್ಯಾಕ್ಟರಿ ಮಾಲೀಕನ ಸಾವು ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಸಿ.ಸಿ ಕ್ಯಾಮೆರಾದದಲ್ಲಿ ಘಟನೆಯ ದೃಶ್ಯ ಇಂಚಿಂಚು ಸೆರೆಯಾಗಿದ್ದು ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಕೈಗೊಂಡಿದ್ದಾರೆ
ಕುಣಿಗಲ್ ಪಟ್ಟಣದ ಶಿವಾಜಿ ಟೆಂಟ್ ರಸ್ತೆಯಲ್ಲಿರುವ ಅಪೊಲೊ ಐಸ್ ಕ್ರೀಮ್ ಪ್ಯಾಕ್ಟರಿಯಲ್ಲಿ ಮೇ 11 ರಂದು ಮಾಲೀಕ ಮೃತಪಟ್ಟಿರುವ ಬಗ್ಗೆ ಪಟ್ಟಣದ ಪೊಲೀಸ್ ಠಾಣೆಗೆ ಮಾಹಿತಿ ಬಂದ ಹಿನ್ನೆಲೆಕೂಡಲೇ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದಾಗ ಮಲಗಿದ್ದ ಜಾಗದಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಮಾಲೀಕ ನಾಗೇಶ್ ಮೃತದೇಹ ಪತ್ತೆಯಾಗಿತ್ತು ಮೃತ ವ್ಯಕ್ತಿಯ ತಂಗಿಯ ದೂರು ಹಿನ್ನೆಲೆ ಅಸಹಜ ಸಾವು ಪ್ರಕರಣ ದಾಖಲಿಕೊಂಡ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿ ತನಿಖೆ ಕೈಗೊಂಡು ಐಸ್ ಕ್ರೀಮ್ ಫ್ಯಾಕ್ಟರಿಯಲ್ಲಿದ್ದ ಸಿ.ಸಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಕೃತ್ಯ ಬೆಳಕಿಗೆ ಬಂದಿದ್ದು ಹಿಂದಿನ ದಿನ ರಾತ್ರಿ10 ಗಂಟೆಗೆ ಇಬ್ಬರು ಬಂದು ಕುತ್ತಿಗೆ ಹಿಸುಕಿ ಕೊಲೆ ಮಾಡಿರುವುದು ಕಂಡುಬಂದಿತ್ತು ವಿಡಿಯೋ ಪರಿಶೀಲನೆ ಮಾಡಿದಾಗ ಕೊಲೆಯಾದ ನಾಗೇಶ್ ಮಗ ಸೂರ್ಯ ಹಾಗೂ ಆತನ ಸ್ನೇಹಿತ ಸೇರಿ ಕೊಲೆ ಮಾಡಿರೋದು ಪತ್ತೆಯಾಗಿದೆ ಅಸಹಜ ಸಾವನ್ನ ಕೊಲೆ ಪ್ರಕರಣವನ್ನಾಗಿ ಮಾಡಿಕೊಂಡು ತನಿಖೆ ಮುಂದುವರಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನ ಬೆಂಗಳೂರಿನ ಲಾಡ್ಜ್ ಒಂದರಲ್ಲಿ ಬಂಧಿಸಿ ಕರೆತಂದಿದ್ದಾರೆ
ಆರೋಪಿಗಳನ್ನ ವಿಚಾರಣೆ ನಡೆಸಿ ಮತ್ತಷ್ಟು ಜನರನ್ನ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ ಅಶೋಕ್ ತಿಳಿಸಿದ್ದು ಆರೋಪಿಗಳು ಈ ಹಿಂದೆ ಕೂಡಾ ನಾಗೇಶ್ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಮಾಹಿತಿ ಬಯಲಾಗಿದೆ ಘಟನೆ ನಡೆಯುವ 15 ದಿನಗಳ ಹಿಂದೆ ಹುಲಿಯೂರುದುರ್ಗ ಬಳಿ ಕಾರಿಗೆ ಡಿಕ್ಕಿ ಹೊಡೆದು ಗಲಾಟೆ ಮಾಡಿ ಕೊಲೆ ಮಾಡುವ ತಂತ್ರ ಮಾಡಲಾಗಿತ್ತು ಈ ಸಂಬಂಧವಾಗಿ ಮನು, ಮೂರ್ತಿ, ಲಿಖಿತ್, ಗಂಗಾಧರ್ ಗೌಡ, ಉಲ್ಲಾಸ್.ಎಂಬುವವರನ್ನು ಸಹ ಬಂಧಿಸಲಾಗಿದೆ
ತುಮಕೂರು ತಾಲ್ಲೂಕಿನ ತಿಮ್ಮಸಂದ್ರ ಗ್ರಾಮದ ನಾಗೇಶ್(55) ಮೊದಲನೆ ಪತ್ನಿಯಿಂದ ವಿಚ್ಛೇದನ ಪಡೆದು ಕಳೆದ ಇಪ್ಪತ್ತು ವರ್ಷಗಳಿಂದ ಕುಣಿಗಲ್ ಪಟ್ಟಣದಲ್ಲಿ ಐಸ್ ವ್ಯಾಪಾರದಲ್ಲಿ ತೊಡಗಿದ್ದ ನಾಗೇಶ್ ಎರಡನೆ ವಿವಾಹ ಮಾಡಿಕೊಂಡಿದ್ದ ಎರಡನೆ ಪತ್ನಿಗೆ ಮಗ ಮತ್ತು ಮಗಳು ಇದ್ದರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಸಲುವಾಗಿ ತುಮಕೂರಿನ SSIT ಕಾಲೇಜಿನಲ್ಲಿ ಮಗ ಸೂರ್ಯ (19) ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತ ಮಗಳು SSLC ಒದುತ್ತಿದ್ದಳು ಈ ನಡುವೆ ಮಗ ಸೂರ್ಯನಿಗೆ ತಿಮ್ಮಸಂದ್ರ ಗ್ರಾಮದ ಸಂಜಯ್ ಪರಿಚಯವಾಗಿ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು ಸಂಜಯ್ ಹಾಗಾಗ ಸೂರ್ಯನ ಮನೆಗೆ ಬಂದು ಹೊಗುತ್ತಿದ್ದ ಈ ವೇಳೆ ಸೂರ್ಯ ನ ತಂಗಿ ಹಾಗೂ ಸಂಜಯ್ ನಡುವೆ ಪ್ರೀತಿ ಮೂಡಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ ಮಕ್ಕಳ ವರ್ತನೆ ಕಂಡ ನಾಗೇಶ್ ಬುದ್ದಿ ಹೇಳುವುದರ ಜೋತೆಗೆ ಮನೆಗೆ ಬರುತ್ತಿದ್ದ ಸಂಜಯ್ ಗೂ ಎಚ್ಚರಿಕೆ ನೀಡಿದ್ದ ಜೋತೆಗೆ ಮಾತು ಕೆಳದಿದ್ದಲ್ಲಿ ಆಸ್ತಿಯಲ್ಲಿ ಬಿಡಿಗಾಸು ನೀಡುವುದಿಲ್ಲ ಎನ್ನುತ್ತಿದನಂತೆ ಈಗಾಗಿ ಸಂಜಯ್ ಹಾಗೂ ಸೂರ್ಯ ಸಂಚು ರೂಪಿಸಿ ತಂದೆ ಒಬ್ಬನೆ ಇರುವಾಗ ಐಸ್ ಫ್ಯಾಕ್ಟರಿಯಲ್ಲಿ ಕೋಲೆ ಮಾಡಿ ಮೃತದೇಹಕ್ಕೆ ಕರೆಂಟ್ ಶಾಕ್ ನೀಡಿ ಪ್ರಕರಣದ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದರು ಪ್ರಕರಣದ ಜಾಡು ಇಡಿದ ಪೊಲೀಸರು ಕೃತ್ಯದಲ್ಲಿ ಭಾಗಿಯಾಗಿದ್ದ ಎಂಟು ಮಂದಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ @publicnewskunigal