
ಕುಣಿಗಲ್ ಸುದ್ದಿ;-ಕುಣಿಗಲ್ ಪಟ್ಟಣದ ರಾಗಿ ಖರೀದಿ ಕೇಂದ್ರಲ್ಲಿ ಗೋಣಿ ಚೀಲ ಇಲ್ಲದೆ ರಾಗಿ ಖರೀದಿ ಸ್ಥಗಿತ ಹಿನ್ನೆಲೆ ರೈತರಿಂದ ಅಧಿಕಾರಿಗಳ ತರಾಟೆ!
ಕುಣಿಗಲ್ ಪಟ್ಟಣದ ಎಪಿಎಂಸಿ ಅವರಣದಲ್ಲಿರುವ ರಾಗಿ ಖರೀದಿ ಕೇಂದ್ರದಲ್ಲಿ ಗೋಣಿ ಚೀಲ ಇಲ್ಲಾದೆ ರಾಗಿ ಖರೀದಿ ಸ್ಥಗಿತ ಮಾಡಲಾಗಿದೆ ಎಂದು ಅಧಿಕಾರಿಗಳು ನಾಮಫಲಕ ಅಳವಡಿಸುತ್ತಿದ್ದಂತೆ ಕಳೆದ ಎಂಟು ದಿನಗಳಿಂದ ಖರೀದಿ ಕೇಂದ್ರದಲ್ಲಿ ರಾಗಿ ತಂದು ಕಾಯುತ್ತಿದ್ದ ರೈತರು ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳ ಬೇಜವಾಬ್ದಾರಿ ಹಾಗು ನಿರ್ಲಕ್ಷ ಕಾರಣದಿಂದಾಗಿ ಖರೀದಿ ಕೇಂದ್ರದಲ್ಲಿ ರಾತ್ರಿ ಹಗಲು ಎನ್ನದೆ ಮನೆ ಹಾಗೂ ಜಾನುವಾರುಗಳನ್ನು ಬಿಟ್ಟು ಕಾಯುವ ಸ್ಥಿತಿ ನಿರ್ಮಾಣವಾಗಿದೆ ಈ ಬಗ್ಗೆ ಖರೀದಿ ಕೇಂದ್ರಕ್ಕೆ ರಾಗಿ ತರುವ ಮುನ್ನಾ ರೈತರಿಗೆ ಮಾಹಿತಿ ನೀಡಿಲ್ಲ ಇನ್ನೂ ದಲ್ಲಾಳಿಗಳು ತರುವ ರಾಗಿಗೆ ಯಾವುದೆ ಮಾನದಂಡವಿಲ್ಲದೆ ರಾಗಿ ಖರೀದಿ ಮಾಡುತ್ತಿದ್ದಿರ ಎಂದು ರಾಗಿ ಖರೀದಿ ಕೇಂದ್ರದಅಧಿಕಾರಿ ಕೃಷ್ಣಮೂರ್ತಿಯನ್ನು ರೈತರು ತರಾಟೆಗೆ ತೆಗೆದುಕೊಂಡರು

ಈ ವೇಳೆ ಸ್ಥಳಕ್ಕಾಗಮಿಸಿದ ರೈತ ಮುಖಂಡ ಯೋಗೇಶ್ ಕರಿಗೌಡ ರೈತರಿಂದ ಮಾಹಿತಿ ಪಡೆದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ದೂರವಾಣಿಯ ಮೂಲಕ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು ಕಳೆದ ಎಂಟು ದಿನಗಳಿಂದ ರೈತರು ರಾಗಿ ತಂದು ಖರೀದಿ ಕೇಂದ್ರದಲ್ಲಿ ಕಾಲ ಕಳೆಯುವಂತಾಗಿದೆ ಗ್ರಾಮದಲ್ಲಿ ಜಾನುವಾರಗಳು ಹಾಗೂ ತಮ್ಮ ಕೆಲಸ ಕಾರ್ಯ ಬಿಟ್ಟು ಖರೀದಿ ಕೇಂದ್ರದಲ್ಲಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಇಲ್ಲಿ ರೈತರಿಗೆ ಮೂಲಭೂತ ಸೌಕರ್ಯ ಇಲ್ಲ ತ್ವರಿತಗತಿಯಲ್ಲಿ ರಾಗಿ ಖರೀದಿಸುವ ಬದಲು ಚೀಲಗಳಿಲ್ಲ ಎಂಬ ಒಂದೇ ಕಾರಣಕ್ಕೆ ಎಂಟು ದಿನಗಳಿಂದಲೂ ರೈತರನ್ನು ಶೋಷಣೆ ಮಾಡುತ್ತಿದ್ದಾರೆ ಸಂಜೆಯೊಳಗೆ ಚೀಲಗಳನ್ನು ತಂದು ರಾಗಿ ಖರೀದಿ ಮಾಡದಿದ್ದಲ್ಲಿ ಖರೀದಿ ಕೇಂದ್ರದ ಅಧಿಕಾರಿಯನ್ನು ಕಂಬಕ್ಕೆ ಕಟ್ಟಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಮಟ್ಟದ ಅಧಿಕಾರಿಗಳು ನಾಳೆಯೋಳಗಾಗಿ ಗೋಣಿ ಚೀಲ ತರಿಸಿ ರಾಗಿ ತುಂಬುವುದಾಗಿ ತಿಳಿಸಿದರು ಸ್ಥಳದಲ್ಲಿ ನೂರಾರು ಮಂದಿ ರೈತರು ಉಪಸ್ಥಿತರಿದ್ದರು.@publicnewskunigal