
ಆರ್.ಸಿ.ಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಪ್ರಕರಣ ನಾಗಸಂದ್ರ ಗ್ರಾಮದ ಬಿ.ಬಿ.ಎಂ ವಿದ್ಯಾರ್ಥಿ ಸಾವು!
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಆರ್.ಸಿ.ಬಿ ಸಂಭ್ರಮಾಚರಣೆ ಸಂದರ್ಭದಲ್ಲಿ ಕಾಲ್ತುಳಿತ ಪ್ರಕರಣದಲ್ಲಿ ಕುಣಿಗಲ್ ತಾಲ್ಲೂಕಿನ ಎಡೆಯೂರು ಹೊಬಳಿಯ ನಾಗಸಂದ್ರ ಗ್ರಾಮದ (19) ವರ್ಷದ ಮನೋಜ್ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಾನೆ ಘಟನೆಯ ವಿವರ ಪಡೆದ ಶಾಸಕ ಡಾ.ರಂಗನಾಥ್ ಆಸ್ಪತ್ರೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ ನಾಗಸಂದ್ರ ಗ್ರಾಮದ ದೇವರಾಜ್ ಎಂಬುವವರ ಪುತ್ರ ಮನೋಜ್.ಹೆಬ್ಬಾಳ ಬಳಿಯ ಕೆಂಪಾಪುರದ ರೆಸಿಡೆನ್ಸಿ ಕಾಲೇಜಿನಲ್ಲಿ ಬಿ.ಬಿ.ಎಂ ವ್ಯಾಸಂಗ ಮಾಡುತ್ತಿದ್ದ ಕುಟುಂಬದವರ ಜೊತೆ ಹೆಬ್ಬಾಳ ಬಳಿ ವಾಸವಿದ್ದ ಮನೋಜ್ ನೆನ್ನೆ ಸ್ನೇಹಿತರ ಜೊತೆ ಚಿನ್ನಸ್ವಾಮಿ ಸ್ಟೇಡಿಯಂಗೆ
ಸಂಭ್ರಮಾಚರಣೆಗೆ ತೆರಳಿದ್ದ ಈ ವೇಳೆ ಕಾಲ್ತುಳಿತಕ್ಕೆ ಸಿಲುಕಿ ಮನೋಜ್ ಸಾವನ್ನಪ್ಪಿದ್ದು ಮೃತದೇಹವನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು ಮಾಧ್ಯಮಗಳಲ್ಲಿ ಘಟನೆಯ ಬಗ್ಗೆ ಸುದ್ದಿ ಬಿತ್ತರವಾಗುತ್ತಿದ್ದಂತೆ ಗಮನಿಸಿದ ಪೋಷಕರು ಆಸ್ಪತ್ರೆಗೆ ತೆರಳಿ ಮಗ ಸಾವನ್ನಪ್ಪಿರುವ ಬಗ್ಗೆ ಖಚಿತ ಪಡಿಸಿಕೊಂಡಿದ್ದಾರೆ ಬುಧವಾರ ತಡರಾತ್ರಿ ಮೃತದೇಹವನ್ನು ನಾಗಸಂದ್ರ ಗ್ರಾಮಕ್ಕೆ ತರಲಾಗಿದ್ದು ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು ಗುರುವಾರ ಮನೋಜ್ ಅಂತ್ಯಕ್ರಿಯೆ ನಾಗಸಂದ್ರ ಗ್ರಾಮದಲ್ಲಿ ನಡೆಯಲಿದೆ @publicnewskunigal