
ಕುಣಿಗಲ್ ಸುದ್ದಿ;-ನಾಡಪ್ರಭು ಕೆಂಪೇಗೌಡರ ಆಳ್ವಿಕೆಯ ಐತಿಹಾಸಿಕ ಪ್ರವಾಸಿತಾಣ ಹುತ್ರಿದುರ್ಗ ಬೆಟ್ಟದ ಮೇಲೆ ಭೂ ಮಾಫಿಯಾ ಕಣ್ಣು!
ಕುಣಿಗಲ್ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ನಾಡಪ್ರಭು ಕೆಂಪೇಗೌಡರ ಆಳ್ವಿಕೆಯ ಹುತ್ರಿದುರ್ಗ ಬೆಟ್ಟದ ಕೋಟೆ ಬಾಗಿಲ ಬಳಿಯಲ್ಲೆ ಕಲ್ಲು ಬಂಡೆಗಳನ್ನು ಸ್ಪೋಟಿಸಿ ಅಕ್ರಮವಾಗಿ ಮರಗಳನ್ನು ಕಡಿದಿರುವ ಘಟನೆ ನಾಡಪ್ರಭು ಕೆಂಪೇಗೌಡರ ಜಯಂತಿಯಂದೆ ನಡೆದಿದೆ ಐತಿಹಾಸಿಕ ಪ್ರವಾಸಿತಾಣದಲ್ಲಿ ಇತ್ತಿಚೇಗೆ ಪ್ರವಾಸೋದ್ಯಮದ ಇಲಾಖೆಯಿಂದ ಹಲವು ಅಭಿವೃದ್ದಿ ಕಾರ್ಯಗಳನ್ನು ಮಾಡಲಾಗಿದ್ದು ಬೆಟ್ಟಕ್ಕೆ ಬರುವ ಪ್ರವಾಸಿಗರ ಸಂಖ್ಯೆಯು ಹೆಚ್ಚಿದೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಬೆಟ್ಟದಲ್ಲಿ ಇರುವ ಭೂಮಿಗೆ ಬಂಗಾರದ ಬೆಲೆ ಬಂದಿದ್ದು ಪ್ರವಾಸಿತಾಣದಲ್ಲಿ ವಾಣಿಜ್ಯ ಬಳಕೆಗಾಗಿ ಭೂಮಿ ಖರೀದಿ ಮಾಡುತ್ತಿರುವವರ ಸಂಖ್ಯೆಯು ಹೆಚ್ಚುತ್ತಿದ್ದು ಸಧ್ಯ ಭೂಮಾಫಿಯಾದ ಕಣ್ಣು ನಾಡಪ್ರಭು ಕೆಂಪೇಗೌಡರ ಆಳ್ವಿಕೆಯ ಹುತ್ರಿದುರ್ಗ ಬೆಟ್ಟದ ಮೇಲೆ ಬಿದ್ದಿದೆ
ರಾಜ್ಯ ಸರ್ಕಾರ ಅದ್ದೂರಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಿಸಿ ಅವರ ಆಳ್ವಿಕೆಯಲ್ಲಿದ್ದ ನವ ದುರ್ಗಗಳನ್ನು ರಕ್ಷಣೆ ಮಾಡಿ ಅಭಿವೃದ್ದಿ ಪಡಿಸುವುದಾಗಿ ತಿಳಿಸಿದೆ ಆದರೆ ಕುಣಿಗಲ್ ತಾಲ್ಲೂಕಿನಲ್ಲಿರುವ ಹುತ್ರಿದುರ್ಗ ಬೆಟ್ಟದ ಮೇಲೆ ಸಧ್ಯ ಭೂಮಾಫಿಯಾದ ಕಣ್ಣು ಬಿದ್ದಿದ್ದು ತಾಲ್ಲೂಕು ಆಡಳಿತ ಜಿಲ್ಲಾಡಳಿತ ಕೂಡಲೆ ಇತ್ತ ಗಮನ ಹರಿಸಿ ಬೆಟ್ಟದಲ್ಲಿ ಅಕ್ರಮ ನಡೆಸಿರುವವರ ವಿರುದ್ದ ಕಾನೂನು ಕ್ರಮಕ್ಕೆ ಸಾರ್ವಜನಿಕರ ಆಗ್ರಹವಾಗಿದೆ ಘಟನೆ ಬಗ್ಗೆ ಹುತ್ರಿದುರ್ಗ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಮಲ್ಲೇಶ್ ಹೆಚ್.ಟಿ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪುರಾತತ್ವ ಇಲಾಖೆಯಿಂದ ಕೋಟ್ಯಂತರ ರೂಪಾಯಿ ವೇಚ್ಚದಲ್ಲಿ ಹುತ್ರಿದುರ್ಗ ಬೆಟ್ಟದ ಕೋಟೆಯ ಹೆಬ್ಬಾಗಿಲನ್ನು ಇತ್ತಿಚೇಗೆ ನವೀಕರಿಸಿ ಅಭಿವೃದ್ದಿ ಪಡಿಸಲಾಗಿದ್ದು ಈ ಸಂರಕ್ಷಿತ ಪ್ರದೇಶದಲ್ಲಿ ಇಂದಿಗೂ ಕೆಂಪೇಗೌಡರ ಕುರುಹುಗಳಿದ್ದು ಇದನ್ನು ಕಾಪಾಡುವಲ್ಲಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ವಿಫಲವಾಗಿದ್ದಾರೆ ಕಂದಾಯ ಇಲಾಖೆ.ಪುರಾತತ್ವ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು ಕೋಟೆಯ ಬಾಗಿಲ ಬಳಿಯಲ್ಲೆ ಕಲ್ಲು ಬಂಡೆಗಳನ್ನು ಸ್ಪೋಟಿಸಿ ಮರಗಿಡಗಳನ್ನು ಕಡಿದಿರುವವರ ವಿರುದ್ದ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ @publicnewskunigal