
ಅಪಘಾತದಲ್ಲಿ ಗಾಯಗೊಂಡಿದ್ದ ಮತದಾರನಿಗೆ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಮಾನವಿಯತೆ ಮೆರೆದ ಕುಣಿಗಲ್ ಶಾಸಕ ಡಾ.ರಂಗನಾಥ್!
ಜನರಿಂದ ಆಯ್ಕೆಯಾಗಿ ಜನಪ್ರತಿನಿಧಿಗಳದ ಬಳಿಕ ಅದೆಷ್ಟೊ ಮಂದಿ ರಾಜಕಾರಣಿಗಳು ತಮ್ಮ ಹಿನ್ನೆಲೆ ಹಾಗೂ ವೃತ್ತಿಯಿಂದ ದೂರ ಉಳಿಯಬೇಕಾಗುತ್ತದೆ ಕಾರಣ ಸಮಯದ ಅಭಾವ ಹಾಗೂ ಕೆಲಸದ ಒತ್ತಡದಿಂದ ಆದರೆ ಇದೆಲ್ಲದಕ್ಕೂ ವಿಭಿನ್ನ ನಮ್ಮ ಕುಣಿಗಲ್ ಕ್ಷೇತ್ರದ ಶಾಸಕರಾದ ಡಾ.ಹೆಚ್.ಡಿ ರಂಗನಾಥ್ ರವರದ್ದಾಗಿದೆ ಕುಣಿಗಲ್ ತಾಲ್ಲೂಕಿನ ಅಮೃತೂರು ಹೋಬಳಿಯ ಉಂಗ್ರ ಗ್ರಾಮದ ಚನ್ನೇಗೌಡ ಎಂಬುವವರು ಬೈಕ್ ನಿಂದ ಬಿದ್ದು, ಕೈ ಮೂಳೆ ಮುರಿತಕ್ಕೊಳಗಾಗಿದ್ದರು ಈ ಸಂದರ್ಭದಲ್ಲಿ ಶಾಸಕ ಡಾ.ರಂಗನಾಥ್ ರವರನ್ನು ಭೇಟಿ ಮಾಡಿದ್ದಾರೆ ತಕ್ಷಣ ಶಾಸಕರು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಖುದ್ದು ಶಾಸಕರೆ ಮುರಿದಿದ್ದ ಕೈ ಮೂಳೆಯ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಮಾನವಿಯತೆ ಮೆರೆದಿದ್ದಾರೆ ಕಳೆದ ಏಳು ವರ್ಷಗಳಿಂದ ಕ್ಷೇತ್ರದ ನಲವತ್ತಕ್ಕೂ ಹೆಚ್ಚು ಮಂದಿ ಬಡರೋಗಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಕ್ಷೇತ್ರದ ಮತದಾರರ ಮನಗೆದ್ದಿದ್ದಾರೆ
ಇನ್ನೂ ರಾಜಕಾರಣಕ್ಕಿಂತ ನನಗೆ ಮುಖ್ಯವಾದದ್ದು ನನ್ನ ವೈದ್ಯ ವೃತ್ತಿ ಜನರಿಗೆ ಮೊದಲು ಆರೋಗ್ಯ ಸೇವೆ ಎನ್ನುವ ಶಾಸಕರು ತಮ್ಮ ಕಾರಿನಲ್ಲೆ ಪ್ರಾಥಮಿಕ ಚಿಕಿತ್ಸೆಗೆ ಬೇಕಾಗುವ ಸಲಕರಣೆಗಳನ್ನು ಹಾಗೂ ಔಷಧಿ ಮತ್ರೆಗಳನ್ನು ಕೊಂಡೊಯ್ಯುವ ಶಾಸಕರು ತಾವು ಬೇಟಿ ನೀಡಿ ಕಡೆಯೆಲ್ಲ ಮತದಾರರ ಆರೋಗ್ಯ ವಿಚಾರಿಸಿ ಸ್ಥಳದಲ್ಲೆ ಔಷದಿ ಮಾತ್ರೆಗಳನ್ನು ನೀಡುವ ಜೋತೆಗೆ ಅಗತ್ಯ ಬಿದ್ದರೆ ಆಸ್ಪತ್ರೆಗೆ ದಾಖಲಿಸಿ ತಾವೆ ಖುದ್ದಾಗಿ ನಿಂತಿ ಚಿಕಿತ್ಸೆ ನೀಡುತ್ತ ವೈದ್ಯ ವೃತ್ತಿಯ ಜೋತೆಗೆ ಕ್ಷೇತ್ರವನ್ನ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ ಮುಂದಿನ ದಿನಗಳಲ್ಲು ಇದೆ ರೀತಿಯಲ್ಲಿ ನನ್ನ ಈ ಕಾಯಕ ಮುಂದುವರೆಯತ್ತಲೇ ಇರುತ್ತದೆ ಎಂಬುದಾಗಿ ಶಾಸಕ ಡಾ.ರಂಗನಾಥ್ ತಿಳಿಸಿದ್ದಾರೆ @publicnewskunigal