
ಜಿಲ್ಲೆಯ ಪಾಲಿನ ನೀರನ್ನು ಪಡೆಯಲು ಎಲ್ಲರೂ ಸೇರಿ ಹೊರಾಟ ಮಾಡೊಣ ಲಿಂಕ್ ಕೇನಾಲ್ ಯೋಜನೆಗೆ ಸಹಕರಿಸಿ ಶಾಸಕ ಡಾ.ರಂಗನಾಥ್!
ಕುಣಿಗಲ್ ಪಟ್ಟಣದ ಶಾಸಕರ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಡಾ.ರಂಗನಾಥ್ ಲಿಂಕ್ ಕೇನಾಲ್ ಯೋಜನೆಯಿಂದ ಜಿಲ್ಲೆಯ ರೈತರು ಆತಂಕ ಪಡುವ ಅಗತ್ಯವಿಲ್ಲ ತುಮಕೂರು ಜಿಲ್ಲೆಗೆ ನಿಗದಿಯಾಗಿರುವ 24 ಟಿ.ಎಂ.ಸಿ ನೀರಿನಲ್ಲಿ ಜಿಲ್ಲೆಗೆ ಪ್ರತಿ ವರ್ಷ ಹರಿಯುವ ನೀರನ್ನು ಸರಿಯಾದ ರೀತಿಯಲ್ಲೆ ಎಲ್ಲಾ ತಾಲ್ಲೂಕುಗಳಿಗೂ ಹಂಚಿಕೆ ಮಾಡಲಾಗುವುದು ಅದರಂತೆ ಪ್ರಸಕ್ತ ವರ್ಷದಲ್ಲಿ ಜಿಲ್ಲೆಗೆ ಬರುವ ನೀರನ್ನು ಆಧರಿಸಿ ಎಲ್ಲಾ ತಾಲ್ಲೂಕುಗಳಿಗು ನಿಗದಿಯಾಗುವ ಮಾನದಂಡದಲ್ಲಿ ಕುಣಿಗಲ್ ತಾಲ್ಲೂಕಿಗೆ ನೀರನ್ನು ಕೊಂಡೊಯ್ಯಲಾಗುವುದು ಉಳಿದಂತೆ ಜಿಲ್ಲೆಯ ಪಾಲಿಗೆ ನಿಗದಿಯಾಗಿರುವ ನೀರನ್ನು ಪಡೆಯಲು ಎಲ್ಲರು ಸೇರಿ ಹೊರಾಟ ಮಾಡೊಣ ಇದರಿಂದ ಎಲ್ಲರಿಗು ಅನುಕೂಲವಾಗಲಿದೆ ಜಿಲ್ಲೆಯ ರೈತರಿಗೆ ಇದರಿಂದ ಯಾವುದೆ ರೀತಿಯ ಸಮಸ್ಯೆ ಹಾಗುವುದಿಲ್ಲ ಪ್ರಸ್ತುತ ಇರುವ ನಾಲೆಯಲ್ಲಿ ತಾಲ್ಲೂಕಿಗೆ ನೀರನ್ನು ತರಲು ಸಾಧ್ಯವಿಲ್ಲ ನಾಲೆ ಆಧುನೀಕರಣ ಮಾಡಿ ನೀರು ತರಲು ಹೊದರೆ ನಾಲೆಯುದ್ದಕ್ಕೂ ಪಂಪ್ ಸೆಟ್ ಅಳವಡಿಸಿ ನಮ್ಮ ಪಾಲಿನ ನೀರನ್ನು ಪಂಪ್ ಮಾಡಿಕೊಳ್ಳುತ್ತಾರೆ ಇದರಿಂದ ಕಳೆದ ಇಪ್ಪತ್ತು ವರ್ಷಗಳಿಂದ ತಾಲ್ಲೂಕಿಗೆ ನಿಗದಿಯಾಗಿರುವ ನೀರಿನಲ್ಲಿ ಶೇಕಡ 10 ರಷ್ಟು ನಮಗೆ ನೀರು ಬಂದಿಲ್ಲ ಈ ಅನ್ಯಾಯ ಸರಿಪಡಿಸುವ ನಿಟ್ಟಿನಲ್ಲಿ ಲಿಂಕ್ ಕೇನಾಲ್ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಹೊರತು ಯೋಜನೆಯಿಂದ ಜಿಲ್ಲೆಯ ಯಾವುದೆ ತಾಲ್ಲೂಕಿನ ರೈತರಿಗೆ ಸಮಸ್ಯೆ ಉದ್ಬವಿಸುವುದಿಲ್ಲ
ವಿರೋಧ ಪಕ್ಷದ ನಾಯಕರುಗಳು ವಿನಾಕಾರಣ ರೈತರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಜಿಲ್ಲೆಯ ರೈತರಂತೆ ನನ್ನ ತಾಲ್ಲೂಕಿನಲ್ಲು ಸಹ ರೈತರಿದ್ದಾರೆ ವೈ.ಕೆ ರಾಮಯ್ಯ ಹಾಗೂ ಹುಚ್ಚಮಾಸ್ತಿಗೌಡ ರವರ ಹೋರಾಟದ ಫಲವಾಗಿ ಇಂದು ಜಿಲ್ಲೆಗೆ ಹೇಮೆಯ ನೀರು ಹರಿಯುತ್ತಿದೆ ಯೋಜನೆ ರೂಪಿಸಿರುವುದು ತಾಲ್ಲೂಕಿಗೆ ನಿಗದಿಯಾಗಿರುವ ನೀರನ್ನು ತರಲು ಹೊರತು ಮಾಗಡಿ ತಾಲ್ಲೂಕಿಗೆ ಕೊಂಡೊಯ್ಯಲು ಅಲ್ಲ ಮೊದಲು ತಾಲ್ಲೂಕಿಗೆ ನಿಗದಿಯಾಗಿರುವ ನೀರು ಹರಿಯಲಿ ನಮ್ಮ ತಾಲ್ಲೂಕಿನ ಕೆರೆಗಳು ತುಂಬಲಿ ನಂತರವಷ್ಟೆ ಬೇರೆ ಮಾತು ತಾಲ್ಲೂಕಿಗೆ ನಿಗದಿಯಾಗಿರುವ ನೀರನ್ನು ಪಡೆಯಲು ಎಲ್ಲಾ ರೀತಿಯ ಹೋರಾಟಕ್ಕೂ ಸಿದ್ದ ಮೂಲ ಯೋಜನೆಯಂತೆ ಇದುವರೆಗೂ ತಾಲ್ಲೂಕಿಗೆ ನೀರು ಹರಿದ್ದಿದ್ದರೆ ಇಂದು ಯೋಜನೆ ಅನಿವಾರ್ಯತೆ ಉದ್ಬವಿಸುತ್ತಿರಲಿಲ್ಲ ಆದ್ದರಿಂದ ಜಿಲ್ಲೆಯ ವಿರೋಧ ಪಕ್ಷದ ನಾಯಕರು ಹಾಗೂ ರೈತರಲ್ಲಿ ಕೈ ಮುಗಿದು ಮನವಿ ಮಾಡುತ್ತೆನೆ ಲಿಂಕ್ ಕೇನಾಲ್ ಯೋಜನೆಗೆ ಸಹಕಾರ ನೀಡಿ ಜಿಲ್ಲೆಗೆ ನಿಗದಿಯಾಗಿರುವ 24 ಟಿ.ಎಂ.ಸಿ ನೀರು ಪಡೆಯಲು ಎಲ್ಲರು ಸೇರಿ ಹೊರಾಟ ಮಾಡೊಣ ಎಂದರು ಈ ವೇಳೆ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ.ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಮತಿ.ಹುತ್ರಿದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬೋರೆಗೌಡ.ಅಮೃತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹರೀಶ್.ಬೋಗೂರು ಮೂರ್ತಿ. ಶಂಕರ್ ಸೇರಿದಂತೆ ಹಲವು ಮುಖಂಡರು ಈ ವೇಳೆ ಉಪಸ್ಥಿತರಿದ್ಧರು@publicnewskunigal