
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಚೌಡನಕುಪ್ಪೆ ಗ್ರಾಮದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಗೆ ಶಾಸಕ ಡಾ.ರಂಗನಾಥ್ ಬೇಟಿ ನೀಡಿ ಅಧಿಕಾರಿಗಳ ಹಾಗೂ ರೈತರ ಸಭೆ ನಡೆಸಿ ಮಾರುಕಟ್ಟೆಯಲ್ಲಿ ಅಧಿಕಾರಿಗಳಿಂದ ರೈತರಿಗೆ ಹಾಗುತ್ತಿರುವ ಸಮಸ್ಯೆ ಕುರಿತು ಚರ್ಚೆ ನಡೆಸಿದರು ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬಹುದ ಕ್ರಮಗಳ ಕುರಿತು ಚರ್ಚಿಸಿದ ಶಾಸಕರು ರೈತರೊಂದಿಗೆ ಚರ್ಚೆ ನಡೆಸಿ ಮಾಹಿತಿ ಪಡೆದು ಸ್ಥಳದಲ್ಲಿ ಇದ್ದ ರೇಷ್ಮೆ ಇಲಾಖೆಯ ಉಪನಿರ್ದೇಶಕಿ ಆಶಾ ರವರನ್ನು ತರಾಟೆಗೆ ತೆಗೆದುಕೊಂಡರು ಮಾರುಕಟ್ಟೆಯಲ್ಲಿ ರೈತರಿಂದ ರೇಷ್ಮೆ ಖರೀದಿಸುವ ರಿಲರ್ಸ್ ಗಳಿಗೆ ಹರಾಜು ಪ್ರಕ್ರಿಯೆಗೆ ಮುಗಿದ ಬಳಿಕ ಮಾರುಕಟ್ಟೆಯ ಅಧಿಕಾರಿಗಳು ರೇಷ್ಮೆ ಗೂಡನ್ನು ಬಾಯ್ಲರ್ ಗಳಲ್ಲಿ ಹಾಕಿ ಅಬೆ ನೀಡಿ ರೇಷ್ಮೆ ಗೂಡಿನಲ್ಲಿರುವ ಪ್ಯೂಪ ನಿಷ್ಕ್ರಿಯ ಗೊಂಡಬಳಿಕ ಗೂಡು ಖರೀದಿಸಿದ ರಿಲರ್ಸ್ ಗಳಿಗೆ ನೀಡಬೇಕು ಆದರೆ ಈ ಪ್ರಕ್ರಿಯೆಯನ್ನು ಮಾಡದೆ ಅಧಿಕಾರಿಗಳು ರಿಲರ್ಸ್ ಗಳಿಗೆ ನೇರವಾಗಿ ಗೂಡು ನೀಡುತ್ತಿರುವ ಕಾರಣ ರೇಷ್ಮೆ ಬೆಳೆಯದ ಕೆಲ ಬಲಾಡ್ಯರು.
ರಿಲರ್ಸ್ ಗಳು ಖರೀದಿಸಿರುವ ರೇಷ್ಮೆ ಗೂಡನ್ನೆ ಪಡೆದು ಅಧಿಕಾರಿಗಳಿಗೆ ಪ್ರತಿ ಕೆ.ಜಿಗೆ ಇಂತಿಷ್ಟು ಹಣ ನೀಡಿ ಪುನಃ ರೇಷ್ಮೆ ಮಾರುಕಟ್ಟೆಗೆ ತಂದು ಅದೆ ರೇಷ್ಮೆ ಮಾರಾಟ ಮಾಡಿ ಸರ್ಕಾರದಿಂದ ರೇಷ್ಮೆ ಬೇಳೆಗಾರರಿಗೆ ನೀಡುತ್ತಿದ್ದ ಸಹಾಯಧನ ಹಾಗೂ ಪ್ರೋತ್ಸಾಹ ಧನಕ್ಕೆ ಧಲ್ಲಾಳಿಗಳ ಜೋತೆ ಸೇರಿ ಅಧಿಕಾರಿಗಳು ಸರ್ಕಾರಕ್ಕೆ ವಂಚಿಸುತ್ತಿರುವುದು ಬೆಳಕಿಗೆ ಬಂದಿದ್ದು ಇನ್ನೂ ಮುಂದೆ ಈ ರೀತಿ ನಡೆದರೆ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಶಾಸಕರು ರೇಷ್ಮೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ ಜೋತೆಗೆ ಮಾರುಕಟ್ಟೆಯಲ್ಲಿ ಪ್ರತಿ ನಿತ್ಯ ಹರಾಜು ಪ್ರಕ್ರಿಯೆಗೆ ಬರುವ ರಿಲರ್ಸಗಳ ಮಾಹಿತಿಯನ್ನು ನಾಮಫಲಕದಲ್ಲಿ ಹಾಕುವಂತೆ ರೇಷ್ಮೆ ಬೆಳೆಯುತ್ತಿರುವ ರೈತರ ಮನೆಗಳಿಗೆ ವಾರಕ್ಕೊಮ್ಮೆ ಬೇಟಿ ನೀಡಿ ರೈತರಿಂದ ರೇಷ್ಮೆ ಬೇಳೆಯ ಬಗ್ಗೆ ಮಾಹಿತಿ ಪಡೆದು ಆನ್ ಲೈನ್ ನಲ್ಲಿ ದಾಖಲಿಸುವಂತೆ ಸೂಚಿಸಿದರು ಇದರಿಂದ ಕಷ್ಟಪಟ್ಟು ರೇಷ್ಮೆ ಬೆಳೆಯುವವರಿಗೆ ಅನುಕೂಲವಾಗಲಿದ್ದು ಕಳ್ಳಮಾರ್ಗದಲ್ಲಿ ಮಾರುಕಟ್ಟೆಗೆ ಗೂಡು ಬರುವುದು ತಪ್ಪುತ್ತದೆ ಎಂದರು ಈ ವೇಳೆ ಉಪನಿರ್ದೇಶಕ ಆಶಾ ಮಾತನಾಡಿ ಮಾರುಕಟ್ಟೆಯಲ್ಲಿ ರಿಲರ್ಸಗಳು ಖರೀದಿಸುವ ರೇಷ್ಮೆ ಗೂಡಿಗೆ ಅಬೆ ನೀಡಲು ಬ್ಲೋಯೆರ್ ಕೊರತೆಯಿರುವ ಬಗ್ಗೆ ತಿಳಿಸಿದರು ಶಾಸಕರು ಕೂಡಲೆ ರೇಷ್ಮೆ ಇಲಾಖೆಯ ಆಯುಕ್ತರಿಗೆ ದೂರವಾಣಿಯ ಮೂಲಕ ಕರೆ ಮಾಡಿ ಬ್ಲೋಯೆರ್ ಕೊರತೆಯ ಕಾರಣದಿಂದ ಮಾರುಕಟ್ಟೆಯಲ್ಲಿ ಹಾಗುತ್ತಿರುವ ಸಮಸ್ಯೆ ಕುರಿತು ಮಾಹಿತಿ ನೀಡಿದರು ಸದ್ಯದಲ್ಲೆ ಮೂವತ್ತು ಲಕ್ಷ ಮೌಲ್ಯದ ಬ್ಲೋಯೆರ್ ಮಾರುಕಟ್ಟೆಗೆ ಅಳವಡಿಸುವುದಾಗಿ ಹಾಗೂ ಸಿಬ್ಬಂದಿ ಕೊರತೆಯನ್ನು ಸರಿಪಡಿಸುವುದಾಗಿ ರೈತರಿಗೆ ತಿಳಿಸಿದರು ಹದಿನೈದು ದಿನಗಳ ನಂತರ ಮಾರುಕಟ್ಟೆಗೆ ಬೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಶಾಸಕರು ತಿಳಿಸಿದರು @publicnewskunigal