
ರಾಜ್ಯ ಹೆದ್ದಾರಿ 33ರ ತುಮಕೂರು ಮೈಸೂರು ರಸ್ತೆಯ ರಾಜೇಂದ್ರಪುರ ಗೇಟ್ ಬಳಿ ಅವೈಜ್ಞಾನಿಕ ಟೋಲ್ ಸಂಗ್ರಹ ನಿಲ್ಲಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರಸ್ತೆ ತಡೆದು ಪ್ರತಿಭಟನೆ!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ರಾಜ್ಯ ಹೆದ್ದಾರಿ 33ರ ರಾಜೇಂದ್ರಪುರ ಗೇಟ್ ಬಳಿ ನಿರ್ಮಾಣವಾಗಿರುವ ಅವೈಜ್ಞಾನಿಕ ಟೋಲ್ ಸಂಗ್ರಹವನ್ನು ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಯೋಗೇಶ್ ಗೌಡ ನೇತೃತ್ವದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು ಈ ವೇಳೆ ಸ್ಥಳಕ್ಕೆ ಆಗಮಿಸಿದ ಕೆ.ಆರ್.ಡಿ.ಸಿ.ಎಲ್ ನ ಸಹಾಯಕ ಅಭಿಯಂತರರಾದ ಹರಿಣಿಕುಮಾರಿ ರವರನ್ನು ತರಾಟೆಗೆ ತೆಗೆದುಕೊಂಡ ಹೊರಾಟಗಾರರು ಅಪಘಾತ ವಲಯದಲ್ಲಿ ಟೋಲ್ ನಿರ್ಮಾಣ ಮಾಡಿ ವಾಹನ ಸವಾರರಿಗೆ ಕನಿಷ್ಟ ಮೂಲಭೂತ ಸೌಕರ್ಯ ಕಲ್ಪಿಸದೆ ಟೋಲ್ ಸಂಗ್ರಹಕ್ಕೆ ಮುಂದಾಗಿದ್ದಿರ ಟೋಲ್ ಬಳಿ
ಸರ್ವೀಸ್ ರಸ್ತೆ ಇಲ್ಲ ಅವೈಜ್ಞಾನಿಕ ರೀತಿಯಲ್ಲಿ ರಸ್ತೆಗೆ ಉಬ್ಬುಗಳನ್ನು ನಿರ್ಮಿಸಲಾಗಿದೆ ಸರಿಯಾದ ವ್ಯವಸ್ಥೆ ಇಲ್ಲದಿದ್ದರು ಸಹ ಟೋಲ್ ಸಂಗ್ರಹ ಏಕೆ ಮಾಡುತ್ತಿದ್ದಿರ ಟೋಲ್ ಬಳಿ ಶೌಚಾಲಯ ವಿಶ್ರಾಂತಿ ಕೊಠಡಿ ತುರ್ತು ವಾಹದ ವ್ಯವಸ್ಥೆ ಇಲ್ಲ ಟೋಲ್ ಇರುವ ಬಗ್ಗೆ ರಸ್ತೆ ಬದಿಯಲ್ಲಿ ನಾಮ ಫಲಕ ಅಳವಡಿಸಿಲ್ಲ ಸ್ಥಳಿಯ ವಾಹನಗಳಿಗೆ ವಿನಾಯಿತಿ ಇಲ್ಲದೆ ಅವರ ಬಳಿಯು ಹಣ ವಸೂಲಿ ಮಾಡಲಾಗುತ್ತಿದೆ ಸಸ್ಥಳೀಯ ಗ್ರಾಮ ಪಂಚಾಯಿತಿಯಲ್ಲು ಯಾವುದೆ ಅನುಮತಿ ಪಡೆದಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಟೋಲ್ ಬಳಿ ವಾಹನ ಸವಾರರಿಗೆ ಮೂಲಭೂಲ ಸೌಕರ್ಯ ಕಲ್ಪಿಸುವ ವರೆಗೆ ಟೋಲ್ ನಲ್ಲಿ ಹಣ ಸಂಗ್ರಹ ಸಂಪೂರ್ಣವಾಗಿ ನಿಲ್ಲಿಸುವಂತೆ ಹೊರಾಟಗಾರರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು ಈ ವೇಳೆ ಕೆಲಕಾಲ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು ಸ್ಥಳಕ್ಕಾಗಮಿಸಿದ ಅಮೃೃತೂರು ವೃತ್ತ ನಿರೀಕ್ಷಕ ಮಾಧ್ಯನಾಯಕ್ಹುಲಿಯೂರುದುರ್ಗ ಪಿಎಸ್ಐ ಪ್ರಶಾಂತ್ ಹಾಗೂ ಪೊಲೀಸರ ತಂಡ ಹೊರಾಟಗಾರರ ಮನವೊಲಿಸಿ ರಸ್ತೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಕಲ್ಪಿಸಿ ವಾಹನ ದಟ್ಟಣೆ ನಿಯಂತ್ರಸಿದರು ಬಳಿಕ ಕೆ.ಆರ್.ಡಿ.ಸಿ.ಎಲ್ ನ ಸಹಾಯಕ ಅಭಿಯಂತರರಾದ ಹರಿಣಿಕುಮಾರಿ ಮಾತನಾಡಿ ಟೋಲ್ ಬಳಿ ಸರ್ವಿಸ್ ರಸ್ತೆ ಹಾಗೂ ಮೂಲಸೌಕರ್ಯ ಕಲ್ಪಿಸುವ ವರೆಗೆ ತಾತ್ಕಾಲಿಕವಾಗಿ ಟೋಲ್ ಸಂಗ್ರಹ ನಿಲ್ಲಿಸಲಾಗುವುದು ಎಂದರು ಬಳಿಕ ಪ್ರತಿಭಟನೆ ಕೈಬಿಟ್ಟ ಹೊರಾಟಗಾರರು ಅಧಿಕಾರಿಗಳಿಗೆ ಟೋಲ್ ಸಮಸ್ಯೆ ಕುರಿತು ಮನವಿ ಪತ್ರ ಸಲ್ಲಿಸಿದರು ಈ ವೇಳೆ ಪಿಡಿಒ ಮಧುಸೂದನ್ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಎ ಜಯರಾಮಯ್ಯ.ರೈತ ಮುಖಂಡರಾದ ಶಿವಲಿಂಗಯ್ಯ. ನಿಡಸಾಲೆ ಪ್ರಸಾದ್.ರಾಜಶೇಖರ್.ಸಿಂಗ್ರಿಗೌಡ.ಶಿವಲಿಂಗು.ನಾಗರಾಜು.ಶಿವಕುಮಾರ.ಚಂದ್ರಯ್ಯ.ಸೆರಿದಂತೆ ಹಲವವರು ಈ ವೇಳೆ ಉಪಸ್ಥಿತರಿದ್ದರು @publicnewskunigal