
ಕುಣಿಗಲ್ ಸುದ್ದಿ;-ಹುತ್ರಿದುರ್ಗ ಗ್ರಾಮ ಪಂಚಾಯ್ತಿಗೆ ನೂತನ ಅಧ್ಯಕ್ಷರಾಗಿ ಕಲಾವತಿ ಉಪಾಧ್ಯಕ್ಷರಾಗಿ ನಾರಾಯಣಚಾರ್ ಆಯ್ಕೆ!
ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಗ್ರಾಮ ಪಂಚಾಯ್ತಿಯ ಅಧ್ಯಕ್ಷೆ ಕೃಷ್ಣವೇಣಿ ಹಾಗೂ ಉಪಾಧ್ಯಕ್ಷ ಕೆಂಪಣ್ಣ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಿಗದಿಯಾಗಿತ್ತು ಬಿಜೆಪಿ ಜೆಡಿಎಸ್ ಮೈತ್ರಿ ಬೆಂಬಲಿತ ಸದಸ್ಯರ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರ ಬಲ ಸಮವಿದ್ದ ಕಾರಣ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಜಿದ್ದಾಜಿದ್ದಿನ ಕಣವಾಗಿತ್ತು ಅಧ್ಯಕ್ಷರ ಚುನಾವಣೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣ ಅಧಿಕಾರಿ ನಾರಾಯಣ್ ನಡೆಸಿದರೆ ಉಪಾಧ್ಯಕ್ಷ ಸ್ಥಾನದ ಚುನಾವಣೆಯನ್ನು ತಹಶೀಲ್ದಾರ್ ರಶ್ಮಿ ನಡೆಸಿದರು ಹದಿನಾಲ್ಕು ಸದಸ್ಯರ ಬಲ ಹೊಂದಿರುವ ಗ್ರಾಮ ಪಂಚಾಯ್ತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಕಲಾವತಿ ಗುರುಮೂರ್ತಿ ಎಂಟು ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ ಎನ್.ಡಿ.ಎ ಬೆಂಬಲಿತ ಸದಸ್ಯೆ ವನಜಾಕ್ಷಿ ಐದು ಮತಗಳನ್ನು ಪಡೆದು ಪರಾಜಿತಗೊಂಡರು ಇನ್ನೂ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನ ನಾರಾಯಣಚಾರ್ ವೈ.ಪಿ ಏಳು ಮತ ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರೆ ಎನ್.ಡಿ.ಎ ಬೆಂಬಲಿತ ಸದಸ್ಯ ಪುನಿತ್ ಕುಮಾರ್ ಐದು ಮತಗಳನ್ನು ಪಡೆದು ಪಾರಾಜಿತಗೊಂಡರು ಒಂದು ಮತ ತಿರಸೃತಗೊಂಡಿದೆ
ಕಳೆದಬಾರಿ ಬಿಜೆಪಿ ಬೆಂಬಲಿತ ಸದಸ್ಯರ ಬೆಂಬಲ ಪಡೆದು ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿದಿತ್ತು ಆದರೆ ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯ ಕಾರಣದಿಂದ ಎರಡು ಕಡೆಗಳಲ್ಲು ಏಳು ಮಂದಿ ಸದಸ್ಯರು ಇದ್ದ ಕಾರಣ ಗ್ರಾಮ ಪಂಚಾಯಿತಿಯ ಚುನವಣೆ ಜಿದ್ದಾಜಿದ್ದಿನ ಕಣವಾಗಿತ್ತು ಇನ್ನೂ ಗ್ರಾಮ ಪಂಚಾಯಿತಿಯ ಚುನಾವಣೆಗೆ ಇಡಿ ತಾಲ್ಲೂಕು ಆಡಳಿತವೆ ಇದ್ದದ್ದು ವಿಶೇಷ ಯಾವುದೆ ಅಹಿತಕರ ಘಟನೆ ನಡೆಯದಂತೆ ಡಿವೈಎಸ್ಪಿ ಓಂ ಪ್ರಕಾಶ್ ನೆತೃತ್ವದಲ್ಲಿ ಕುಣಿಗಲ್ ಠಾಣೆಯ ಪಿಎಸ್ಐ ಕೃಷ್ಣಕುಮಾರ್.ಹುಲಿಯೂರುದುರ್ಗ ಪಿಎಸ್ಐ ಪ್ರಶಾಂತ್.ಸೆರಿದಂತೆ ಹತ್ತಕ್ಕೂ ಹೆಚ್ಚು ಪೊಲೀಸರು ನಿಯೋಜಿಸಲಾಗಿತ್ತು ಪಿ.ಡಿ.ಒ ರಾಜಶೇಖರ್ ಸೇರಿದಂತೆ ಈ ವೇಳೆ ಮುಖಂಡರಾದ.ಸ್ವಾಮಿ.ಚಂದ್ರಪ್ಪ.ಬೋರೆಗೌಡ.ಶಿವರಾಮಿ.ಸ್ಥಳಿಯ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು@publicnewskunigal