
ಪುರಸಭೆ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ನ ಆಸ್ಮಾ ಜಬಿವುಲ್ಲಾ ಅವಿರೋಧ ಆಯ್ಕೆ!
ಕುಣಿಗಲ್ ಪಟ್ಟಣದ ಪುರಸಭೆಯಲ್ಲಿ ಮಂಗಳವಾರ ಅಧ್ಯಕ್ಷೆ ಮಂಜುಳ ನಾಗರಾಜು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಟ್ಟಣದ 17 ವಾರ್ಡ್ ನ ಆಸ್ಮಾ ಜಬಿವುಲ್ಲಾ ರವರನ್ನು ಸ್ಥಾಯಿ ಸಮಿತಿಯ ಅಧ್ಯಕ್ಷರನ್ನಾಗಿ ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು ಪುರಸಭೆಗೆ ನೂತನವಾಗಿ ಆಯ್ಕೆಯಾದ ಸ್ಥಾಯಿ ಸಮಿತಿಯ ಅಧ್ಯಕ್ಷರಿಗೆ ಅಧ್ಯಕ್ಷರು.ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ಹೂಗುಚ್ಚ ನೀಡುವ ಮೂಲಕ ಅಭಿನಂದನೆ ಸಲ್ಲಿಸಿದರು ಈ ವೇಳೆ ಮಾತನಾಡಿದ ಸ್ಥಾಯಿಸಮಿತಿಯ ಅಧ್ಯಕ್ಷರಾದ ಆಸ್ಮಾ ರವರು ಪುರಸಭೆ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯ ಹಾಗೂ ಸ್ವಚ್ಚತೆಗೆ ಮೊದಲ ಆಧ್ಯತೆ ನೀಡಲಾಗುವುದರ ಜೋತೆಗೆ ಸರ್ವ ಸದಸ್ಯರ ಮಾರ್ಗದರ್ಶನದಲ್ಲಿ ಕೆಲಸ ಮಾಡಲಾಗುವುದು ನನ್ನನ್ನು ಆಯ್ಕೆ ಮಾಡಲು ಸೊಚಿಸಿದ ಶಾಸಕ ಡಾ.ರಂಗನಾಥ್ ಹಾಗೂ ಮಾಜಿ ಸಂಸದ ಡಿ.ಕೆ ಸುರೇಶ್ ರವರಿಗೆ ಅಭಿನಂದನೆ ತಿಳಿಸುತ್ತೆನೆ ಎಂದರು ಈ ವೇಳೆ ಪುರಸಭೆ ಉಪಾಧ್ಯಕ್ಷರಾದ ಮಲ್ಲಿಪಾಳ್ಯ ಶ್ರೀನಿವಾಸ್.ಸದಸ್ಯರಾದ ಸ್ವಾಮಿ.ನಾಗೇಂದ್ರ.ಅರುಣ್ ಕುಮಾರ್.ವಾಸು.ರಾಮು. ನಾಗರಾಜು.ಉದಯ್ ಕುಮಾರ್.ಮಂಜುಳ.ರೂಪಿಣಿ. ಜಯಲಕ್ಷಿ.ಸೆರಿದಂತೆ ಹಲವರು ಉಪಸ್ಥಿತರಿದ್ಧರು@publicnewskunigal