ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಭೀಕರ ರಸ್ತೆ ಅಪಘಾತ ಮಾಗಡಿ ಮೂಲದ ಒಂದೆ ಕುಟುಂಬದ ನಾಲ್ವರು ಸ್ಥಳದಲ್ಲೆ ಸಾವು!
ಕುಣಿಗಲ್ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 75ರ ಉಗಿಬಂಡಿ ರೆಸ್ಟೋರೆಂಟ್ ಸಮೀಪ ಕಾರು ಮತ್ತು ಕ್ಯಾಂಟರ್ ವಾಹನದ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಒಂದೆ ಕುಟುಂಬದ ನಾಲ್ವರು ಸಾವನ್ನಪ್ಪಿರುವ ದಾರುಣ ಘಟನೆ ಭಾನುವಾರ ರಾತ್ರಿ 8-30 ಗಂಟೆಯ ಸಮಯದಲ್ಲಿ ನಡೆದಿದೆ ಮಾಗಡಿ ಪಟ್ಟಣದ ನಿವಾಸಿಗಳಾದ ಸೀಬೇಗೌಡ ಹಾಗೂ ಪತ್ನಿ ಶೋಭ ಮಗಳು ದುಂಬಿಶ್ರೀ ಮಗ ಭಾನುಕಿರಣ್ ಗೌಡ ಸ್ಥಳದಲ್ಲೆ ಮೃತಪಟ್ಟಿರುವ ದುರ್ದೈವಿಗಳು ಕುಣಿಗಲ್ ತಾಲ್ಲೂಕಿನ ವ್ಯಾಲಿ ಶಾಲೆಯಲ್ಲಿ ಸೀಬೇಗೌಡನ ಪುತ್ರ ಭಾನುಕಿರಣ್ ಗೌಡ 8ನೇ ತರಗತಿ ಓದುತ್ತಿದ್ದ ಸೋಮವಾರ ಶಾಲೆ ಇದ್ದ ಕಾರಣ ಮಗನನ್ನು

ಹಾಸ್ಟೆಲ್ ಗೆ ಬಿಡಲು ಕುಟುಂಬ ಸಹಿತ ಭಾನುವಾರ ರಾತ್ರಿ ಮಾಗಡಿ ಕಡೆಯಿಂದ ಬರುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ 75 ರ ಮಂಗಳೂರು ಬೆಂಗಳೂರು ಹೆದ್ದಾರಿಯಲ್ಲಿ ಒನ್ ವೆ ನಲ್ಲಿ ಎದುರಿಗೆ ಬರುತ್ತಿದ್ದ ಕ್ಯಾಂಟರ್ ಹಾಗೂ ಕಾರು ನಡುವೆ ಮುಖಾ ಮುಖಿ ಡಿಕ್ಕಿ ಸಂಭವಿಸಿದ್ದು ಸ್ಥಳದಲ್ಲೆ ನಾಲ್ವರು ಸಾವನ್ನಪ್ಪಿದ್ದಾರೆ ಘಟನೆ ಸ್ಥಳಕ್ಕೆ ಕುಣಿಗಲ್ ಪಟ್ಟಣದ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಪಘಾತದ ವೇಳೆ ಹೆದ್ದಾರಿಯಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿದ್ದು ಪರಿಸ್ಥಿತಿ ತಿಳಿಗೋಳಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಡಲಾಗಿದ್ದು ಆಸ್ಪತ್ರೆಯ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ @publicnewskunigal