
ರಾಜ್ಯ ಹೆದ್ದಾರಿ 33ರ ಚಿಕ್ಕಕೆರೆಯ ಪಾರ್ಕ್ ಬಳಿ ರಸ್ತೆ ಅಪಘಾತ ದ್ವಿಚಕ್ರ ವಾಹನ ಸವಾರನಿಗೆ ಗಂಭೀರ ಗಾಯ!
ಕುಣಿಗಲ್ ತಾಲ್ಲೂಕಿನ ರಾಜ್ಯ ಹೆದ್ದಾರಿ 33ರ ಚಿಕ್ಕಕೆರೆ ಪಾರ್ಕ್ ಬಳಿ ಶನಿವಾರ ಕಾರು ಮತ್ತು ಬೈಕ್ ನಡುವೆ ಮುಖ ಮುಖಿ ಡಿಕ್ಕಿ ಸಂಭವಿಸಿ ದ್ವಿಚಕ್ರ ವಾಹನ ಸವಾರ ತರಿಕೆರೆ ಗ್ರಾಮದ ಮಹೇಶ್ (23) ಗೆ ಗಂಭೀರ ಗಾಯಗಳಾಗಿದ್ದು ಗಾಯಾಳುವನ್ನು ಕೂಡಲೆ ಸ್ಥಳಿಯರು ಕುಣಿಗಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ
ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಮಹೇಶ್ ನೆಲಮಂಗಲದ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂದಿನಂತೆ ಕೆಲಸ ಮುಗಿಸಿಕೊಂಡು ವಾಪಸ್ ತನ್ನ ದ್ವಿಚಕ್ರ ವಾಹನದಲ್ಲಿ ತರಿಕೆರೆ ಗ್ರಾಮಕ್ಕೆ ತೆರಳುವ ವೇಳೆ ರಾಜ್ಯ ಹೆದ್ದಾರಿ 33ರ ಚಿಕ್ಕ ಕೆರೆಯ ಬಳಿ ಎದುರಿಗೆ ಬರುತ್ತಿದ್ದ ಕಾರು ಏಕಾ ಏಕಿ ಬಲಕ್ಕೆ ತಿರುವು ಪಡೆದ ವೇಳೆ ಅವಘಡ ಸಂಭವಿಸಿದೆ ಅಪಘಾತದ ಬಳಿಕ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿದ್ದು ಸ್ಥಳಕ್ಕೆ ಬಂದ ಕುಣಿಗಲ್ ಪೊಲೀಸ್ ಠಾಣೆಯ ಸಿಪಿಐ ನವೀನ್‌ಗೌಡ ಹಾಗೂ ಸಿಬ್ಬಂದಿಗಳು ಅಪಘಾತದಲ್ಲಿ ಜಕಂಗೊಂಡಿದ್ದ ವಾಹನಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಿಕೊಟ್ಟರು ಘಟನೆ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ @publicnewskunigal