ವಿಶ್ವ ಮಾದಕ ದ್ರವ್ಯ ವಿರೋಧಿ ದಿನದ ಅಂಗವಾಗಿ ಜೂನ್ 26 ರಂದು ಮ್ಯಾರಥಾನ್ ಸಿ.ಪಿ.ಐ ನವೀನ್‌ಗೌಡ!
ಕುಣಿಗಲ್ ಪಟ್ಟಣದಲ್ಲಿ ವಿಶ್ವ ಮಾದಕ ದ್ರವ್ಯ ವಿರೋಧಿ ದಿನದ ಅಂಗವಾಗಿ ಕುಣಿಗಲ್ ಪೊಲೀಸ್ ಠಾಣೆ ವತಿಯಿಂದ ಜೂನ್ 26 ರಂದು ಗುರುವಾರ ಪಟ್ಟಣದಲ್ಲಿ ಮಾದಕ ದ್ರವ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮ್ಯಾರಥಾನ್ ಓಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕುಣಿಗಲ್ ಪೊಲೀಸ್ ಠಾಣೆಯ ಸಿ.ಪಿ.ಐ ಎಸ್.ಬಿ.ನವೀನ್‌ಗೌಡ ತಿಳಿಸಿದ್ದಾರೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾದಕ ದ್ರವ್ಯದಿಂದಾಗಿ ಇಂದಿನ ಯುವ ಪೀಳಿಗೆ ಬಲಿಯಾಗುವುದನ್ನು ತಪ್ಪಿಸುವ ಸಲುವಾಗಿ ಹಾಗೂ ಅವರನ್ನು ಮಾದಕ ದ್ರವ್ಯ ವ್ಯಸನದಿಂದ ಮುಕ್ತಿಗೊಳಿಸಲು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶ್ವ ಮಾದಕ ದ್ರವ್ಯ ವಿರೋಧಿ ದಿನ ಅಂಗವಾಗಿ ಕುಣಿಗಲ್ ಪಟ್ಟಣದ ನಾಲ್ಕು ಕಿ.ಮೀ ವ್ಯಾಪ್ತಿಯಲ್ಲಿ ಮ್ಯಾರಥಾನ್ ಓಟ ಮಾದಕ ದ್ರವ್ಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಮ್ಯಾರಥಾನ್ ಓಟಕ್ಕೆ ಶಾಸಕ ಡಾ.ರಂಗನಾಥ್ ಪಟ್ಟಣದ ಜಿ.ಕೆ.ಬಿ.ಎಂ.ಎಸ್ ಬಯಲು ರಂಗಮಂದಿರದ ಬಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಮ್ಯಾರಥಾನ್ ಓಟವು ಬಯಲು ರಂಗ ಮಂದಿರದಿಂದ ಹಳೇಯ ರಾಷ್ಟ್ರೀಯ ಹೆದ್ದಾರಿ 48 ರ ಬಿ.ಎಂ ರಸ್ತೆ ಮಲ್ಲಾಘಟ್ಟ ಸೆರಿದಂತೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಎನ್.ಹುಚ್ಚಮಾಸ್ತಿಗೌಡ ವೃತ್ತ, ಕೆ.ಆರ್.ಎಸ್ ಅಗ್ರಹಾರದ ಮೂಲಕ ಮಲ್ಲಿಪಾಳ್ಯ ಮಾರ್ಗವಾಗಿ ಬಯಲು ರಂಗಮಂದಿರವರೆಗೆ ಓಟವನ್ನು ಆಯೋಜಿಸಲಾಗಿದ್ದು ಯುವಕ ಯುವತಿಯರು ಈ ಮ್ಯಾರಥಾನ್ ನಲ್ಲಿ ಭಾಗಿಯಾಗಬಹುದಾಗಿದ್ದು ವಿಜೇತರಿಗೆ ನಗದು ಬಹುಮಾನವನ್ನು ನಿಡಲಾಗುವುದು ಕಾರ್ಯಕ್ರಮದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗಿಯಾಗಲಿದ್ದು ಪಟ್ಟಣದ ಸಾರ್ವಜನಿಕರು ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ತಿಳಿಸಿದ್ದಾರೆ@publicnewskunigal